VC's Message

ಕುಲಪತಿಗಳ ಸಂದೇಶ

ನಾನು ನಮ್ಮ ವಿಶ್ವವಿದ್ಯಾನಿಲಯವನ್ನು ನಿಮ್ಮ ಮುಂದೆ ತೆರೆದಿಡಲು ಸಂತೋಷಪಡುತ್ತೇನೆ ಮತ್ತು ವಿಶ್ವವಿದ್ಯಾನಿಲಯದ ಪ್ರಗತಿಯಲ್ಲಿ ಪಾಲುದಾರರಾಗಿ ತೊಡಗಿಸಿಕೊಳ್ಳಲು ನಿಮ್ಮನ್ನು ಸ್ವಾಗತಿಸುತ್ತೇನೆ. ಕಳೆದ ೩೬ ವರ್ಷಗಳಲ್ಲಿ ವಿಶ್ವವಿದ್ಯಾನಿಲಯವು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿರುವುದು ಮಾತ್ರವಲ್ಲದೆ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತು ನ್ಯಾಕ್‌ನಿಂದ `ಎ’ ಶ್ರೇಣಿಯನ್ನು ಪಡೆದುಕೊಂಡ ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಕೇವಲ ೪ ವಿಭಾಗಗಳೊಂದಿಗೆ ಆರಂಭವಾದ ನಮ್ಮ ವಿಶ್ವವಿದ್ಯಾನಿಲಯವು ಇಂದು ೨೬ ವಿಭಾಗಗಳನ್ನು ಹೊಂದಿದ್ದು, ಅವುಗಳು ೩೭ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ. ಇದರೊಂದಿಗೆ ೨೯ ವಿಷಯಗಳಲ್ಲಿ ಪಿಹೆಚ್.ಡಿಯನ್ನು, ಜೊತೆಗೆ ೨೧೦ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳನ್ನು ಇದು ಹೊಂದಿದೆ. ನಮ್ಮ ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಕಾರ್ಯಗಳು ಮತ್ತು ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ ನಡೆಸುವ ಮೂಲಕ ಹೆಸರುವಾಸಿಯಾಗಿದೆ. ಪದವಿಗಳಿಗೆ ಕ್ರೆಡಿಟ್ ಆಧಾರಿತ ಸೆಮಿಸ್ಟರ್ ವ್ಯವಸ್ಥೆ ಮತ್ತು ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್‌ಗಳು) ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಆಧಾರಿತ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಅತ್ಯುತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದುವ ಬಗ್ಗೆ ನಮ್ಮ ವಿಶ್ವವಿದ್ಯಾನಿಲಯವು ಸದಾ ಪ್ರಥಮ ಆದ್ಯತೆಯನ್ನು ನೀಡುತ್ತದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಲಭ್ಯವಿರುವ ಮೂಲಸೌಕರ್ಯಗಳೆಂದರೆ ಆಡಳಿತ ಕಟ್ಟಡ, ಬೋಧಕವರ್ಗದ ಕಟ್ಟಡಗಳು, ಗ್ರಂಥಾಲಯ, ವಿದ್ಯಾರ್ಥಿ

ವಸತಿನಿಲಯಗಳು, ಶಿಕ್ಷಕರ ವಸತಿಗೃಹಗಳು, ಅತಿಥಿಗೃಹ, ಸುಸಜ್ಜಿತ ಹೊರರೋಗಿ ಆರೋಗ್ಯಕೇಂದ್ರ, ೪೦೦ಮೀ ಟ್ರ್ಯಾಕ್ ಮತ್ತು ಒಳಾಂಗಣ ಆಟಗಳ ಸಂಕೀರ್ಣವೂ ಸೇರಿದಂತೆ ಕ್ರೀಡಾ ಸೌಲಭ್ಯವನ್ನೂ ಹೊಂದಿದೆ. ಮಂಗಳ ಸಭಾಂಗಣವು ಎಲ್ಲ ರೀತಿಯ ಕಲಾ ಪರಿಕರಗಳೊಂದಿಗೆ ನಾನಾ ರೀತಿಯ ಸಣ್ಣ ಹಾಗೂ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲು ಸಹಕಾರಿಯಾಗಿದೆ. ವಿಶ್ವದ್ಯಾನಿಲಯವು ತನ್ನದೇ ಆದ ನೀರಿನ ಸೌಲಭ್ಯವನ್ನೂ ಹೊಂದಿದೆ. ಇದರೊಂದಿಗೆ ಇನ್ನಿತರ ಸೌಲಭ್ಯಗಳಾದ ಬ್ಯಾಂಕಿAಗ್, ಸೈಬರ್ ಕೇಂದ್ರ, ಇನ್‌ಫ್ಲಿಬ್‌ನೆಟ್ ಮತ್ತು ಅಂಚೆ ವ್ಯವಸ್ಥೆಗಳನ್ನು ಹೊಂದಿದೆ.
                 ೧ ಜಿಬಿಪಿಎಸ್ ಅಂತರ್ಜಾಲ ಸಂಪರ್ಕದ ವ್ಯವಸ್ಥೆಯನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ೨೪*೭ ವೈಫೈ ಸಂಪರ್ಕವನ್ನು ಬಳಸಿಕೊಳ್ಳಬಹುದಾಗಿದೆ. ಎಲ್ಲ ಕಛೇರಿಗಳು ಗಣಕೀಕೃತಗೊಂಡಿದ್ದು, ವಿಶ್ವವಿದ್ಯಾನಿಲಯದಲ್ಲಿ ಇ-ಆಡಳಿತಕ್ಕೆ ಮಹತ್ವವನ್ನೂ ನೀಡಲಾಗಿದೆ. ಎಲ್ಲ ಬೋಧಕರಿಗೂ ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದ್ದು ಈ ಮೂಲಕ ಅವರು ತಮ್ಮ ಪಾಠಪ್ರವಚನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನೂ ಕಲ್ಪಿಸಲಾಗಿದೆ. ನಮ್ಮ ಬೋಧಕ ವರ್ಗದವರು ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರಚುರಪಡಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯವು ರಾಸಾಯನಿಕ ವಿಜ್ಞಾನ ಸಂಶೋಧನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಸ್‌ಸಿಒಪಿಯುಎಸ್ ಸಹಕಾರದೊಂದಿಗೆ ಮೊದಲ ಸ್ಥಾನದಲ್ಲಿದೆ. ಇದು ಪೀರ್ ರಿವ್ಯೂಡ್ ಸಾಹಿತ್ಯ ಮತ್ತು ಗುಣಮಟ್ಟದ ವೆಬ್ ಮೂಲಗಳ ಅತಿದೊಡ್ಡ ಮೂರ್ತ ಮತ್ತು ಉಲ್ಲೇಖಿತ ಡೇಟಾಬೇಸ್ ಆಗಿದೆ. ದೇಶದ ೫೦ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳೂರು

ವಿಶ್ವವಿದ್ಯಾನಿಲಯವು ೨೪ನೇ ಸ್ಥಾನದಲ್ಲಿದೆ. ನಾವು  ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡ ರಾಷ್ರ್ಟ್ರೀಯ  ಸಂಶೋಧನಾ ಕೇಂದ್ರಗಳಾದ ಮೈಕ್ರೊಟ್ರಾನ್, ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋ ಐಸೊಟೋಪ್ ಮತ್ತು ವಿಕಿರಣ ತಂತ್ರಜ್ಞಾನ (ಸಿಎಆರ್‌ಆರ್‌ಟಿ), ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಇನ್ ಎನ್ವಿರಾನ್‌ಮೆಂಟಲ್ ರೇಡಿಯೋ ಆಕ್ಟಿವಿಟಿ (ಸಿಎಆರ್‌ಆರ್), ಓಷಿಯನ್ ಆಂಡ್ ಅಟ್ಮಾಸ್ಪಿಯರಿಕ್ ಸೈನ್ಸ್ ಆಂಡ್ ಟೆಕ್ನಾಲಜಿ ಸೆಲ್(ಒಎಎಸ್‌ಟಿಸಿ)ಗಳನ್ನು ಹೊಂದಿದ್ದೇವೆ. ಅತ್ಯಾಧುನಿಕ ಸಂಶೋಧನಾ ಸಾಧನಗಳನ್ನು ಕ್ಯಾಂಪಸ್‌ನಲ್ಲಿರುವ ಯುಎಸ್‌ಐಸಿ ಮತ್ತು ಪಿಯುಆರ್‌ಎಸ್‌ಇ ಪ್ರಯೋಗಾಲಯಗಳಲ್ಲಿ ಇರಿಸಲಾಗಿದೆ. ಅನೇಕ ವಿಭಾಗಗಳು ಮತ್ತು ಬೋಧಕರು ಅವರ ಪ್ರಯೋಗಾಲಯಗಳಲ್ಲಿ ಉತ್ತಮ ಸಂಶೋಧನಾ ಉಪಕರಣಗಳನ್ನು ಹೊಂದಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯದ ಸಂಶೋಧನಾ ಕಾರ್ಯಕ್ರಮಗಳನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಸಂಶೋಧನಾ ಮತ್ತು ಪ್ರಚಾರ ಕೋಶವನ್ನು (ಆರ್‌ಸಿಪಿಸಿ) ರಚಿಸಲಾಗಿದೆ. ಬೋಧಕವರ್ಗವು ತಮ್ಮ ಪರಿಣತಿಯ ಕ್ಷೇತ್ರದಲ್ಲಿ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಲಹಾ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ ಎಂದೂ ಭಾವಿಸಲಾಗಿದೆ. ವಿಶ್ವವಿದ್ಯಾನಿಲಯ-ಕೈಗಾರಿಕಾ ಸಂವಹನಗಳನ್ನು ಬಲಪಡಿಸಲಾಗಿದೆ ಮತ್ತು ಕೈಗಾರಿಕೆಗಳ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಕಾಯೃಕ್ರಮಗಳನ್ನು ಆರಂಭಿಸಲು ವಿಶ್ವವಿದ್ಯಾನಿಲಯವು ಪ್ರಸ್ತಾಪಿಸಿದೆ. ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ೨ ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮತ್ತು ಬೋಧನೆ ಮತ್ತು

ಸಂಶೋಧನೆಗೆ ಅಗತ್ಯವಾದ ೨೯೩ ಜರ್ನಲ್‌ಗಳ ವ್ಯಾಪಕ ಸಂಗ್ರಹವಿದೆ. ಇ-ಸಂಪನ್ಮೂಲಗಳಿಗಾಗಿ ಇದು ಯುಜಿಸಿ- ಇನ್‌ಫೋನೆಟ್‌ನೊಂದಿಗೆ ಸಂಪರ್ಕವನ್ನು ಹೊಂದಿದೆ. ಶೋಧಗಂಗಾ ಯೋಜನೆಯಡಿಯಲ್ಲಿ ಕೃತಿಚೌರ್ಯವನ್ನು ತಡೆಯುವ ಉದ್ದೇಶದಿಂದ ಗ್ರಂಥಾಲಯದಲ್ಲಿ ಕೃತಿಚೌರ್ಯವನ್ನು ಪತ್ತೆ ಹಚ್ಚುವ ತಂತ್ರಾಂಶವನ್ನೂ ಸ್ಥಾಪಿಸಲಾಗಿದೆ. ಮಾಹಿತಿ ಕಿಯೋಸ್ಕ್ ಮತ್ತು ಪ್ರದರ್ಶನಗಳೊಂದಿಗೆ ವಿಶ್ವವಿದ್ಯಾನಿಲಯವು ಹೊಸ ಕ್ರಿಯಾತ್ಮಕ ಮತ್ತು ಸಂವೇದನಾತ್ಮಕ ವೆಬ್-ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಸಾವಯವ-ಕಾಂಪೋಸ್ಟ್ ಘಟಕವನ್ನು ಸ್ಥಾಪಿಸಲಾಗಿದೆ. ತ್ಯಾಜ್ಯ ನೀರನ್ನು ನೀರಿನ ಸಂಸ್ಕರಣಾ ಘಟಕದ ಮೂಲಕ ಬಳಸಿಕೊಳ್ಳುವ ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆ ನೀರಿನ ಕೊಯ್ಲನ್ನೂ ಕೂಡ ಅಳವಡಿಸಲಾಗಿದೆ. ವಿಶ್ವವಿದ್ಯಾನಿಲಯದ ಆವರಣವನ್ನು ಆವರಣದ ಸ್ವಚ್ಛತೆ ಮತ್ತು ಕಟ್ಟಡಗಳ ನವೀಕರಣದ ಮೂಲಕ ಮತ್ತಷ್ಟು ಆಕರ್ಷಕಗೊಳಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಇತರರಿಗೆ ಸುರಕ್ಷೆ ಮತ್ತು ಸುರಕ್ಷಿತ ಪರಿಸರವನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾನಿಲಯದ ಆವರಣದೊಳಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕಾವೇರಿ ಅತಿಥಿಗೃಹದಲ್ಲಿ ಹೊಸ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಸಮಾಜದೊಂದಿಗೆ ಸಂಪರ್ಕ ವನ್ನು ಬಲಪಡಿಸಲು ವಿಶ್ವವಿದ್ಯಾನಿಲಯವು ಗ್ರಾಮ ದತ್ತು ಕಾರ್ಯಕ್ರಮಗಳ ಮೂಲಕ ವಿಸ್ತರಣಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ. ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ವಿಶ್ವದರ್ಜೆಯ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಮತ್ತು ಕೊಡಗು ಜಿಲ್ಲೆಯ ಚಿಕ್ಕಅಳುವಾರದ ಹೊಸ ಸ್ನಾತಕೋತ್ತರ ಕೇಂದ್ರದಲ್ಲಿ ಹೆಚ್ಚಿನ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಎನ್‌ಆರ್‌ಡಿಸಿ ಸಹಾಯದಿಂದ ಇನ್ನೋವೇಶನ್ ಫೆಸಿಲಿಟೇಶನ್ ಸೆಂಟರ್ ಸ್ಥಾಪಿಸಲು ವಿಶ್ವವಿದ್ಯಾನಿಲಯವು ಪ್ರಸ್ತಾಪಿಸಿದೆ. ವಿಶ್ವವಿದ್ಯಾನಿಲಯ-ಕೈಗಾರಿಕಾ ಸಂವಹನ, ಎನ್‌ಎಸ್‌ಎಸ್ ಮೂಲಕ ವಿಸ್ತರಣಾ ಚಟುವಟಿಕೆಗಳು ಮತ್ತು ವಿವಿಧ ದತ್ತಿ ಪೀಠಗಳು ಮತ್ತು ಅಧ್ಯಯನ ಕೇಂದ್ರಗಳು ಸೇರಿದಂತೆ ಹಲವು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾನಿಲಯವು ಕರಾವಳಿ ಮತ್ತು ಕೊಡಗಿನ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕವನ್ನೂ ಹೊಂದಿದೆ. ಸರ್ಕಾರೇತರ ಸಂಸ್ಥೆಗಳು ಮತ್ತು ಸ್ಥಳೀಯ ಜನರನ್ನು ಒಳಗೊಳ್ಳುವ ಮೂಲಕ `ಸ್ವಚ್ಛ ಭಾರತ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ. ನಮ್ಮ ಘಟಕ ಕಾಲೇಜುಗಳಾದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನ್ಯಾಕ್‌ನಿಂದ `ಎ’ ಗ್ರೇಡ್ ಮಾನ್ಯತೆಯನ್ನೂ ಪಡೆದಿವೆ. ಅವರು ಅಲ್ಲಿನ ಸಾಮಾಜಿಕ ಪ್ರದೇಶದ ಅವಶ್ಯಕತೆಗಳಿಗೆ ಅನುಗುಣವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನೂ ಅಳವಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರವೂ ಅತ್ಯುತ್ತವಾಗಿ ಕಾರ್ಯ ನಿರ್ವಹಿಸುವ ಮೂಲಕ ಸ್ನಾತಕೋತ್ತರ ಮತ್ತು ಸಂಶೋಧನಾ ಅಧ್ಯಯನಗಳಿಗೆ ವಿಶ್ವವಿದ್ಯಾನಿಲಯಕ್ಕೆ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ವಿಶ್ವವಿದ್ಯಾನಿಲಯವು ಪ್ರತಿಭಾನಿವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗಾಗಿ ಅನೇಕ ದತ್ತಿ ವಿದ್ಯಾರ್ಥಿವೇತನಗಳಿವೆ. ಇದರೊಂದಿಗೆ ವಿಶ್ವವಿದ್ಯಾನಿಲಯವು ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳಿಗೆ ಕ್ರೀಡಾ ವಿದ್ಯಾರ್ಥಿವೇತನವನ್ನೂ ಪರಿಚಯಿಸಿದೆ. ಅಲ್ಲದೆ,

ಹೊಸ ದಾಖಲೆಗಳನ್ನು ಮಾಡುವ ಮತ್ತು ಅಂತರ್ ವಿಶ್ವವಿದ್ಯಾನಿಲಯ ಸ್ಪರ್ಧೆಗಳಲ್ಲಿ ವೈಯಕ್ತಿಕ ಪದಕಗಳನ್ನು ಗೆಲ್ಲುವ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಯೋಜನೆ ಅತ್ಯುತ್ತಮ ವಿಶ್ವವಿದ್ಯಾನಿಲಯ ಪ್ರಶಸ್ತಿ ೨೦೧೩-೧೪ನ್ನು ಭಾರತದ ರಾಷ್ಟ್ರಪತಿಗಳಿಂದ ಪಡೆದಿದೆ. ವಿಶ್ವವಿದ್ಯಾನಿಲಯದ ಕೆಲವು ಕ್ರೀಡಾಪಟುಗಳು  ರಾಷ್ಟ್ರ ಮಟ್ಟದಲ್ಲಿ ಸಾಧನೆಯನ್ನೂ ಮಾಡಿದ್ದಾರೆ. ಪ್ರವೇಶಾತಿ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಸಂಪೂರ್ಣವಾಗಿ ಗಣಕೀಕೃತಗೊಂಡಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತ  ಸಿಬ್ಬಂದಿ ಮತ್ತು ವಿಶ್ವವಿದ್ಯಾನಿಲಯದ ಅಧಿಕಾರಿಗಳ ಸಕ್ರಿಯ ಬೆಂಬಲದೊಂದಿಗೆ ಕಲಿಕೆಗೆ ಅನುಕೂಲವಾಗಿರುವ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ವಿಶ್ವವಿದ್ಯಾನಿಲಯವು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ರಾಷ್ರ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸುವುದರೊಂದಿಗೆ ಉನ್ನತ ಸ್ಥಾನಕ್ಕೆ ಏರುತ್ತದೆ ಮತ್ತು ವಿಶ್ವದ ಇತರ ಭಾಗಗಳಿಂದಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

 

ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

ಕುಲಪತಿಗಳು