SPARSH

ಸ್ಪರ್ಶ್(SPARSH)

(ಲೈಂಗಿಕ ಕಿರುಕುಳದ ಸೂಕ್ಷ್ಮತೆಯ ಅರಿವು, ತಡೆಗಟ್ಟುವಿಕೆ ಮತ್ತು ಪರಿಹಾರ)

(Sensitization, Prevention & Redress of Sexual Harassment)

 

ಸಮಿತಿಯು ವಿಶ್ವವಿದ್ಯಾನಿಲಯ ನೀಡಿದ ಆಡಳಿತ ರಚನೆಯ ಮೂಲಕ ಕರ‍್ಯನರ‍್ವಹಿಸುತ್ತಿದೆ. ವಿಭಾಗಗಳ ಸೂಚನಾ ಫಲಕ, ವಿಶ್ವವಿದ್ಯಾನಿಲಯದ ಕಚೇರಿಗಳು ಮತ್ತು ಇತರ ಕೇಂದ್ರಗಳಲ್ಲಿ ಕರಪತ್ರಗಳನ್ನು ಪ್ರದರ್ಶಿಸುವ ಮೂಲಕ ಕೋಶದ ಅಸ್ತಿತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕ್ಯಾಂಪಸ್‌ನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಉಪನ್ಯಾಸಗಳು ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ಪರಿಹಾರದ ಸಾಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ಸಮಿತಿಯು ಅಧ್ಯಕ್ಷರು, ಬೋಧಕೇತರ ಮಹಿಳಾ ಪ್ರತಿನಿಧಿ, ಎಸ್ಸಿ / ಎಸ್ಟಿ ಮಹಿಳಾ ಪ್ರತಿನಿಧಿ, ಬೋಧಕ ಪ್ರತಿನಿಧಿ, ಮಹಿಳಾ ಪ್ರಾಧ್ಯಾಪಕ ಸದಸ್ಯರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರತಿನಿಧಿಗಳು, ಎನ್‌ಜಿಒ ಪ್ರತಿನಿಧಿ ಮತ್ತು ಕಾನೂನು ಸಲಹೆಗಾರರನ್ನು ಒಳಗೊಂಡಿದೆ.
ಆಂತರಿಕ ದೂರುಗಳ ಸಮಿತಿಯೂ ಇದೆ - ಐಸಿಸಿ ನಾಲ್ಕು ಸದಸ್ಯರನ್ನು ಒಳಗೊಂಡಿರುತ್ತದೆ, ಅವರೆಂದರೆ, ಅಧ್ಯಕ್ಷರು, ಇಬ್ಬರು ಮಹಿಳಾ ಪ್ರಾ ಧ್ಯಾಪಕರು ಮತ್ತು ಕಾನೂನು ಸಲಹೆಗಾರ, ಇವರು ಸ್ಪರ್ಶ್ಗೆ ಬರುವ ದೂರುಗಳನ್ನು ಪರಿಶೀಲಿಸುವರು.