Student Welfare

ವಿದ್ಯಾರ್ಥಿ ಕಲ್ಯಾಣ

ಡಿಎಸ್ಡಬ್ಲ್ಯೂ ವಿವಿಯ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಇದು ವಿದ್ಯಾರ್ಥಿಗಳ ಮೇಲ್ವಿಚಾರಣೆಯೊಂದಿಗೆ ಅವರ ಪಠ್ಯೇತರ ಚಟುವಟಿಕೆಗಳನ್ನೂ ಪ್ರೋತ್ಸಾಹಿಸುತ್ತದೆ. ಡಿಎಸ್ಡಬ್ಲ್ಯೂ ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಸಮಗ್ರತೆಯನ್ನು ಮೂಡಿಸಲು ಪ್ರಯತ್ನಿಸುತ್ತದೆ.

 

ಇಲಾಖೆಯ ಬಗ್ಗೆ

ಇದು ವಿಶ್ವವಿದ್ಯಾಲಯದೊಂದಿಗೆ ಆರಂಭವಾಯಿತು. ಆದರೆ ಆರಂಭದಲ್ಲಿ ಆಡಳಿತಾಧಿಕಾರಿ ಇದನ್ನು ನಿರ್ವಹಿಸುತ್ತಿದ್ದರು. 1992ರಿಂದ ಈ ಕೇಂದ್ರವು ನಿರ್ದೇಶಕರಿಂದ ನಿರ್ವಹಿಸಲ್ಪಡುತ್ತಿದೆ.

 

ವಿದ್ಯಾರ್ಥಿ ಸಾಧನೆಗಳು

ಕೇಂದ್ರವು ಎಲ್ಲಾ ಹಂತಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ನಮ್ಮ ವಿದ್ಯಾರ್ಥಿಗಳು 2014-15ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

 

ಇದಕ್ಕೂ ಮೊದಲು, ನಮ್ಮ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ. ಅದರಲ್ಲೂ ಪ್ರಮುಖವಾಗಿ 2011-12, 2012-13 ಮತ್ತು 2013-14ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.