Social Work

Department of Social Work

ಸಮಾಜಕಾರ್ಯ ಅಧ್ಯಯನ ವಿಭಾಗ

ಸಮಾಜಶಾಸ್ತ್ರ ಮಾತೃ ವಿಭಾಗದ ಅಂಗವಾಗಿ ಸಮಾಜಕಾರ್ಯ ಅಧ್ಯಯನ ವಿಭಾಗವನ್ನು 2003ರಲ್ಲಿ ಪ್ರಾರಂಭಿಸಲಾಯಿತು. ಸಮಾಜದಲ್ಲಿನ ವೈವಿಧ್ಯಮಯ ಸ್ವಭಾವದ ಜನರೊಂದಿಗೆ ವ್ಯವಹರಿಸಲು ಅಗತ್ಯವಾದ ಕೌಶಲ್ಯಗಳು, ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಅವರನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸುತ್ತದೆ. ವಿವಿಧ ಜನಾಂಗ ಪಂಗಡಗಳ ಸಾಂಸ್ಕೃತಿಕ ಅಧ್ಯಯನಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಾದ ಅರಿವು, ಜಾಣ್ಮೆಗಳನ್ನು ಇಲ್ಲಿ ವಿದ್ಯಾರ್ಥಿಗಳು ಹೊಂದುತ್ತಾರೆ. ತಮ್ಮ ಪೂರ್ಣ ಸಾಮಥ್ಯವನ್ನು ಸಾಧಿಸಲು ಅಡೆತಡೆಯುಳ್ಳ ಜನರಿಗೆ ಸಲಹೆ ನೀಡಲು ಮತ್ತು ಪ್ರಾಯೋಗಿಕ ಸಮಯೋಜನೆಗಳು ಹಾಗು ಪ್ರಾಯೋಗಿಕ ತಂತ್ರಗಳ ಮೇಲೆ ಪರಿಣಾಮ ಬೀರುವ ವೈಯಕ್ತಿಕ, ಕೌಟುಂಬಿಕ ಮತ್ತು ಪರಿಸರದ ಅಂಶಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲು ವಿದ್ಯಾರ್ಥಿಗಳು ಕಲಿಯುತ್ತಾರೆ.
2016ರ ಏಪ್ರಿಲ್ 25ರಂದು ಕುಲಪತಿಗಳು ಒಪ್ಪಿಗೆ ನೀಡಿದ ನಂತರ ವಿಶ್ವವಿದ್ಯಾನಿಲಯದ ಅಧಿಸೂಚನೆಯ ಅನ್ವಯ ಅಕ್ಟೋಬರ್ 1, 2016ರಂದು ಈ ವಿಭಾಗವನ್ನು ಪೂರ್ಣಪ್ರಮಾಣದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವಾಗಿ ನವೀಕರಿಸಿ, ಇಲಾಖಾ ಸ್ಥಾನಮಾನವನ್ನು ನೀಡಲಾಗಿದೆ.

ದರ್ಶಣ:              

  • ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟುವ ಮತ್ತು ನಿವಾರಿಸುವ ಕ್ರಿಯೆಯಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದಿಂದ ಪಡೆದ ಜ್ಞಾನವನ್ನು ಅನ್ವಯಿಸುವುದು.
  • ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕೆ ಸಂಬAಧಿಸಿದ ಮೌಲ್ಯವನ್ನು ಪ್ರಚಾರಪಡಿಸುವುದು.
  • ಎಲ್ಲಾ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಘನತೆಯನ್ನು ಮತ್ತು ಸಾಧನೆಯನ್ನು ಗೌರವಿಸುವ ಸಮಾಜಕ್ಕಾಗಿ ಶೈಕ್ಷಣಿಕ, ಸಂಶೋಧನೆ ಮತ್ತು ಸಾರ್ವಜನಿಕ ಸೇವಾ ಚಟುವಟಿಕೆಗಳ ಮೂಲಕ ಸಮಕಾಲೀನ ಸಮಾಜದ ಸಂಕೀರ್ಣತೆಗಳನ್ನು ಗುರುತಿಸುವುದು.

ವಿಭಾಗದ ಕುರಿತು:

2003ರಿಂದ ವಿಭಾಗವು ಸಮುದಾಯ ಅಭಿವೃದ್ಧಿ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಮಾಜಕಾರ್ಯ, ಸಿಬ್ಬಂದಿ ನಿರ್ವಹಣೆ, ಕೈಗಾರಿಕಾ ಸಂಬAಧಗಳು ಎಂಬ ನಾಲ್ಕು ವಿಶೇಷ ವಿಷಯಗಳೊಂದಿಗೆ ಅಪರಾಧಶಾಸ್ತ್ರ ಮತ್ತು ಕರೆಕ್ಷನಲ್ ಅಡ್ಮಿನಿಸ್ಟೆçÃಷನ್ ವಿಷಯಗಳಲ್ಲಿ ಸಮಾಜಕಾರ್ಯ ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. 2010-11ನೇ ಸಾಲಿನಿಂದ ವಿಭಾಗವು ಆಯ್ಕೆ ಆಧಾರಿತ ಮೌಲ್ಯಾಂಕನ ಪದ್ಧತಿಯನ್ನು ಪ್ರಾರಂಭಿಸಿದ್ದು ಇದರ ಅನ್ವಯ ಬೇರೆ ಅಧ್ಯಯನ ವಿಭಾಗಗಳ ವಿದ್ಯಾರ್ಥಿಗಳು ಸಮಾಜಕಾರ್ಯವನ್ನೂ, ಸಮಾಜಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಬೇರೆ ಅಧ್ಯಯನ ವಿಭಾಗಗಳನ್ನು ತಮ್ಮ ಇಚ್ಛೆಯನುಸಾರ ಆಯ್ದುಕೊಳ್ಳಬಹುದಾಗಿದೆ. ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲು ಪರಿಶ್ರಮಪೂರ್ವಕವಾದ ಪಠ್ಯಕ್ರಮವನ್ನು ವಿನ್ಯಾಗೊಳಿಸಲಾಗಿದೆ. ಪಿಹೆಚ್‌ಡಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಕ್ಷೇತ್ರಕಾರ್ಯದಲ್ಲಿ ಸರ್ಕಾರೇತರ ಸಂಘ-ಸಂಸ್ಥೆಗಳ ಸಲಹೆ-ಸಹಕಾರ ಪಡೆಯುತ್ತವೆ.
ಆಯ್ಕೆ ಆಧಾರಿತ ಮೌಲ್ಯಾಂಕನ ಪದ್ಧತಿಯಡಿ 2016-17ನೇ ಸಾಲಿನಲ್ಲಿ ಹೊಸ ಪಠ್ಯಕ್ರಮವನ್ನು ಇಲಾಖೆ ಸಂಯೋಜಿಸಿ ವಿನ್ಯಾಸಗೊಳಿಸಿದೆ. ಹೊಸ ಪಠ್ಯಕ್ರಮಮದ ಅನ್ವಯ ವಾರಕ್ಕೆ ನಾಲ್ಕು ದಿನಗಳ ತರಗತಿಗಳು ಮತ್ತು ಸರಕಾರೇತರ ಸಂಘಸಂಸ್ಥೆಗಳು, ಆಸ್ಪತ್ರೆಗಳು, ಏಜನ್ಸಿಗಳಲ್ಲಿ, ಗ್ರಾಮ ಪಂಚಾಯಿತಿ, ಅಂಗನವಾಡಿ, ಶಾಲೆ ಇತ್ಯಾದಿಗಳಲ್ಲಿ ಎರಡು ದಿನಗಳ ಏಕಕಾಲೀನ ಕ್ಷೇತ್ರಕಾರ್ಯವನ್ನು ಕೈಗೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಠಿಣ ವೃತ್ತಿಪರ ತರಬೇತಿಯ ಭಾಗವಾಗಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಬಲಪಡಿಸಲು ವಿವಿಧ ಕಾರ್ಯಾಗಾರಗಳ ಮೂಲಕ ಜಾಗೃತಿ ಕಾರ್ಯಕ್ರಮ, ಶೈಕ್ಷಣಿಕ ಸಂವಾದ, ಶೈಕ್ಷಣಿಕ ಪ್ರವಾಸ, ಗ್ರಾಮೀಣ ಪರಿಸರದಲ್ಲಿ, ಬುಡಕಟ್ಟು ಪರಿಸರದಲ್ಲಿ ಶಿಬಿರಗಳಲ್ಲಿ ಭಾಗವಹಿಸುವಂತಹ ಪೂರಕ ಪಠ್ಯ ಚಟುವಟಿಕೆಗಳು ಪರಿಷ್ಕೃತ ಮತ್ತು ವರ್ಧಿತ ಪಠ್ಯಕ್ರಮದ ಭಾಗವಾಗಿವೆ.
ಸಮುದಾಯ ವಿಸ್ತರಣಾ ಕಾರ್ಯಕ್ರಮದಡಿಯಲ್ಲಿ ವಿಭಾಗವು ಸಮಾಜದ ಹಿಂದುಳಿದ ವರ್ಗದವರಿಗೆ ಸಹಾಯ ನೀಡುತ್ತದೆ. ಸಾಮುದಾಯಿಕ ಸೇವೆ ಹಾಗೂ ಸಾಮಾಜಿಕ ಕಾರ್ಯ ಕೌಶಲ್ಯವರ್ಧನೆ ಕ್ಷೇತ್ರದಲ್ಲಿ ನೈಜ ಜೀವನದ ಅನುಭವಕ್ಕೆ ವಿದ್ಯಾರ್ಥಿಗಳನ್ನು ಒಳಪಡಿಸುತ್ತದೆ.

ನಮ್ಮನ್ನು ಸಂಪರ್ಕಿಸಿ

ಅಧ್ಯಕ್ಷರು,
ಸಮಾಜಕಾರ್ಯ ಅಧ್ಯಯನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574199.
ದೂರವಾಣಿ: 0824-2287621

ಮಿಂಚಂಚೆ:msw@mangaloreuniversity.ac.in, pauleeda@hotmail.com