Sociology

Department of Sociology

ಸಮಾಜಶಾಸ್ತ್ರ ಅಧ್ಯಯನ ವಿಭಾಗ

ಮಂಗಳೂರಿನ ಪರಿಸರದಲ್ಲಿ ಸಾಮಾಜಿಕ ಅಧ್ಯಯನವನ್ನು ಪರಿಚಯಿಸುವ ಉದ್ದೇಶದಿಂದ 1980ರಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗವು ಆರಂಭವಾಗಿದೆ. ಪ್ರಸ್ತುತ ವಿಭಾಗವು 5 ಬೋಧಕರನ್ನು (1 ಪ್ರಾಧ್ಯಾಪಕ, 2- ಸಹ ಪ್ರಾಧ್ಯಾಪಕರು ಮತ್ತು 2 ಸಹಾಯಕ ಪ್ರಾಧ್ಯಾಪಕರು) ಹೊಂದಿದೆ.
ವಿಭಾಗದಿಂದ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂ.ಎ ಪದವಿಯನ್ನೂ, 17 ವಿದ್ಯಾರ್ಥಿಗಳು ಎಂ.ಫಿಲ್ ಪದವಿಯನ್ನೂ, 37 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿಯನ್ನೂ ಪಡೆದಿದ್ದು, ಪ್ರಸ್ತುತ 17 ಮಂದಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ನಮ್ಮ ವಿಭಾಗದ ಹಳೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕಾಲೇಜುಗಳಲ್ಲಿ, ಸರಕಾರೇತರ ಸಂಘ-ಸಂಸ್ಥೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ ವಿಭಾಗವು ಹಲವು ಪ್ರಖ್ಯಾತ ಸಮಾಜಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರ ವಿಜ್ಞಾನಿಗಳನ್ನು ಉಪನ್ಯಾಸಕ್ಕಾಗಿ ಆಹ್ವಾನಿಸಿದೆ. ಖ್ಯಾತ ಸಮಾಜಶಾಸ್ತ್ರಜ್ಞರಾದ ಪ್ರೊ. ಜಿ. ಎನ್. ರಾಮು, ಪ್ರೊ. ಎ. ಆರ್. ದೇಸಾಯಿ, ಪ್ರೊ. ಎಂ. ಎನ್. ಶ್ರೀನಿವಾಸ್, ಪ್ರೊ. ಟಿ. ಕೆ. ಒಮ್ಮನ್, ಪ್ರೊ. ಧನಗರೆ, ಪ್ರೊ. ಅಸ್ಘರ್ ಅಲಿ ಇಂಜಿನಿಯರ್, ಪ್ರೊ. ರತ್ನ ನಾಯ್ಡು, ಪ್ರೊ. ಸಿ. ರಾಜಗೋಪಾಲನ್, ಪ್ರೊ. ಉತ್ತಮ್ ಭೋತೆ, ಪ್ರೊ. ಎನ್. ಜಯರಾಮ್, ಪ್ರೊ. ಎ. ಇ. ಪುನೀತ್, ಪ್ರೊ. ಅನುರಾಧಾ ಭೋತೆ, ಪ್ರೊ. ಸತ್ಯನಾರಾಯಣ, ಮತ್ತು ಪ್ರೊ. ಜೋಗದಂಡ್ ಮುಂತಾದವರು ನಮ್ಮ ಸಮಾಜಶಾಸ್ತ್ರ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿದ್ದಾರೆ.
 

ದರ್ಶನ:

ವ್ಯಕ್ತಿಗಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸಿ, ಸಮಾಜಕ್ಕೆ ಅಗತ್ಯವಿರುವ ಸೇವೆ ಸಲ್ಲಿಸಲು ಮತ್ತು ಸಮಾಜವನ್ನು ಬೃಹತ್ ಮಟ್ಟದಲ್ಲಿ ಒಳಗೊಳ್ಳಲು ಸಹಾಯಕವಾಗುವಂತಹ ಕೆಲಸ ಮಾಡಲು ಪ್ರೇರಣೆ ನೀಡುವುದು.
 

ಧ್ಯೇಯೋದ್ದೇಶ:

ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಸ್ಟೇಕ್ ಹೋಲ್ಡರ್‌ಗಳಿಗೆ ಸಾಮಾಜಿಕವಾಗಿ ನ್ಯಾಯಯುತ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಅದ್ಭುತ ಭವಿಷ್ಯವನ್ನು ಸೃಷ್ಟಿಸುವುದು. ಆಧುನಿಕ ಜ್ಞಾನಶಿಸ್ತುಗಳಿಗೆ ಕೊಡುಗೆ ನೀಡುವಂತೆ ಅವರನ್ನು ರೂಪಿಸುವುದು.
• ಶ್ರೇಷ್ಠತೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡುವ ಮೂಲಕ ವಿಶ್ವದರ್ಜೆಯ ಬೋಧನೆ ವಿದ್ಯಾರ್ಥಿವೇತನ ಮತ್ತಿತರ ಸೇವೆಗಳನ್ನು ಒದಗಿಸುವುದು.
• ಸಾಮಾಜಿಕ ನೀತಿ ಮತ್ತು ಯೋಜನೆಗಳಿಗೆ ಒತ್ತು ನೀಡುವ ರೀತಿಯಲ್ಲಿ ಪಠ್ಯಕ್ರಮ ರಚನೆ ಮತ್ತು ಪರಿಷ್ಕರಣೆ
• ಸಾಮಾಜಿಕ ಉದ್ಯಮಶೀಲತೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಹೊಸ ಕೋರ್ಸ್ಗಳು ಮತ್ತು ಪಠ್ಯಕ್ರಮದಲ್ಲಿ ಹೊಸ ಪತ್ರಿಕೆಗಳನ್ನು ಪರಿಚಯಿಸುವುದು.
• ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ನೀತಿ ಮತ್ತು ಸಾಮಾಜಿಕ ಯೋಜನೆಗಳಿಗಾಗಿ ಮಾನವ ಸಂಪನ್ಮೂಲವನ್ನು ಸಮರ್ಥರಾಗುವಂತೆ ಸಿದ್ಧಗೊಳಿಸುವುದು.
 

ನಮ್ಮನ್ನು ಸಂಪರ್ಕಿಸಿ

ಅಧ್ಯಕ್ಷರು
ಸಮಾಜಶಾಸ್ತ್ರವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ

ಮಿಂಚಂಚೆsociology@mangaloreuniversity.ac.in

ದೂರವಾಣಿ: +91 – 824 – 2287374 (O)