Gandhian Study Centre

ಪರಿಚಯ:

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಾಂಧೀವಾದಿ ಅಧ್ಯಯನ ಕೇಂದ್ರವನ್ನು ೨೦೦೫ರಲ್ಲಿ ಸ್ಥಾಪಿಸಲಾಯಿತು. ಯುಜಿಸಿಯ ಹತ್ತನೇ ಆಯೋಗದ ಯುಗ ನಿರ್ಮಾಣ ಯೋಜನೆಯ ಅಡಿಯಲ್ಲಿ ಇದನ್ನು ಅನುಮೋದಿಸಲಾಯಿತು. ಕೇಂದ್ರವು ಯುಜಿಸಿಯ ಆರ್ಥಿಕ ಬೆಂಬಲದೊAದಿಗೆ ಕಾರ್ಯವನ್ನು ನಿರ್ವಹಿಸುತ್ತಿದೆ. 
ಗಾಂಧಿಯ ಕುರಿತು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕೇಂದ್ರವು ಶಾಲೆ ಮತ್ತು ಕಾಲೇಜುಗಳೊಂದಿಗೆ ಸೇರಿಕೊಂಡು ಈ ಕಾರ್ಯವನ್ನು ನಿರ್ವಹಿಸುತ್ತಿದೆ. ಗಾಂಧೀವಾದಿ ಮೌಲ್ಯಗಳಾದ ಶಾಂತಿ ಮತ್ತು ಸಾಮರಸ್ಯವನ್ನು ಯುವ ಮನಸ್ಸುಗಳಿಗೆ ತಲುಪಿಸಿ ಆ ಮೂಲಕ ಅವುಗಳನ್ನು ಅಳವಡಿಸಿಕೊಳ್ಳುವಂತೆ ಯುವ ಮನಸ್ಸುಗಳನ್ನು ಪ್ರೇರೇಪಿಸುವುದೇ ಇದರ ಉದ್ದೇಶವಾಗಿದೆ. ಇದು ವಿಶ್ವವಿದ್ಯಾನಿಲಯದ ಹೊರಗೆ ಅಂದರೆ ವಿಶೇಷವಾಗಿ ಶಾಲೆಗಳು ಮತ್ತು ಬಿ.ಎಡ್ ಕಾಲೇಜುಗಳಲ್ಲಿ ಗಾಂಧಿಯವರ ಜೀವನ ಮತ್ತು ಧ್ಯೇಯವನ್ನು ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

 

ಸಿಬ್ಬಂದಿಗಳು:

Prof. P. L. Dharma

ಪ್ರೊ. ಪಿ. ಎಲ್. ಧರ್ಮ

ನಿರ್ದೇಶಕರು (ಹೆಚ್ಚುವರಿ ಜವಾಬ್ದಾರಿ)

ಸಂಶೋಧನ ಸಹಾಯಕರು: ಕುಮಾರಿ ಆಶಾಲತಾ ಪಿ.