Shri Dharmasthala Manjunatheshwara Tulu Chair

Shri Dharmasthala Manjunatheshwara Tulu Chair

ಪರಿಚಯ

ತುಳು ಪೀಠವು ಸ್ಥಳೀಯ ಮತ್ತು ವಿದೇಶೀ ಅಧ್ಯಯನಕಾರರಿಗೆ ಪ್ರಮುಖ ಅಧ್ಯಯನ ಮತ್ತು ಮಾಹಿತಿ ಕೇಂದ್ರವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಮಾತ್ರವಲ್ಲದೆ, ಕರ್ನಾಟಕ ಮತ್ತು ಇತರ ರಾಜ್ಯದ ಸಂಶೋಧನಾರ್ಥಿಗಳಿಗೆ ಮತ್ತು ಜಾನಪದ ವಿದ್ಯಾರ್ಥಿಗಳಿಗೆ ಪ್ರಮುಖ ಅಧ್ಯಯನ ಕೇಂದ್ರವೂ ಇದಾಗಿದೆ. ಅಗತ್ಯವಿದ್ದವರಿಗೆ ಅಪರೂಪದ ಪುಸ್ತಕಗಳ ಜೆರಾಕ್ಸ್ ಪ್ರತಿಯನ್ನೂ ಒದಗಿಸುತ್ತದೆ. ತುಳು ಪೀಠದಲ್ಲಿ ಸ್ಥಾಪಿಸಲಾಗಿರುವ ಫಿನ್ನ್ನಿಷ್ ಭಾರತ ಸಂಶೋಧನ ಕೇಂದ್ರವು ವಿಶ್ವ ಮೌಖಿಕ ಮಹಾಕಾವ್ಯಗಳ ಮೇಲೆ ಸಂಶೋಧನೆಯನ್ನು ನಡೆಸುವ ಸಂಶೋಧನಕಾರರಿಗೆ ಸಂಪನ್ಮೂಲ ಕೇಂದ್ರವೂ ಆಗಿದೆ. ಇಲ್ಲಿ ಮೌಖಿಕ ಮಹಾಕಾವ್ಯಗಳಿಗೆ ಸಂಬAಧಿಸಿದ ಅಪರೂಪದ ಪುಸ್ತಕಗಳು ಮತ್ತು ಇತರ ಶ್ರವ್ಯ ಧ್ವನಿಮುದ್ರಣಗಳನ್ನು ರಕ್ಷಿಸಿಡಲಾಗಿದೆ.

                                                   

ಕೇಂದ್ರದ ಬಗ್ಗೆ:

ಸ್ಥಾಪನೆಯಾದ ವರ್ಷ – 1992
• ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು.
• ದಕ್ಷಿಣ ಕನ್ನಡದ ತುಳುನಾಡಿನ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶೇಷತೆಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ವಸ್ತು ಸಂಗ್ರಹಾಲಯವನ್ನು ತೆರೆಯುವುದು.
• ಇತರ ದ್ರಾವಿಡ ಅಧ್ಯಯನಗಳ ಜೊತೆಗೆ ಮುಖಾಮುಖಿಯಾಗುವುದು.
• ಯೋಜನೆಗಳನ್ನು ರೂಪಿಸುವುದು.
• ತುಳು ಜಾನಪದ ಸಾಹಿತ್ಯ ಸಂಗ್ರಹಣೆ.
• ತುಳುವರ ಜಾತಿ ಮತ್ತು ಬುಡಕಟ್ಟುಗಳ ಅಧ್ಯಯನ.
• ತುಳು ಅಧ್ಯಯನಕ್ಕಾಗಿ ಪ್ರತೀ ವರ್ಷ ಉಪನ್ಯಾಸಗಳು/ವಿಚಾರ ಸಂಕಿರಣಗಳು/ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳುವುದು.
• ಸಂಶೋಧನ ಲೇಖನಗಳು/ಪ್ರಬಂಧಗಳು/ಮಹಾಪ್ರಬAಧಗಳ ಪ್ರಕಟಣೆ.
• ಸಂಶೋಧನ ಪ್ರಾಮುಖ್ಯವುಳ್ಳ ತುಳು ಹಸ್ತಪ್ರತಿಗಳ ಮತ್ತು ತುಳು ಕಾರ್ಯಗಳ ಸಂಗ್ರಹ ಮತ್ತು ಪ್ರಕಟಣೆ.
• ತುಳು ಅಧ್ಯಯನ ಮತ್ತು ಕಾರ್ಯಗಳಿಗೆ ಸಂಬAಧಿಸಿದAತೆ ಮಾಲಿಕೆಗಳನ್ನು ಪ್ರಕಟಿಸುವುದು.
• ರಾಜ್ಯ ಸರಕಾರ, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಮತ್ತು ಇತರ ಸಂಸ್ಥೆಗಳು ಹಾಗೂ ಗೌರವಾನ್ವಿತ ಜಾನಪದ ವಿದ್ವಾಂಸರ ಸಹಯೋಗದೊಂದಿಗೆ ತುಳು ಜಾನಪದ ಕಲೆ ಮತ್ತು ಜಾನಪದ ಕಲಾವಿದರನ್ನು ಸಂರಕ್ಷಿಸುವುದು.
• ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಇತರೆ ಯಾವುದೇ ಸಂಬAಧಿತ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸುವುದು.