ಚಟುವಟಿಕೆಗಳು

ಚಟುವಟಿಕೆಗಳು

  • ಪುಸ್ತಕಗಳ ಪ್ರಕಟಣೆ:
  • ಕೊಡವ ಅರ್ಥಕೋಶ `ಕೊಡವ ಅರಿವೋಲೆ’ಯನ್ನು ಜನವರಿ ೧೯, ೨೦೧೭ರಂದು ಲೋಕಾರ್ಪಣೆಯನ್ನು ಮಾಡಲಾಯಿತು.  
  • ಡಾ. ಎಂ.ಜಿ. ನಾಗರಾಜರವರ ‘ಕೆಂಬಟ್ಟಿ ಸಮುದಾಯ ಸಂಸ್ಕೃತಿ’ ಕೃತಿಯನ್ನು ಫೆಬ್ರವರಿ ೧೨, ೨೦೧೮ರಂದು ಮಡಿಕೇರಿಯ ಎಫ್.ಎಂ.ಕೆ.ಎA.ಸಿ. ಕಾಲೇಜಿನಲ್ಲಿ ಬಿಡುಗಡೆಗೊಳಿಸಲಾಯಿತು. 
  • ಕೊಡವ ಡಿಪ್ಲೋಮ ಕೋರ್ಸ್: ಕೊಡವ ಡಿಪ್ಲೋಮ ಕೋರ್ಸ್ಗಳಿಗೆ ಸಂಬAಧಿಸಿದAತೆ ಈಗಾಗಲೇ ಸಂಪನ್ಮೂಲ ವ್ಯಕ್ತಿಗಳಿಂದ ಪಠ್ಯಪುಸ್ತಕವನ್ನು ತಯಾರು ಮಾಡಲಾಗಿದೆ. 
  • ಕೊಡವ ಪೀಠದ ಪತ್ರಾಗಾರ: ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಸಹಾಯಕವಾಗುವಂತೆ ಕೊಡಗು ಸಂಬAಧಿ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲು  ಕೊಡಗಿನ ಐತಿಹಾಸಿಕ ದಾಖಲೆಗಳನ್ನು  ಹಾಗೂ ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸುವುದರ  ಮೂಲಕ  ಪೀಠದಲ್ಲಿ ಪತ್ರಾಗಾರವನ್ನು ತೆರೆಯಲಾಗಿದೆ. 
  • ಪ್ರಚಾರೋಪನ್ಯಾಸ ಕಾರ್ಯಕ್ರಮಗಳು: ಕೊಡಗಿನ ಇತಿಹಾಸ, ಸಂಸ್ಕೃತಿ, ಭಾಷೆ, ಸಾಹಿತ್ಯ ಜಾನಪದ ಇತ್ಯಾದಿ ಅಂಶಗಳಿಗೆ ಸಂಬAಧಿಸಿದAತೆ ಜನರಲ್ಲಿ ಅರಿವು ಮೂಡಿಸುವ ಹಾಗೂ ಕೊಡವ ಪೀಠದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಶಾಲಾಕಾಲೇಜುಗಳಲ್ಲಿ ಪ್ರತಿವರ್ಷ  ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಕೊಡವ ಪೀಠವು ಹಮ್ಮಿಕೊಳ್ಳುತ್ತಿದೆ. 
  • ವಿಚಾರ ಸಂಕಿರಣ; ‘ಕೊಡಗು: ಐತಿಹಾಸಿಕ ಅನುಭವ ಹಾಗೂ ಸಮಕಾಲೀನ ಪರಿಸ್ಥಿತಿ’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಮಡಿಕೇರಿಯ ಎಫ್.ಎಂ.ಕೆ.ಎA.ಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.