Kannada

Department of Kannada

ಪರಿಚಯ

                      ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಗಸAಸ್ಥೆಯಾಗಿ, ಕನ್ನಡದ ಸ್ನಾತಕೋತ್ತರ ಕೇಂದ್ರವಾಗಿ ಆರಂಭಗೊAಡ ಕನ್ನಡ ವಿಭಾಗವು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಭಾಗವಾಗಿ ಬೆಳೆದಿದೆ. ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದ ಇಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ, ಪ್ರೊ. ಜಿ. ವರದರಾಜ ರಾವ್, ಡಾ. ಗುಂಡ್ಮಿ ಚಂದ್ರಶೇಖರ ಐತಾಳ್, ಪ್ರೊ. ಹೆಚ್. ಜಿ. ಲಕ್ಕಪ್ಪ ಗೌಡ, ಪ್ರೊ. ಶ್ರೀನಿವಾಸ ಹಾವನೂರ್ ಮತ್ತು ಪ್ರೊ. ಬಿ. ಎ. ವಿವೇಕ ರೈ ಮೊದಲಾದವರು ಈ ಸಂಸ್ಥೆಗೆ ಅಪಾರವಾದ ಕೊಡುಗೆಯನ್ನು ನೀಡುವ ಮೂಲಕ ವಿಭಾಗದ ಬೆಳವಣಿಗೆಯಲ್ಲಿ ತಮ್ಮ ಅಪಾರ ಪರಿಶ್ರಮವನ್ನು ವಹಿಸಿ ಸಂಸ್ಥೆಯ ವಾಸ್ತುಶಿಲ್ಪಿಗಳೂ ಆಗಿದ್ದಾರೆ. ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲಿ ವಿಭಾಗದ ಗ್ರಂಥಾಲಯ, ಅರ್ಕೈವ್ ಸೆಲ್, ಮಾಹಿತಿ ವಿಭಾಗ, ರೆಕಾರ್ಡಿಂಗ್ ಸ್ಟುಡಿಯೋ ಮತ್ತು ಕಂಪ್ಯೂಟರ್ ಲ್ಯಾಬ್‌ಗಳು ಸೇರಿವೆ. ಶತಮಾನಗಳಷ್ಟು ಹಳೆಯದಾದ ಅಪರೂಪದ ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳು, ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲಾಗಿದೆ. ಸಂಸ್ಕೃತಿ ಇಲಾಖೆ, ಸಂರಕ್ಷಣೆ ಮತ್ತು ಪ್ರಕಟಣೆಗಾಗಿ ರಾಷ್ಟಿçÃಯ ದಾಖಲೆಗಳು ಮತ್ತು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದಂತಹ ಸಂಸ್ಥೆಗಳು ನೀಡಿದ ವಿಶೇಷ ಹಣಕಾಸಿನ ನೆರವಿನಿಂದಾಗಿ ಈ ಸಂಗ್ರಹ ಸಾಧ್ಯವಾಗಿದೆ. ಹೆಚ್ಚು ಮೆಚ್ಚುಗೆ ಪಡೆದ ಪ್ರಕಟಣೆಗಳಲ್ಲಿ ಶ್ರೀ ಭಾಗವತೋ (ತುಳು ಮಹಾಕಾವ್ಯ), ಕಡೆಂಗೋಡ್ಲು ಶಂಕರಭಟ್ಟ ಅವರ ಅಪ್ರಕಟಿತ ಬರಹಗಳು, ಕನ್ನಡ ಕಾದಂಬರಿಗಳ ಆರಂಭಿಕ ಹಂತ, ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ನಾಣ್ಣುಡಿಗಳು, ಪ್ರಾಚೀನ ಯಕ್ಷಗಾನ ಕೃತಿಗಳ ಸಂಕಲನ, ಕರಾವಳಿ ಕರ್ನಾಟಕ ಕೃತಿಗಳ ಪ್ರಬಂಧಗಳು, ಕರಾವಳಿ ಕರ್ನಾಟಕದ ಸಣ್ಣಕತೆಗಳು, ಕನ್ನಡ ಪತ್ರಿಕೆಗಳು ಸಂಪಾದಕೀಯಗಳ ಪ್ರಸ್ತುತತೆ ಇತ್ಯಾದಿ.
 
ಪ್ರಸ್ತುತ ಈ ಸಂಸ್ಥೆಯು ಕರ್ನಾಟಕ ಧನಸಹಾಯ ಪೆಡೆದ ನಾಲ್ಕು ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಅವುಗಳೆಂದರೆ:
೧. ಪ್ರಾದೇಶೀಕ ಭಾಷೆಗಳು
೨. ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಾಂಸ್ಕೃತಿಕ ಪದಕೋಶ
೩. ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಆರಾಧನೆಗಳು ಮತ್ತು ಸಂಪ್ರದಾಯಗಳು
೪. ಸಂಘಟನೆಗಳು ಮತ್ತು ಚಳುವಳಿಗಳು ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳು

ದೃಷ್ಟಿ:

೧. ಅತ್ಯುತ್ತಮ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸೌಲಭ್ಯಗಳು
೨. ಕಲಿಕೆ ಮತ್ತು ಸಂಶೋಧನೆಯಲ್ಲಿ ಗುಣಮಟ್ಟದ ಶಿಕ್ಷಣ
೩. ಪ್ರಾದೇಶಿಕ ಭಾಷೆಗಳು, ಜಾನಪದ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದು.
೪. ಸಾಂಪ್ರದಾಯಿಕತೆಗಳನ್ನು ಮೀರಿ ಸಾಹಿತ್ಯವನ್ನು ಅಧ್ಯಯನ ಮಾಡಿ ಅದನ್ನು ಒಂದು ಜ್ಞಾನ ವ್ಯವಸ್ಥೆಯನ್ನಾಗಿ ರೂಪಿಸುವುದು.
೫. ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಸೃಜನಾತ್ಮಕವಾಗಿ ವರ್ತಿಸುವ ವಾತಾವರಣವನ್ನು ಒದಗಿಸುವುದು.

ಸಂಸ್ಥೆಯ ಬಗ್ಗೆ:

ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯು ಕನ್ನಡ ಎಂ.ಎ ಮತ್ತು ಪಿಹೆಚ್.ಡಿ ಪದವಿಯನ್ನು ನೀಡುತ್ತಿದೆ. ಇದು ಸ್ಥಳೀಯ ಸಂಸ್ಕೃತಿಗಳು ಮತ್ತು ಭಾಷೆಗಳ ಅಧ್ಯಯನಕ್ಕೆ ಒತ್ತನ್ನು ನೀಡಿದೆ. ವಿಭಾಗದ ಅಧ್ಯಾಪಕರು ಕೇವಲ ಸಾಂಪ್ರದಾಯಿಕ ಸಾಹಿತ್ಯ ಅಧ್ಯಯನಗಳಲ್ಲಿ ಮಾತ್ರವಲ್ಲದೆ ಜಾನಪದ, ಸಂಸ್ಕೃತಿ ಮತ್ತು ಜನಾಂಗೀಯ ಅಧ್ಯಯನಗಳಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ. ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮಂಗಳಗAಗೋತ್ರಿಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದಾಗ ಈ ವಿಭಾಗವನ್ನೂ ಆರಂಭಿಸಲಾಯಿತು. ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಸಂಸ್ಥಾಪಕ ಪ್ರಾಧ್ಯಾಪಕರಾಗಿ ಅಧಿಕಾರವನ್ನು ವಹಿಸಿಕೊಂಡರು. ಅವರ ನಂತರ ೧೯೭೩ರಿಂದ ೮೦ರ ಅವಧಿಯಲ್ಲಿ ಪ್ರೊ. ಜಿ. ವರದರಾಜರಾವ್ ಅವರು ಅಧಿಕಾರವನ್ನು ವಹಿಸಿಕೊಂಡರು. ಅವರ ನಂತರ  ಡಾ. ಗುಂಡ್ಮಿ ಚಂದ್ರಶೇಖರ ಐತಾಳ್, ಪ್ರೊ. ಹೆಚ್. ಜಿ. ಲಕ್ಕಪ್ಪ ಗೌಡ, ಪ್ರೊ. ಶ್ರೀನಿವಾಸ ಹಾವನೂರ್ ಮತ್ತು ಪ್ರೊ. ಬಿ. ಎ. ವಿವೇಕ ರೈ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಕೇಂದ್ರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾರ್ಗದರ್ಶನವನ್ನು ನೀಡಿದರು.೪೫ ವರ್ಷಗಳಷ್ಟು ಹಳೆಯದಾದ ಈ ಸಂಸ್ಥೆಯಲ್ಲಿ ದೊಡ್ಡದಾದ ವರ್ಗ ಕೊಠಡಿಗಳು, ವಿಭಾಗ ಗ್ರಂಥಾಲಯ ಮತ್ತು ೨೦ ಕಂಪ್ಯೂಟರಗಳಿದ್ದು, ಸುಸಜ್ಜಿತ ಸ್ಟುಡಿಯೋ ಮತ್ತು ಹೋಮ್ ಥಿಯೇಟರ್‌ಗಳಿವೆ. ಅಲ್ಲದೆ ರೆಕಾರ್ಡಿಂಗ್ ಸ್ಟುಡಿಯೋ ಕೂಡ ಇಲ್ಲಿದೆ. ವಿಭಾಗದ ಗ್ರಂಥಾಲಯದಲ್ಲಿ ವಿವಿಧ ದಾನಿಗಳು ಕೊಡುಗೆಯಾಗಿ ನೀಡಿದ ಪುಸ್ತಕಗಳು ಮಾತ್ರವಲ್ಲದೆ ತಾಳೆಗರಿಗಳ ಅಪರೂಪದ ಸಂಗ್ರಹವೂ ಇದೆ. ಇಲ್ಲಿ ೨೦ನೇ ಶತಮಾನದ ಅಪರೂಪದ ಪತ್ರಿಕೆಗಳು ಮತ್ತು ನಿಯತಕಾಲಿಕಗಳಾದ ಸ್ವದೇಶಾಭಿಮಾನಿ, ನವಯುಗ, ಸುಹಾಸಿನಿ, ಶ್ರೀಕೃಷ್ಣ ಸೂಕ್ತಿ, ವಸಂತ, ಜೀವನ ಮೊದಲಾದವುಗಳ ಸಂಗ್ರಹವಿದೆ. ಎಂ.ಎ ಹಾಗೂ ಪಿಹೆಚ್.ಡಿ ಪ್ರಬಂಧಗಳ ಸಂಗ್ರಹವೂ ಇಲ್ಲಿದ್ದು, ಇವುಗಳು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಸಂಶೋಧಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತವೆ.
ಈ ಸಂಸ್ಥೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ, ಕನಕದಾಸ ಅಧ್ಯಯನ ಕೇಂದ್ರ ಮುಂತಾದ ವಿವಿಧ ಪೀಠಗಳಿವೆ. ಅಲ್ಲದೆ ಕೊಡವ ಸಂಸ್ಕೃತಿ ಅಧ್ಯಯನ ಪೀಠ, ಅಂಬಿಗರ ಚೌಡಯ್ಯ ಅಧ್ಯಯನ ಪೀಠಗಳು ಇಲ್ಲಿದ್ದು, ವಿದ್ಯಾರ್ಥಿಗಳಿಗೆ ಈ ಬಗ್ಗೆ ಓದು ಹಾಗೂ ಆಸಕ್ತಿಯನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗಿವೆ. ಆಸಕ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜೊತೆಯಾಗಿ ಈ ಪ್ರದೇಶದ ಆರಾಧನೆ ಮತ್ತು ಸಂಸ್ಕೃತಿಗೆ ಸಂಬAಧಿಸಿದAತೆ ಇರುವ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂರಕ್ಷಿಸಿ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಿದ್ದಾರೆ. ಡಾ. ದಯಾನಂದ ಪೈ ಶ್ರೀ ಸತೀಶ್ ಪೈ ಯಕ್ಷಗಾನ ಕೇಂದ್ರವನ್ನೂ ವಿಭಾಗದ ಅಧ್ಯಾಪಕರ ನಿರ್ದೇಶನದಲ್ಲಿ ನಡೆಸಲಾಗುತ್ತಿದೆ.

ವಿಳಾಸ:

ಅಧ್ಯಕ್ಷರು
ಕನ್ನಡ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗAಗೋತ್ರಿ – ೫೭೪೧೯೯
ದೂರವಾಣಿ: +೯೧-೮೨೪-೨೨೮೭೩೬೦
ಮಿಂಚಂಚೆ: kannada@mangaloreuniversity.ac.in