About and Objective of the Centre

Kanakadasa Research Centre

ಪೀಠಿಕೆ: 

                   ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯಲ್ಲಿ ಕನಕದಾಸರದು ಅನನ್ಯವಾದ ಸ್ಥಾನ. ದಾರ್ಶನಿಕರಾಗಿ ಮತ್ತು ಸಾಮಾಜಿಕ ಚಿಂತಕರಾಗಿ ಸಮಕಾಲೀನ ಕರ್ನಾಟಕದ ಚರಿತ್ರೆಯಲ್ಲಿ ಕನಕದಾಸರು ಮಹತ್ವಪೂರ್ಣವಾದ ಪ್ರಭಾವವನ್ನು ಬೀರಿರುತ್ತಾರೆ. ಹದಿನಾರನೇ ಶತಮಾನದವರಾದರೂ ಕನಕದಾಸರ ಸಾಹಿತ್ಯಿಕ ಅಭಿವ್ಯಕ್ತಿ ಮತ್ತು ಸಾಮಾಜಿಕ  ಕಾಳಜಿಗಳು ನಮ್ಮ ಕಾಲದ ಈ ಹೊತ್ತಿನಲ್ಲೂ ಹೊಸ ಅರ್ಥಗಳನ್ನು ಪಡೆಯುತ್ತಿರುತ್ತವೆ. ಕನಕದಾಸರ ಚಿಂತನೆಗಳು ಈ ಕಾಲಕ್ಕೂ ಸಂಗತವಾದ ಕಾರಣದಿಂದ ಕನಕದಾಸರ ಬದುಕು ಮತ್ತು ಬರೆಹಗಳ ಅಧ್ಯಯನ ಮತ್ತು ಪ್ರಸರಣದ ಉದ್ದೇಶದಲ್ಲಿ ಕರ್ನಾಟಕ ಸರಕಾರ ೨೦೦೩ರಲ್ಲಿ ಕನಕದಾಸ ಅಧ್ಯಯನ ಪೀಠ ಹಾಗೂ ೨೦೦೮ರಲ್ಲಿ ಕನಕದಾಸ ಸಂಶೋಧನ ಕೇಂದ್ರವನ್ನು ಸ್ಥಾಪಿಸಿದೆ.  ಕಳೆದ ಹದಿನೈದು ವರ್ಷಗಳಿಂದೀಚೆಗೆ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನ ಕೇಂದ್ರ ಕನಕದಾಸರು ಪ್ರತಿನಿಧಿಸುತ್ತಿದ್ದ ಸಾಮಾಜಿಕ ಚಿಂತನೆ ಮತ್ತು ಕಾಳಜಿಗಳನ್ನು ಪಸರಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶದಿಂದ ವೈವಿಧ್ಯಮಯವಾಗಿರುವ ಹಲವಾರು ಚಟುವಟಿಕೆಗಳನ್ನು ವಿಭಿನ್ನ ನೆಲೆಗಳಲ್ಲಿ ನಡೆಸಿಕೊಂಡು ಬರುತ್ತಿದೆ. 
            ಕನಕದಾಸರ ತತ್ತ÷್ವಚಿಂತನೆಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಆಶಯದಲ್ಲಿ ‘ಕನಕ ಚಿಂತನ’ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಕನಕದಾಸರ ಬದುಕು, ಚಿಂತನೆ, ದಾಸ-ಸೂಫಿ ಪಂಥ ಹಾಗೂ ಕನಕದಾಸರ ಕೃತಿಗಳಾದ ರಾಮಧಾನ್ಯಚರಿತೆ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಹಾಗೂ ಕೀರ್ತನೆಗಳ ಜೊತೆಗೆ ಕನಕದಾಸರನ್ನು ಕಾಡಿದ ಕುಲ, ದೇಗುಲ, ಆಹಾರ, ಭಕ್ತಿ, ಅಧ್ಯಾತ್ಮ ಮುಂತಾದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಗತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಮಕಾಲೀನ ಸಂವಾದದ ನೆಲೆಯಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲದೆ, ಹೊರರಾಜ್ಯಗಳ ಕಣ್ಣೂರು, ಚೆನ್ನೆöÊ, ಮುಂಬೈ, ಕುಪ್ಪಂ, ಹೈದರಾಬಾದ್, ಈ ಮುಂತಾದ ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಅಲ್ಲಿಯ ಸಂಯೋಜಿತ ಕಾಲೇಜು, ಪದವಿ ಪೂರ್ವ ಕಾಲೇಜು ಹಾಗೂ ಇತರ ಸಾರ್ವಜನಿಕ ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ಈವರೆಗೆ ಒಟ್ಟು ೧೯೬ ಪ್ರಚಾರೋಪನ್ಯಾಸಗಳನ್ನು ನೆರವೇರಿಸಿದೆ.
ಕನಕದಾಸರ ತತ್ವಪದಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಪ್ರಚಾರಪಡಿಸುವ ನಿಟ್ಟಿನಲ್ಲಿ, ಸಾಮುದಾಯಿಕ ಪಾಲ್ಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸುವ ‘ಕನಕ ಕೀರ್ತನ’ ಮತ್ತು ‘ಕನಕ ಗಂಗೋತ್ರಿ’ ಎಂಬ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮವನ್ನು ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಾರ್ವಜನಿಕ ಮಟ್ಟದಲ್ಲಿ  ವಿಶ್ವವಿದ್ಯಾನಿಲಯ ಹಾಗೂ ಅವುಗಳ ಸಂಯೋಜಿತ ಕಾಲೇಜು  ಹಾಗೂ ಇತರ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮಗಳಲ್ಲಿ  ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತವರ್ಗ ಹಾಗೂ ಸಾರ್ವಜನಿಕರು ಯಾವುದೇ ಭೇದಭಾವವಿಲ್ಲದೆ ಪಾಲ್ಗೊಳ್ಳುವಂತೆ ಅವಕಾಶವನ್ನು ಕಲ್ಪಿಸುವ ಉದ್ದೇಶದಲ್ಲಿ ಈ ಕಾರ್ಯಕ್ರಮಗಳನ್ನು ನಿರಂತರವಾಗಿ ಏರ್ಪಡಿಸಲಾಗುತ್ತಿದೆ. `ಕನಕ ಕೀರ್ತನ’  ಕಾರ್ಯಕ್ರಮದಲ್ಲಿ ಈವರೆಗೆ ಒಟ್ಟು ೧೨ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಮತ್ತು `ಕನಕ ಗಂಗೋತ್ರಿ’ ಗಾಯನ ಕಾರ್ಯಕ್ರಮದಲ್ಲಿ ಈವರೆಗೆ ಒಟ್ಟು ೧೩ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ‘ಕನಕ ಕೀರ್ತನ’ ಮತ್ತು ‘ಕನಕ ಗಂಗೋತ್ರಿ’ ಕಾರ್ಯಕ್ರಮಗಳಲ್ಲಿ ಆಯ್ಕೆಯಾದ ಆಯ್ದ ಅಭ್ಯರ್ಥಿಗಳಿಂದ ಕನಕದಾಸರ ಕೀರ್ತನೆಗಳ ಪ್ರಸ್ತುತಿ ಹಾಗೂ  ಕನಕದಾಸರ ತತ್ತ÷್ವ ಚಿಂತನೆ ಮತ್ತು ಅವರು ಪ್ರತಿಪಾದಿಸಿರುವ ಸಾಮಾಜಿಕ ಮೌಲ್ಯಗಳ ಕುರಿತಂತೆ ಹಾಗೂ ಈಗಲೂ ಕಾಡುತ್ತಿರುವ ಸಾಮಾಜಿಕ ಬಿಕ್ಕಟ್ಟುಗಳ ಕುರಿತಂತೆ ನಾಡಿನ ಖ್ಯಾತ ವಿದ್ವಾಂಸರಿAದ `ಕನಕ ಸ್ಮೃತಿ’ ಎಂಬ ವಿಶೇಷ ಉಪನ್ಯಾಸವನ್ನು ವರ್ಷಾಂತ್ಯದಲ್ಲಿ ಏರ್ಪಡಿಸಲಾಗುತ್ತಿದ್ದು, ಇದರ ಜೊತೆಗೆ ಕನಕ ಪುರಸ್ಕಾರವನ್ನು ನೀಡಲಾಗುತ್ತಿದೆ.   ಈವರೆಗೆ ಒಟ್ಟು ೧೦ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
‘ಕನಕ ಸಂವಾದ’ ಕಾರ್ಯಕ್ರಮದಲ್ಲಿ ಕನಕ ಮತ್ತು ಭಕ್ತಿ ಚಳುವಳಿಗೆ ಸಂಬAಧಪಟ್ಟAತೆ ೨೦೦೪-೨೦೦೫ ನೇ ಸಾಲಿನಲ್ಲಿ ‘ಕನಕ ಸಾಹಿತ್ಯ : ಸಾಂಸ್ಕೃತಿಕ ಮರು ಓದು’ ಎಂಬ ವಿಷಯದ ಕುರಿತು ಎರಡು ದಿವಸಗಳ ವಿಚಾರ ಸಂಕಿರಣ   ಮತ್ತು ೨೦೧೦-೨೦೧೧ನೇ ಸಾಲಿನಲ್ಲಿ ‘ಕನಕನ ಸುತ್ತಮುತ್ತ : ಸಂಕಥನಗಳ ಜಿಜ್ಞಾಸೆ’ ಎಂಬ ವಿಷಯದ ಕುರಿತು ಮೂರು ದಿವಸಗಳ ವಿಚಾರ ಸಂಕಿರಣ ಹಾಗೂ ೨೦೧೩-೨೦೧೪ನೇ ಸಾಲಿನಲ್ಲಿ ‘Rethinking Bhakthi’ ಎಂಬ ವಿಷಯದ ಕುರಿತು ನಾಲ್ಕು ದಿವಸಗಳ ವಿಶ್ವ ಸಂವಾದ ಸಂಕಿರಣವನ್ನು ಏರ್ಪಡಿಸಿದೆ.  
 
ಕನಕ ಪ್ರಸರಣ ಯೋಜನೆಯಲ್ಲಿ ಕನಕ ಅಧ್ಯಯನ ಮಾಲಿಕೆ-೦೬, ಕನಕ ಸಂಶೋಧನ ಮಾಲಿಕೆ-೦೨, ಕನಕ ಚಿಂತನ ಪ್ರಚಾರೋನ್ಯಾಸ ಮಾಲಿಕೆ-೮, ಕನಕ ಆವರ್ತನ ಕಾರ್ಯಕ್ರಮ ಮಾಲಿಕೆ-೩, ಕನಕ ಸಂವಾದ ಮಾಲಿಕೆ-೩ ಮತ್ತು ಕನಕ ಮರುಮುದ್ರಣ ಮಾಲಿಕೆ-೫ ರಲ್ಲಿ ಕನಕದಾಸರ ಕೃತಿಗಳನ್ನು ಪ್ರಕಟಿಸುವ ಮತ್ತು ಪ್ರಸರಣಗೊಳಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. 
೨೦೧೨-೧೩ ಮತ್ತು ೨೦೧೩-೧೪ರ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಕನಕದಾಸ ಅಧ್ಯಯನ ಪೀಠದ ದಶಮಾನೋತ್ಸವದ ಸಂಭ್ರಮದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪೀಠದ ಎಲ್ಲಾ ಕಾರ್ಯಕ್ರಮಗಳನ್ನು ವಿಸ್ತರಿಸಲಾಯಿತ್ತಲ್ಲದೆ, ‘Rethinking Bhakthi’ ಎಂಬ ಅಂತರಾಷ್ಟಿçÃಯ ವಿಶ್ವಸಂವಾದ ಸಂಕಿರಣವನ್ನು ಏರ್ಪಡಿಸಲಾಯಿತು. ಮಿಷನರಿ ಕಾಲದಿಂದ ತೊಡಗಿ, ಆಧುನಿಕ ಕಾಲದವರೆಗೆ ಪ್ರಕಟಗೊಂಡಿರುವ ೧೧೮ ಲೇಖನಗಳ ೧೧೦೮ ಪುಟಗಳನ್ನೊಳಗೊಂಡ ಕನಕದಾಸ ಅಧ್ಯಯನ : ಸಮಗ್ರ ಸಂಪುಟ-೧ ‘ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ’, ‘ಕನಕನ ಸುತ್ತ ಮುತ್ತ : ಸಂಕಥನಗಳ ಜಿಜ್ಞಾಸೆ’ ರಾಷ್ಟಿçÃಯ ವಿಚಾರ ಸಂಕಿರಣ ಪ್ರಬಂಧಗಳನ್ನು ಹಾಗೂ ೨೦೧೧-೧೨ರ ‘ಕನಕ ಚಿಂತನ’ ಪ್ರಚಾರೋಪನ್ಯಾಸದ ಪ್ರಬಂಧಗಳನ್ನು ಸಂಪಾದಿಸಿ ಪ್ರಕಟಿಸಲಾಯಿತು.  ೨೦೦೬ರಿಂದ ೨೦೧೪ರ ವರೆಗೆ ಏರ್ಪಡಿಸಿದ ‘ಕನಕ ಕೀರ್ತನ’ ಹಾಗೂ ‘ಕನಕ ಗಂಗೋತ್ರಿ’ ಗಾಯನ ಕಾರ್ಯಕ್ರಮದ ಆಯ್ದ ಕನಕದಾಸರ ಕೀರ್ತನೆಗಳ ‘ಕೀರ್ತನ ಗಂಗೋತ್ರಿ’ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಗಿದೆಯಲ್ಲದೆಯೇ, ಕನಕದಾಸರ ಬದುಕು ಕೃತಿಗಳಿಗೆ ಸಂಬAಧಪಟ್ಟ ಮಾಹಿತಿ ಹಾಗೂ ಕೃತಿಗಳ ಮೂಲಪಠ್ಯವನ್ನು ಅನಾವರಣ ಮಾಡಿರುವ www.kanakanakindi.org ಎಂಬ ‘ಕನಕನ ಕಿಂಡಿ’ ಜಾಲತಾಣವನ್ನು ಲೋಕಾರ್ಪಣೆ ಮಾಡಲಾಯಿತು. 
 

ಕನಕದಾಸ ಅಧ್ಯಯನ ಪೀಠ

 
ಸ್ಥಾಪನೆ : ೨೦೦೩
ಮೂಲನಿಧಿ ರೂ. ೧೦ ಲಕ್ಷ
(ವಾರ್ಷಿಕ ಬಡ್ಡಿ ಸರಾಸರಿ ರೂ. ೬೦,೦೦೦.೦೦)
ಸಂಶೋಧನ ಯೋಜನೆ ಹಾಗೂ ಕಾರ್ಯಕ್ರಮಗಳು
 

೧. ಸಂಶೋಧನ ಯೋಜನೆ

ಕನಕದಾಸರ ಬದುಕು-ಬರೆಹಗಳಿಗೆ ಸಂಬAಧಿಸಿದAತೆ ಈವರೆಗೆ ಪ್ರಕಟಗೊಂಡಿರುವ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸುವ ` ಕನಕದಾಸರ ಅಧ್ಯಯನ : ಸಮಗ್ರ ಸಂಪುಟ’ ಪ್ರಕಟಣೆ ಯೋಜನೆ.
 

೨. ಆವರ್ತನ ಕಾರ್ಯಕ್ರಮಗಳು

೨.೧. ಕೀರ್ತನ ಗಾಯನ ಕಾರ್ಯಕ್ರಮ

೨.೧.೧) ` ಕನಕ ಕೀರ್ತನ’ (ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಮಟ್ಟದಲ್ಲಿ)
ಕನಕದಾಸರ ತತ್ವಚಿಂತನೆಗಳನ್ನು  ವಿದ್ಯಾರ್ಥಿ ಸಮುದಾಯಕ್ಕೆ ಪ್ರಸರಣಗೊಳಿಸುವ ಉದ್ದೇಶದಿಂದ, ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿ, ಅಧ್ಯಾಪಕ, ಆಡಳಿತವರ್ಗ ಹಾಗೂ ಸಾರ್ವಜನಿಕ ವಲಯವನ್ನೊಳಗೊಂಡ `ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಆಶಯ’ದಲ್ಲಿ  ` ಕನಕ ಕೀರ್ತನ’ ಗಾಯನ ಕಾರ್ಯಕ್ರಮ. 
 
೨.೧.೨) ‘ಕನಕ ಗಂಗೋತ್ರಿ’ : (ಸ್ನಾತಕೋತ್ತರ ಮಟ್ಟದಲ್ಲಿ)
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಮಟ್ಟದಲ್ಲಿ  ವಿದ್ಯಾರ್ಥಿ, ಅಧ್ಯಾಪಕ, ಆಡಳಿತವರ್ಗ ಹಾಗೂ ಸಾರ್ವಜನಿಕ ವಲಯವನ್ನೊಳಗೊಂಡ `ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಆಶಯ’ದಲ್ಲಿ  ` ಕನಕ ಗಂಗೋತ್ರಿ’  ಕೀರ್ತನ ಗಾಯನ ಕಾರ್ಯಕ್ರಮ. 
 

೨.೨) ‘ಕನಕ ತತ್ವ ಚಿಂತನ’ : ಪ್ರಚಾರೋಪನ್ಯಾಸ ಕಾರ್ಯಕ್ರಮ

ಕನಕ ತತ್ವ ಚಿಂತನೆಯನ್ನು ಯುವ ತಲೆಮಾರಿಗೆ ಪ್ರಸರಣಗೊಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ` ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಕಾರ್ಯಕ್ರಮ. 
 
 

೨.೩) ‘ಕನಕ ಸಂವಾದ’ : ವಿಚಾರ ಸಂಕಿರಣ

ಕನಕದಾಸ, ಭಕ್ತಿ ಪಂಥದ ಕುರಿತು ರಾಷ್ಟç ಮಟ್ಟದಲ್ಲಿ ವಿಚಾರ ಸಂಕಿರಣದ ಆಯೋಜನೆ ೨೦೦೪-೦೫ರ ಜನವರಿ ೧೨, ೧೩ ರಂದು ಕನಕ ಅಧ್ಯಯನ ಪೀಠದ ವತಿಯಿಂದ ಹಂಪಿ ವಿಶ್ವವಿದ್ಯಾನಿಲಯ, ಪುರಂದರದಾಸ ಅಧ್ಯಯನ ಪೀಠದ ಸಹಯೋಗದೊಂದಿಗೆ `` ಕನಕ ಸಾಹಿತ್ಯ :ಸಾಂಸ್ಕೃತಿಕ ಮರು ಓದು’’ ಎಂಬ ವಿಷಯದ ಕುರಿತ ರಾಷ್ಟಿçÃಯ ಸಂವಾದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
 

ಕನಕದಾಸ ಸಂಶೋಧನ ಕೇಂದ್ರ

ಸ್ಥಾಪನೆ : ೨೦೦೮
ಮೂಲನಿಧಿ ರೂ. ೧ ಕೋಟಿ
(ವಾರ್ಷಿಕ ಆದಾಯ - ಬಡ್ಡಿ ಸರಾಸರಿ ರೂ. ೬.೫೦ ಲಕ್ಷ)
 
ಕನಕದಾಸ ಅಧ್ಯಯನ ಪೀಠದಲ್ಲಿ ಹಮ್ಮಿಕೊಂಡ ಸಂಶೋಧನ – ಅಧ್ಯಯನ ಯೋಜನೆ    ಹಾಗೂ ಆವರ್ತನ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಲಾಯಿತು.ಅಧ್ಯಯನ-ಪ್ರಕಟಣೆ-ಪ್ರಸರಣಕ್ಕೆ ಸಂಬಂಧಿಸಿದಂತೆ  ಹೊಸ ಕಾರ್ಯ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲಾಯಿತು.
 

ಕನಕದಾಸ ಸಂಶೋಧನ ಕೇಂದ್ರದಲ್ಲಿ  ನಿರ್ವಹಣೆಗೊಳ್ಳುತ್ತಿರುವ ಕಾರ್ಯ ಯೋಜನೆಗಳು

 

೧. ಸಂಶೋಧನ ಯೋಜನೆಗಳು (ಸಂಪಾದನೆ/ ಅಧ್ಯಯನ)

೧.೧. ದೀರ್ಘಕಾಲಿಕ ಸಂಶೋಧನ ಯೋಜನೆ
 
೧.೧.೧. ಕನಕದಾಸ ಅಧ್ಯಯನ: ಸಮಗ್ರ ಸಂಪುಟ ಭಾಗ –  ೧, ೨, ೩, ೪, ೫, ೬
ಕನಕದಾಸರ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳ ಸ್ವರೂಪವನ್ನು ಗಮನಿಸಬೇಕಾದ ಹಿನ್ನೆಲೆಯಲ್ಲಿ ಕನಕದಾಸರ ಬದುಕು ಮತ್ತು  ಬರೆಹ ಸಂಬAಧಿಸಿದAತೆ ೧೯ನೇ ಶತಮಾನದ ಮಧ್ಯಭಾಗದಿಂದ ತೊಡಗಿ, ೨೧ನೇ ಶತಮಾನದ ಎರಡನೆಯ ದಶಕದವರೆಗೆ ಪ್ರಕಟಗೊಂಡಿರುವ ಲೇಖನಗಳನ್ನು ಸಮಗ್ರವಾಗಿ ಸಂಗ್ರಹಿಸಿ ಸಂಪುಟ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 
 
ಈ ಯೋಜನೆಯಲ್ಲಿ ಈವರೆಗೆ ಸುಮಾರು ೫೦೦ರಷ್ಟು ಲೇಖನಗಳನ್ನು ಸಂಗ್ರಹಿಸಿ, ಸಂಪಾದನೆ ಮಾಡುವ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಈಗಾಗಲೇ ಈ ಯೋಜನೆಯಲ್ಲಿ ಕನಕದಾಸರ ಬದುಕಿಗೆ ಸ೦ಬ೦ಧಿಸಿದ ೧೧೮ ಲೇಖನಗಳನ್ನು ಮೊದಲ ಸ೦ಪುಟದಲ್ಲಿ ಸ೦ಪಾದಿಸಿ, ಪ್ರಕಟಿಸಲಾಗಿದೆ. ಸಂಪುಟ ೧ (ಎರಡನೆಯ ಆವೃತ್ತಿ}, ೨, ೩, ೪, ೫, ೬ರಲ್ಲಿ ಒಟ್ಟು ೫೦೨ ಲೇಖನಗಳನ್ನು ಸಂಗ್ರಹಿಸಲಾಗಿದ್ದು, ಪ್ರಕಟಣೆಗೆ ಸಿದ್ಧಗೊಳ್ಳುತ್ತಿದೆ.
 
೧.೧.೧.೧ ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೧
 (ಕನಕದಾಸರ ಕಾಲ, ಜಾತಿ, ಮತ, ಕನಕನಕಿಂಡಿ)    
 ನೀ ಮಾಯೆಯೊ ನಿನ್ನೊಳು ಮಾಯೆಯೊ (೧೮೭೧ರಿಂದ ತೊಡಗಿ, ಇಂದಿನ ವರೆಗೆ ಪ್ರಕಟಗೊಂಡಿರುವ ಲೇಖನಗಳನ್ನು ಕ್ರೌನ್ ೧/೪ ಆಕಾರದ ೧೧೦೮ ಪುಟಗಳ ಬೃಹತ್ ಸಂಪುಟದಲ್ಲಿ ೨೦೧೩ರಲ್ಲಿ ಪ್ರಕಟಿಸಲಾಗಿದೆ.
 

ಎರಡನೆಯ ಆವೃತ್ತಿಯನ್ನು ಸಿದ್ಧಗೊಳಿಸಲಾಗುತ್ತಿದೆ.  

 
೧.೧.೧.೨. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ – ೨  
(ನಳಚರಿತ್ರೆ, ರಾಮಧಾನ್ಯ ಚರಿತೆ ಕೃತಿಗಳ ವಿಮರ್ಶೆ) 
ಲೇಖನ – ೮೬  ಸಂಗ್ರಹಿಸಲಾಗಿದೆ
 
೧.೧.೧.೩. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ – ೩  
(ಮೋಹನ ತರಂಗಿಣಿ, ಹರಿಭಕ್ತಿಸಾರ ಕೃತಿಗಳ ವಿಮರ್ಶೆ) 
ಲೇಖನ – ೮೩  ಸಂಗ್ರಹಿಸಲಾಗಿದೆ
 
೧.೧.೧.೪. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೪  
(ಕನಕದಾಸರ ಕೀರ್ತನೆಗಳ ವಿಮರ್ಶೆ) ಲೇಖನ – ೧೨೭ ಸಂಗ್ರಹಿಸಲಾಗಿದೆ
 
೧.೧.೧.೫ ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೫ 
(ಕನಕದಾಸರು ಮತ್ತು ಅವರ ಸಮಕಾಲೀನ ಅನುಭಾವಿಗಳ ತೌಲನಿಕ ಅಧ್ಯಯನ ) ಲೇಖನ – ೯೪ ಸಂಗ್ರಹಿಸಲಾಗಿದೆ 
 
೧.೧.೧.೬. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೬  
(ಕನಕದಾಸರ ಸಾಹಿತ್ಯ ಕುರಿತ ಸಂಕೀರ್ಣ ಚರ್ಚೆ) ಲೇಖನ – ೯೪ ಸಂಗ್ರಹಿಸಲಾಗಿದೆ)
 
೧.೧.೨. ಕನಕದಾಸ ಅಧ್ಯಯನ : ಸಮಗ್ರ ವರ್ಣನಾತ್ಮಕ ಸೂಚಿ ಭಾಗ -೧, ೨, ೩, ೪, ೫
ಕನಕದಾಸರ ಬದುಕು, ಬರೆಹಗಳ ಕುರಿತು ಈವರೆಗೆ ಪ್ರಕಟಗೊಂಡಿರುವ ಲೇಖನಗಳ ತಾತ್ವಿಕ ಗ್ರಹಿಕೆ, ಅಧ್ಯಯನ ವಿಧಾನಕ್ರಮ, ಲೇಖಕರ ನಿಲುವು ಈ ಕೆಲ ಅಂಶಗಳನ್ನು ಗುರುತಿಸಿ ‘ಕನಕದಾಸ ಅಧ್ಯಯನ:ಸಮಗ್ರ ವರ್ಣನಾತ್ಮಕ ಸೂಚಿ’ಯನ್ನು ಸಿದ್ಧಪಡಿಸಲಾಗುತ್ತಿದೆ.
 
 
೧.೧.೨.೧. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೧ 
(ಕನಕದಾಸರ ಕಾಲ, ಜಾತಿ, ಮತ, ಕನಕನ ಕಿಂಡಿ)
 
೧.೧.೨.೨. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೨    
(ಕನಕದಾಸರ ಕೃತಿ ವಿಮರ್ಶೆ- ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ)      
 
೧.೧.೨.೩.  ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ – ೩   
(ಕನಕದಾಸರ ಕೀರ್ತನೆಗಳ ವಿಮರ್ಶೆ)
 
೧.೧.೨.೪. ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೪    
(ಕನಕದಾಸರು ಮತ್ತು ಅವರ ಸಮಕಾಲೀನ ಅನುಭಾವಿಗಳ ತೌಲನಿಕ ಅಧ್ಯಯನ)  
 
೧.೧.೨.೫  ಕನಕದಾಸ ಅಧ್ಯಯನ : ಸಮಗ್ರ ಸಂಪುಟ ಭಾಗ -೫    
(ಕನಕದಾಸರ ಸಾಹಿತ್ಯ ಕುರಿತ ಸಂಕೀರ್ಣ ಚರ್ಚೆ) 
 
೧.೧.೩. ಸಂಪಾದನೆ
೧.೧.೩.೧. ಕನಕದಾಸ: ಸಮಗ್ರ ನಾಟಕ ಸಂಪುಟ 
     ಈ ಯೋಜನೆಯಲ್ಲಿ ಕನಕದಾಸರಿಗೆ (೧೯೨೭ ರಿಂದ) ಸಂಬAಧಿಸಿ ಈವರೆಗೆ  ಪ್ರಕಟಗೊಂಡಿರುವ ನಾಟಕಗಳನ್ನು ಸಂಪಾದಿಸಲಾಗುತ್ತಿದ್ದು, ಈ ಯೋಜನೆಯಲ್ಲಿ  ಒಟ್ಟು   ೧೬ ನಾಟಕಗಳನ್ನು  ಸಂಗ್ರಹಿಸಲಾಗಿದೆ.
 
೧.೧.೩.೨. ಕನಕದಾಸ: ಸಮಗ್ರ ಕವನ ಸ೦ಪುಟ
     ಕನಕದಾಸರ ಕುರಿತು ಈವರೆಗೆ ಪ್ರಕಟಗೊಂಡಿರುವ ಕವನಗಳನ್ನು ಸಂಗ್ರಹಿಸಿ, ಸಂಪಾದಿಸುವ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಯಲ್ಲಿ ಈ ವರೆಗೆ ಒಟ್ಟು ೧೩೧ ಕವನಗಳನ್ನು ಸಂಗ್ರಹಿಸಲಾಗಿದೆ.
.
೧.೨. ಕಿರುಕಾಲಿಕ ಸಂಶೋಧನ ಯೋಜನೆ:
೧.೨.೧. ಧರ್ಮ: ನಿರ್ವಚನದ ತೊಡಕುಗಳು 
          ವಸಾಹತು ಮತ್ತು ವಸಾಹತೋತ್ತರ ಕಾಲಘಟ್ಟದಲ್ಲಿ ಜಾತಿ, ಮತ, ಪಂಥಗಳ ಹಿನ್ನೆಲೆಯಲ್ಲಿ ಕನಕನನ್ನು ಮರುನಿರ್ವಹಿಸಿಕೊಂಡಿರುವ ಬಗೆಯನ್ನು ಕನಕದಾಸರ ಬದುಕು, ಬರೆಹಗಳ ಕುರಿತು ಈವರೆಗೆ ಪ್ರಕಟಗೊ೦ಡಿರುವ ಬರೆವಣಿಗೆಗಳ ಹಿನ್ನೆಲೆಯಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ.
 
೧.೨.೨. ದಾಸರು ಮತ್ತು ಕರಾವಳಿ
          ಕರಾವಳಿ ಪ್ರದೇಶಗಳ ವ್ಯಕ್ತಿನಾಮ ಮತ್ತು ಸ್ಥಳನಾಮಗಳ ಕುರಿತು ಕ್ಷೇತ್ರಾಧ್ಯಯನದ   ಮೂಲಕ ‘ದಾಸ’ರ ಪ್ರಸರಣವನ್ನು ಅಧ್ಯಯನ ಮಾಡುವುದು. ಜೊತೆಗೆ, ಉಡುಪಿಯ ಕಥನಗಳು ಕನಕ ಮತ್ತು ಕೃಷ್ಣರನ್ನು ಮತ್ತೆ ಮತ್ತೆ ಮರು ಕಥನ ಮಾಡುತ್ತಿರುವ ಜಾನಪದೀಯ ನೆಲೆಯನ್ನು ಅಧ್ಯಯನ ಮಾಡಲಾಗುತ್ತಿದೆ. 
 
  
೧.೨.೩. ರಾಮಧಾನ್ಯ ಚರಿತ್ರೆ-ವಿಭಿನ್ನ ಓದುಗಳು
ಈ ಯೋಜನೆಯಲ್ಲಿ ರಾಮಧಾನ್ಯ ಚರಿತೆಯ ಕುರಿತು ಲಭ್ಯವಿರುವ ಈವರೆಗಿನ ಓದುಗಳನ್ನು ಇಟ್ಟುಕೊಂಡು, ಕನ್ನಡ ವಿಮರ್ಶಾಲೋಕ ಮತ್ತು ಕನಕದಾಸರ ಕೃತಿ ಲೋಕದ ನಡುವಿನ ಅಂತರ್ ಸಂಬAಧವನ್ನು, ಕೃತಿಯ ತಾತ್ವಿಕತೆ ಮತ್ತು ವಿಭಿನ್ನ ಓದುಗಳ ತಾತ್ವಿಕತೆಯ ಸ್ವರೂಪದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗುತ್ತಿದೆ. 
 
೧.೨.೪. ಕನಕ ತತ್ವದ ರಂಗ ಅಭಿವ್ಯಕ್ತಿಯ ನೆಲೆ 
      ಪ್ರಸ್ತುತ ಯೋಜನೆಯಲ್ಲಿ ನಾಟಕ ರಚನೆಯ ಮೂಲಕ ಕನಕದಾಸರ ಪುನರ್ ನಿರ್ಮಿತಿಯ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸನ್ನಿವೇಶ, ಸಂದರ್ಭವನ್ನು ಅಧ್ಯಯನ ಮಾಡಲಾಗುತ್ತಿದೆ. ಜೊತೆಗೆ, ಕನಕದಾಸ ಮತ್ತು ಮರುಅಭಿವ್ಯಕ್ತಿಯ ನಡುವಿನ ಸಂರಚನಾತ್ಮಕ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ.
 

೨. ಪ್ರಸರಣ ಯೋಜನೆಗಳು

೨.೧. ಆವರ್ತನ ಕಾರ್ಯಕ್ರಮಗಳು

೨.೧.೧) ‘ಕನಕ ಚಿಂತನ’ : ಪ್ರಚಾರೋಪನ್ಯಾಸ ಕಾರ್ಯಕ್ರಮ (ವಿಸ್ತರಣಾ ಕಾರ್ಯಕ್ರಮ)
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ‘ಕನಕ ಚಿಂತನ’ ಪ್ರಚಾರೋಪನ್ಯಾಸ ಕಾರ್ಯಕ್ರವನ್ನು ರಾಜ್ಯದ ವಿವಿಧ ವಿಶ್ವವಿದ್ಯಾನಿಲಗಳಾದ ಮೈಸೂರು, ಧಾರವಾಡ, ದಾವಣಗೆರೆ, ವಿಜಯಪುರ, ಬೆಂಗಳೂರು, ಕುವೆಂಪು, ತುಮಕೂರು ವಿಶ್ವವಿದ್ಯಾನಿಲಯಗಳಲ್ಲದೆಯೇ, ಕಣ್ಣೂರು, ಚೆನ್ನೆöÊ, ಮುಂಬಯಿ, ಕುಪ್ಪಂ, ಹೈದರಾಬಾದ್ ಮುಂತಾದ ಹೊರ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸಲಾಗಿದೆ. 
 ೨೦೦೬ರಿಂದ ಆರಂಭಗೊAಡ ಈ ಕಾರ್ಯಕ್ರಮದಲ್ಲಿ ಈವರೆಗೆ ಕನಕದಾಸರ ಬದುಕು, ಕೃತಿಗಳು ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳ ಸಮಕಾಲೀನ ಸಂವಾದದ ನೆಲೆಯಲ್ಲಿ  ಮರುಓದನ್ನು ನಡೆಸುವ ಒಟ್ಟು ೧೯೬ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿ, ಅಧ್ಯಾಪಕ, ಆಡಳಿತವರ್ಗ ಹಾಗೂ ಸಾರ್ವಜನಿಕ ವಲಯದಿಂದ ಪ್ರತಿ ಕಾರ್ಯಕ್ರಮಕ್ಕೂ ಸರಾಸರಿ ಸುಮಾರು ೩೦೦ರಂತೆ ಒಟ್ಟು ೫೭,೫೦೦ ಮಂದಿ ಭಾಗವಹಿಸಿರುತ್ತಾರೆ. (ವಿವರಗಳು ಅನುಬಂಧ : ೧ರಲ್ಲಿ)
 
೨.೧.೨) ‘ಕನಕ ಕೀರ್ತನ’ : ಕಾಲೇಜು ಮಟ್ಟದ ಕೀರ್ತನ ಗಾಯನ ಕಾರ್ಯಕ್ರಮ (ವಿಸ್ತರಣಾ ಕಾರ್ಯಕ್ರಮ)
ಪದವಿ ಮಟ್ಟದಲ್ಲಿ ನಡೆಸುತ್ತಿದ್ದ ‘ಕನಕ ಕೀರ್ತನ’ ಗಾಯನ ಕಾರ್ಯಕ್ರಮವನ್ನು ಮಂಗಳೂರು ತಾಲೂಕು ವ್ಯಾಪ್ತಿಯ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ವಲಯಗಳಿಗೆ ವಿಸ್ತರಿಸಲಾಗಿದೆ. ಇದಲ್ಲದೆ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ರಾಜೀವ್ ಗಾಂಧಿ ವೈದ್ಯಕೀಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸಲಾಯಿತು. 
ಈ ಶೈಕ್ಷಣಿಕ ವರ್ಷದ ಯೋಜನೆಯಲ್ಲಿ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ, ಕೊಡಗು, ಉಡುಪಿ ಈ ಮೂರೂ ಜಿಲ್ಲಾ ವ್ಯಾಪ್ತಿಯ ಎಲ್ಲಾ  ಪ್ರೌಢಶಾಲೆ, ಪದವಿ ಪೂರ್ವ,  ಪದವಿ ಕಾಲೇಜುಗಳು, ವಿಶ್ವೇಶ್ವರಯ್ಯ ತಾಂತ್ರಿಕ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ಶಿಕ್ಷಣ ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ನಡೆಸಲಾಗುವುದು. 
ಈ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ತಾಲೂಕು ಮಟ್ಟ, ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟ, ಮೂರನೆಯ ಹಂತದಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಶಿಕ್ಷಣ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಗುವುದು. ಈ  ಕಾರ್ಯಕ್ರಮವನ್ನು ಹೆಚ್ಚು ಜನಪ್ರಿಯಗೊಳಿಸುವ ಹಿನ್ನೆಲೆಯಲ್ಲಿ, ಶಾಸ್ತಿçÃಯ ಸಂಗೀತ, ಭಜನೆ ಮಟ್ಟುಗಳ ಜೊತೆಗೆ ಆಧುನಿಕ ಸಂಗೀತ ರಾಗ ಪರಿಕರಗಳನ್ನು ಬಳಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಸರಕಾರದಿಂದ ಹೆಚ್ಚುವರಿ ಅನುದಾನ ದೊರೆತರೆ, ವಿದ್ಯಾರ್ಥಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ವಲಯಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ ರೂ. ೫,೦೦೦/- ದಂತೆ ನಗದು ಪುರಸ್ಕಾರ ಮತ್ತು ಕನಕ ಸ್ಮರಣಿಕೆಯನ್ನು ನೀಡಿ ಗೌರವಿಸಬೇಕೆಂದು ಉದ್ದೇಶಿಸಲಾಗಿದೆ.  
 
ಈವರೆಗೆ ೧೨ ಕನಕ ಕೀರ್ತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಒಟ್ಟು ೫೫೦ ಅಭ್ಯರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿರುತ್ತಾರೆ. ವಿದ್ಯಾರ್ಥಿ, ಅಧ್ಯಾಪಕ, ಆಡಳಿತವರ್ಗ ಹಾಗೂ ಸಾರ್ವಜನಿಕ ವಲಯದಿಂದ ಸುಮಾರು ೫,೮೦೦ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. (ವಿವರಗಳು ಅನುಬಂಧ : ೨ರಲ್ಲಿ)
 
೨.೧.೩) ‘ಕನಕ ಗಂಗೋತ್ರಿ’ : ಸ್ನಾತಕೋತ್ತರ ಮಟ್ಟದ ಕೀರ್ತನ ಗಾಯನ ಕಾರ್ಯಕ್ರಮ
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ನಡೆಸುತ್ತಿದ್ದ ‘ಕನಕ ಗಂಗೋತಿ’್ರ ಕಾರ್ಯಕ್ರಮವನ್ನು ಕಣ್ಣೂರು ವಿಶ್ವವಿದ್ಯಾನಿಲಯ, ವಿಶ್ವೇಶ್ವರಯ್ಯ ತಾಂತ್ರಿಕ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೂ ವಿಸ್ತರಿಸಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಈ ಕಾರ್ಯಕ್ರಮವನ್ನು ಇದೇ ಬಗೆಯಲ್ಲಿ ಮುಂದುವರಿಸಲಾಗುವುದು. ಸರಕಾರದಿಂದ ಹೆಚ್ಚುವರಿ ಅನುದಾನ ದೊರೆತರೆ, ವಿದ್ಯಾರ್ಥಿ, ಅಧ್ಯಾಪಕ ಹಾಗೂ ಆಡಳಿತವರ್ಗದವರಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳಿಗೆ ಸಮಾನವಾಗಿ ತಲಾ ರೂ. ೫,೦೦೦-೦೦ ದಂತೆ ನಗದು ಪುರಸ್ಕಾರವನ್ನು ನೀಡಲಾಗುವುದು. 
 
ಈವರೆಗೆ ಹಮ್ಮಿಕೊಂಡ ೧೩ ಕನಕ ಗಂಗೋತ್ರಿ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಒಟ್ಟು ೨೭೦ ಅಭ್ಯರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿರುತ್ತಾರೆ. ವಿದ್ಯಾರ್ಥಿ, ಅಧ್ಯಾಪಕ ಹಾಗೂ ಆಡಳಿತವರ್ಗದಿಂದ ಸುಮಾರು ೩,೮೦೦ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. (ವಿವರಗಳು ಅನುಬಂಧ : ೩ರಲ್ಲಿ)
 
೨.೧.೪) ಕನಕ ರೂಪಕ
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ, ಕೊಡಗು, ಉಡುಪಿ ಈ ಮೂರೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ `ಕನಕ ರೂಪಕ’ ಕಾರ್ಯಕ್ರಮವನ್ನು ತಾಲೂಕು ಮಟ್ಟ, ಜಿಲ್ಲಾ ಮಟ್ಟ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಂದ ನಡೆಸಿ, ಸರಕಾರದಿಂದ ಹೆಚ್ಚುವರಿ ಅನುದಾನ ದೊರೆತರೆ, ಅತ್ಯುತ್ತಮ ಮೂರು ರೂಪಕಗಳಿಗೆ ತಲಾ ರೂ. ೨೫,೦೦೦/- ದಂತೆ ನಗದು ಪುರಸ್ಕಾರ ಹಾಗೂ ಕನಕ ಸ್ಮರಣಿಕೆಯನ್ನು ನೀಡಿ ಗೌರವಿಸಲು ಉದ್ದೇಶಿಸಲಾಗಿದೆ.
 
೨.೧.೫) ಕನಕ ಗಮಕ 
 ಮೋಹನತರಂಗಿಣಿ, ನಳಚರಿತೆ ಕಾವ್ಯಗಳ ಗಮಕ ವಾಚನ ಕಾರ್ಯಕ್ರಮವನ್ನು ರಾಜ್ಯದ ಆಯ್ದ ಕಾಲೇಜುಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. 
 
೨.೧.೬) ಕನಕ ಪ್ರಬಂಧ 
 ಕನಕದಾಸರ ಬದುಕು ಬರಹದ ಕುರಿತು ಆಸಕ್ತಿ, ತಿಳುವಳಿಕೆ ಮೂಡಿಸುವ ಕನಕ ಪ್ರಬಂಧ ರಚನೆ ಮತ್ತು ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ನಡೆಸಲು ಉದ್ದೇಶಿಸಲಾಗಿದೆ. 
 
೨.೧.೭) ‘ಕನಕ ಸ್ಮೃತಿ’ : ವಿಶೇಷ ಉಪನ್ಯಾಸ ಕಾರ್ಯಕ್ರಮ 
‘ಕನಕ ಸ್ಮತಿ’ ಕಾರ್ಯಕ್ರಮದಲ್ಲಿ ಕನಕದಾಸರು ಪ್ರತಿಪಾದಿಸಿದ ಸಾಮಾಜಿಕ ಮೌಲ್ಯಗಳ ಕುರಿತಂತೆ  `ವಿಶೇಷ ಉಪನ್ಯಾಸ’ಗಳನ್ನು ಏರ್ಪಡಿಸಲಾಗಿದೆ. ಇವುಗಳ ಜೊತೆಗೆ, ‘ಕನಕ ಕೀರ್ತನ’ ಮತ್ತು ‘ಕನಕ ಗಂಗೋತ್ರಿ’ ಕಾರ್ಯಕ್ರಮದಲ್ಲಿ ಕೀರ್ತನೆಯನ್ನು ಹಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ, ಸ್ಮರಣಿಕೆ, ತಲಾ ರೂ. ೩,೦೦೦.೦೦ ಗೌರವ ಧನವನ್ನು ನೀಡಿ ಅವರಿಂದ ಕೀರ್ತನ ಪ್ರಸ್ತುತಿ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುತ್ತಿದೆ. ಈವರೆಗೆ ೧೦ ‘ಕನಕ ಸ್ಮೃತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕಾರ್ಯಕ್ರಮಕ್ಕೂ ಸರಾಸರಿ ಸುಮಾರು ೫೦೦ರಂತೆ ಒಟ್ಟು ೨,೮೦೦ ಮಂದಿ ಭಾಗವಹಿಸಿರುತ್ತಾರೆ. (ವಿವರಗಳು ಅನುಬಂಧ : ೪ರಲ್ಲಿ)
 
೨.೧.೮) ಕನಕ ಸಂವಾದ : (ಕಮ್ಮಟ/ವಿಚಾರ ಸಂಕಿರಣ)
೨.೧.೮.೧)  ರಾಷ್ಟ್ರೀಯ ಸಂವಾದ ಸಂಕಿರಣ : “ಕನಕ ಸಾಹಿತ್ಯ: ಸಾಂಸ್ಕೃತಿ ಮರು ಓದು” ೨೦೦೪-೦೫ ಜನವರಿ ೧೨ ಹಾಗೂ ೧೩ ಎರಡು ದಿವಸಗಳ ವಿಚಾರ ಸಂಕಿರಣದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಒಟ್ಟು  ೨೪ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿರುತ್ತಾರೆ.   ಈ ಕಾರ್ಯಕ್ರಮದಲ್ಲಿ ಸರಿಸುಮಾರು ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿರುತ್ತಾರೆ. 
 
೨.೧.೮.೨) ರಾಷ್ಟ್ರೀಯ ಸಂವಾದ ಸಂಕಿರಣ :
“ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ”  ೭, ೮, ೯, ಎಪ್ರಿಲ್,  ೨೦೧೦
ಮೂರು ದಿವಸಗಳ ವಿಚಾರ ಸಂಕಿರಣದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ವಿದ್ವಾಂಸರು ಒಟ್ಟು ೨೧ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಸರಿಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿರುತ್ತಾರೆ.
ಸಂತ ಶ್ರೀ ಭದ್ರಗಿರಿ ಅಚ್ಯುತದಾಸ, ಬೆಂಗಳೂರು ಇವರಿಂದ ‘ಕನಕದಾಸ ಕಥಾ ಶ್ರವಣ’ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರಿಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿರುತ್ತಾರೆ.  ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬ೦ಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.
 
೨.೧.೮.೩) ವಿಶ್ವ ಸಂವಾದ ಸಂಕಿರಣ “Rethinking Bhakthi” ೨೭,೨೮,೨೯,೩೦ ಮಾರ್ಚ್, ೨೦೧೩
೨೦೧೩ರಲ್ಲಿ ‘ಕನಕದಾಸ ಅಧ್ಯಯನ ಪೀಠದ ಹತ್ತರ ಸಂಭ್ರಮ’ದ ನೆನಪಿನಲ್ಲಿ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ, ಇಂಡಿಯನ್ ಕೌನ್ಸಿಲ್ ಫಾರ್ ಸೋಶಿಯಲ್ ಸಾಯನ್ಸ್ ರೀಸರ್ಚ್(ICSSR) ಮತ್ತು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಇವುಗಳ ಆರ್ಥಿಕ ನೆರವಿನೊಂದಿಗೆ ‘Rethinking Bhakthi’ (ಭಕ್ತಿ ಪರಿಕಲ್ಪನೆ: ಮರುಚಿಂತನೆ) ಎಂಬ ವಿಷಯದ ಕುರಿತು ನಾಲ್ಕು ದಿವಸಗಳ ವಿಶ್ವ ಕನಕ ಸಂವಾದ  ಸಂಕಿರಣವನ್ನು ಏರ್ಪಡಿಸಿದ್ದು, ಈ ಸಂವಾದ ಸಂಕಿರಣದಲ್ಲಿ ದೇಶ ವಿದೇಶಗಳಿಂದ ಒಟ್ಟು ೨೦ಕ್ಕೂ ಮೇಲ್ಪಟ್ಟು ವಿದ್ವಾಂಸರು ಆಗಮಿಸಿ ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಪದವಿ ಕಾಲೇಜು, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು ಗಣ್ಯರು ಸೇರಿದಂತೆ ೬೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿರುತ್ತಾರೆ.  
 
ಸಾಂಸ್ಕೃತಿಕ ಕಾರ್ಯಕ್ರಮ: 
೧.  ಶ್ರೀಮತಿ ವೈಜಯಂತಿ ಕಾಶಿ ಹಾಗೂ ತಂಡದಿAದ ಭಕ್ತಿ ಪರಿಕಲ್ಪನೆಗೆ ಸಂಬAಧಿಸಿದ ನೃತ್ಯ
೨.   ಡಾ. ಕೆ.ಎಸ್. ವೈಶಾಲಿ ಅವರಿಂದ ಭಕ್ತಿ ಪರಿಕಲ್ಪನೆ ಸಂಬಂಧಿಸಿದ ಸಂಗೀತ ಕಾರ್ಯಕ್ರಮ
 
ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬ೦ಧಗಳನ್ನು ಪುಸ್ತಕ ರೂಪದಲ್ಲಿ
      ಪ್ರಕಟಿಸಲಾಗುವುದು.
 
೨.೧.೮.೪) ವಿಶೇಷ ಉಪನ್ಯಾಸ ಕಾರ್ಯಕ್ರಮ: 
What Should Bhakthi Movement Be?’ ಜನವರಿ ೮, ೨೦೧೩
ಪ್ರೊ. ಜಾನ್ ಸ್ಟಾçಟನ್ ಹಾಲಿ, ಪ್ರಾಧ್ಯಾಪಕರು, ಧರ್ಮ ಅಧ್ಯಯನ ವಿಭಾಗ, ಬರ್ನಾರ್ಡ್ ಕಾಲೇಜು, ಕೊಲಂಬಿಯ ವಿಶ್ವವಿದ್ಯಾನಿಲಯ, ಅಮೇರಿಕಾ. ಈ ಕಾರ್ಯಕ್ರಮದಲ್ಲಿ ಸರಿಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿರುತ್ತಾರೆ.
 
 
 
 
೨.೨) ‘ಕನಕನ ಕಿಂಡಿ’ ('kanakanakindi.org.in) ಜಾಲತಾಣ : (ಕನಕದಾಸರ ಬದುಕು ಬರಹ 
          ಹಾಗೂ ಕೇಂದ್ರದ  ಚಟುವಟಿಕೆಗಳ ದೃಶ್ಯ, ಶ್ರವ್ಯ ಲಿಪೀಕೃತ ಮಾಹಿತಿ.)
• ಕನಕದಾಸರ ಬದುಕು ಸಾಹಿತ್ಯಕ್ಕೆ  ಸಂಬಂಧಿಸಿದ ಸಮಗ್ರ ವಿವರ ಹಾಗೂ ಮೂಲ ಪಠ್ಯಗಳ ಕ್ರೋಡೀಕರಣ
• ಕನಕದಾಸರ ಬದುಕು ಬರೆಹಗಳಿಗೆ ಸಂಬಂಧಿಸಿದಂತೆ  ಈ ವರೆಗೆ ಪ್ರಕಟಗೊಂಡಿರುವ ಲೇಖನಗಳ, ಕೃತಿಗಳ ಬಿಬ್ಲಿಯೋಗ್ರಾಫಿ
• ೨೦೦೩ ರಿಂದ ೨೦೧೭ ವರೆಗಿನ ಕೇಂದ್ರದ ಕಾರ್ಯಚಟುವಟಿಕೆಗಳ ಸ್ಥೂಲವರದಿ, ಛಾಯಾಚಿತ್ರ ಹಾಗೂ ಪತ್ರಿಕಾ ಪ್ರಕಟಣೆಗಳು
• ಕನಕದಾಸರಿಗೆ ಸಂಬಂಧಿಸಿದ ಚಲನಚಿತ್ರ
• ಕನಕದಾಸರ ಕೃತಿಗಳಿಗೆ ಸಂಬಂಧಿಸಿದ ಯಕ್ಷಗಾನ ಪ್ರಸಂಗಗಳ ತುಣುಕುಗಳು
• ಕನಕದಾಸರ ಕೀರ್ತನೆಗಳ ಧ್ವನಿ ಸಂಕಲನಗಳು
 
೨.೩)  ಧ್ವನಿ ಸುರುಳಿ
ಕೀರ್ತನ - ಗಂಗೋತ್ರಿ
     ೨೦೦೬ ರಿಂದ ೨೦೧೩ರ ವರೆಗೆ ಏರ್ಪಡಿಸಿದ್ದ  ಕನಕ ಕೀರ್ತನ `ಕನಕ ಗಂಗೋತ್ರಿ’ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಹಾಡಿಸಿ, ಧ್ವನಿ ಮುದ್ರಿಸಿದ ಕನಕದಾಸರ ಹದಿಮೂರು ಕೀರ್ತನೆಗಳನ್ನೊಳಗೊಂಡ ಧ್ವನಿ ಸುರುಳಿ.
 
೨.೪)  ಪ್ರಕಟಣೆಗಳು (ಸಂಶೋಧನೆ /ಅಧ್ಯಯನ/ಪ್ರಸರಣ)
 ಈವರೆಗೆ ಒಟ್ಟು ೭ ಕೃತಿಗಳನ್ನು ಪ್ರಕಟಿಸಲಾಗಿದೆ
 
೨.೪.೧)  ಕನಕ ಅಧ್ಯಯನ ಮಾಲಿಕೆ : ೧
೨.೪.೧.೧) ಕನಕದಾಸರ ಕೀರ್ತನೆಗಳ ಶಬ್ದ ಪ್ರಯೋಗ ಕೋಶ,
                               ಸ೦: ಪ್ರೊ. ಶ್ರೀನಿವಾಸ ಹಾವನೂರ ಮತ್ತು ವಿ. ಕೃಷ್ಣ,   ೨೦೧೦
 
೨.೪.೨)  ಕನಕ ಸಂಶೋಧನ ಮಾಲಿಕೆ :೧
೨.೪.೨.೧)  ಕನಕದಾಸ ಅಧ್ಯಯನ ಸಮಗ್ರ ಸಂಪುಟ ಭಾಗ -೧ 
         ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ 
       (ಕನಕದಾಸರ ಕಾಲ, ಜಾತಿ, ಮತ, ಕನಕನ ಕಿಂಡಿ ಕುರಿತ೦ತೆ ಈವರೆಗೆ ಪ್ರಕಟಗೊ೦ಡಿರುವ ಲೇಖನಗಳ
                                     ಸ೦ಪಾದಿತ ಕೃತಿ) 
                  ಸಂಪಾದಕರು : ಡಾ. ಬಿ. ಶಿವರಾಮ ಶೆಟ್ಟಿ, ೨೦೧೩
 
೨.೪.೩)  ಕನಕ ಸಂವಾದ ಮಾಲಿಕೆ : ೧ 
೨.೪.೩.೧)  ಕನಕನ ಸುತ್ತಮುತ್ತ : ಸಂಕಥನಗಳ ಜಿಜ್ಞಾಸೆ 
        (ರಾಷ್ಟಿçÃಯ ಸಂವಾದ ಸಂಕಿರಣದ ಪ್ರಬ೦ಧಗಳು)
                  ಸಂಪಾದಕರು : ಡಾ. ಬಿ. ಶಿವರಾಮ ಶೆಟ್ಟಿ, ೨೦೧೩
 
೨.೪.೪)  ಕನಕ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ : ೧, ೨, ೩ 
               ೨.೪.೪.೧) ಕನಕ ಚಿಂತನ ೨೦೦೭-೦೮ 
(ಕನಕದಾಸರ ಬದುಕು ಬರೆಹ ಹಾಗೂ ಸೂಫಿ-ದಾಸ  ಪರಂಪರೆಯಲ್ಲಿ  ಕನಕದಾಸರ ತತ್ವಚಿಂತನೆ ಕುರಿತ 
                                ಲೇಖನಗಳು)
              ಸಂಪಾದಕರು : ಡಾ. ಬಿ. ಶಿವರಾಮ ಶೆಟ್ಟಿ , ೨೦೧೦
  ೨.೪.೪.೨)  ಕನಕ ಚಿಂತನ ೨೦೦೯-೧೦
              (ರಾಮಧಾನ್ಯ ಚರಿತೆ ಹಾಗೂ ಮೋಹನತರಂಗಿಣಿ-ಸಮಕಾಲೀನ ಸಂವಾದ ಕುರಿತ ಪ್ರಬ೦ಧಗಳು)
                                ಸಂಪಾದಕರು : ಡಾ. ಬಿ. ಶಿವರಾಮ ಶೆಟ್ಟಿ , ೨೦೧೦
 
  ೨.೪.೪.೩)  ಕನಕ ಚಿಂತನ ೨೦೧೧-೧೨
(ನಳಚರಿತೆ ಹಾಗೂ ಕನಕದಾಸರ ಕೀರ್ತನೆಗಳು - ಸಮಕಾಲೀನ ಸಂವಾದ ಕುರಿತ ಪ್ರಬ೦ಧಗಳು) 
                    ಸಂಪಾದಕರು : ಡಾ. ಬಿ. ಶಿವರಾಮ ಶೆಟ್ಟಿ , ೨೦೧೩
 
೨.೪.೫)  ಕನಕ ಮರು ಮುದ್ರಣ ಮಾಲಿಕೆ : ೧
೨.೪.೫.೧) ಕನಕದಾಸರ ಕೀರ್ತನೆ, ಸ೦:ಪಾವಂಜೆ ಗುರುರಾವ್, ೨೦೧೧