M.B.A
ಪರಿಚಯ/ಮುನ್ನುಡಿ/ಪ್ರವೇಶನ
ವಿಭಾಗದ ಬಗ್ಗೆ
ಮಂಗಳೂರು ವಿಶ್ವವಿದ್ಯಾಲಯದ ವ್ಯವಹಾರ ಆಡಳಿತ ವಿಭಾಗವನ್ನು 1981 ರಲ್ಲಿ ಸ್ಥಾಪಿಸಲಾಯಿತು ಮತ್ತು 33 ಬ್ಯಾಚ್/ತಂಡಗಳು ವಿಭಾಗದಿಂದ ಹೊರಬಂದಿವೆ. ಮೂಲಭೂತವಾಗಿ ನಿರ್ವಹಣಾ ಪದವೀಧರರನ್ನು ಬಲಪಡಿಸುವುದು ಮತ್ತು ಸಂಘಟನಾ ನಿರ್ವಹಣೆಯ ಮೂಲಗಳನ್ನು ಹೆಚ್ಚಿಸುವ ಬಗ್ಗೆ ಇಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.
ವಿಭಾಗವು ಅನುಸರಿಸುವ ಪಠ್ಯಕ್ರಮವು ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಸಮತೋಲಿತ ಸಂಯೋಜನೆಯನ್ನು ಹೊಂದಿದೆ. ನಿಗದಿತ ಪಠ್ಯಕ್ರಮದ ಜೊತೆಗೆ, ಕೈಗಾರಿಕಾ ಭೇಟಿಗಳು, ಸೆಮಿನಾರ್‌ಗಳು, ಅತಿಥಿ ಉಪನ್ಯಾಸಗಳು, ವಿಶ್ಲೇಷಣೆಗಳು ಮತ್ತು ಕಿರು ಯೋಜನೆಗಳನ್ನು ನಿಯಮಿತವಾಗಿ ಕೈಗೊಳ್ಳಲಾಗುತ್ತದೆ. ನಿಯಮಿತ ಸಮಯದ ನಾಲ್ಕು ಚತುರ್ಮಾಸಳಲ್ಲಿ ಎಂ.ಬಿ.ಎ, ಎಂ.ಬಿ.ಎ (ಪ್ರವಾಸೋದ್ಯಮ ಆಡಳಿತ) ಮತ್ತು ಎಂ.ಬಿ.ಎ (ಅಂತರರಾಷ್ಟ್ರೀಯ ವ್ಯಾಪಾರ) ಯೋಜನೆಗಳ ಜೊತೆಗೆ ವಿಭಾಗದಲ್ಲಿ ಪಿಎಚ್‌ಡಿ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಮತ್ತು ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಈ ಮೂರು ಪದವಿಗಳಿಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ವಿಭಾಗಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ)ಯ ಮಾನ್ಯತೆ ದೊರಕಿದೆ.
ಗುರಿ
ಸಂಶೋಧನೆಯ ಮೂಲಕ ಜ್ಞಾನವನ್ನು ಹೆಚ್ಚಿಸುವುದು ಮತ್ತು ಉನ್ನತ ಗುಣಮಟ್ಟದ ಶಿಕ್ಷಣ, ಅನುಭವ ಮತ್ತು ಮುಂದುವರಿದ ಉದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಸಮಾಜಕ್ಕೆ ಅನುಕೂಲವಾಗುವ ವೃತ್ತಿಗಳೊಂದಿಗೆ ವಿಶಾಲವಾದ ಅವಕಾಶಗಳನ್ನು ಒದಗಿಸುವುದು ನಮ್ಮ ಉದ್ದೇಶ.
ವಿಳಾಸ
ಅಧ್ಯಕ್ಷರು
ವ್ಯವಹಾರ ಆಡಳಿತ ವಿಭಾಗ
ಮಂಗಳೂರು ವಿಶ್ವವಿದ್ಯಾಲಯ
ಮಂಗಳಗಂಗೋತ್ರಿ - 574 199.
ದೂರವಾಣಿ: + 91-824-2287637