About the Centre

ಯಕ್ಷಗಾನ ಅಧ್ಯಯನ ಕೇ0ದ್ರ

ಸ್ಥಾಪನೆ : 2009

ಧ್ಯೇಯೋದ್ದೇಶಗಳು:

ಯಕ್ಷಗಾನ ಅಧ್ಯಯನ ಕೇಂದ್ರದ ಈವರೆಗಿನ ಪ್ರಮುಖ ಶೈಕ್ಷಣಿಕ ಸಾಧನೆಗಳು 2009-2019:
*  ಯಕ್ಷಗಾನ ಅಧ್ಯಯನ ಕೇಂದ್ರವು ಅರುವತ್ತೊಂದು ಯಕ್ಷಮಂಗಳ ಪ್ರಚಾರೋಪನ್ಯಾಸ ಮಾಲಿಕೆಯ  ವಿಶೇಷೋಪನ್ಯಾಸಗಳನ್ನು ಏರ್ಪಡಿಸಿದೆ. 
*  ಎಪ್ಪತ್ತೊಂದು ವಿಚಾರಗೋಷ್ಠಿ/ವಿಚಾರಸಂಕಿರಣ/ ಕಮ್ಮಟ/ ಪ್ರಾತ್ಯಕ್ಷಿಕೆ/ ದಾಖಲಾತಿಗಳನ್ನು ಸಹಯೋಗದ  ನೆಲೆಯಲ್ಲಿ ಮಾಡಲಾಗಿದೆ. 
*  ಯಕ್ಷಮಂಗಳ ಕೃತಿಮಾಲಿಕೆಯ ಮೂಲಕ ಜ್ಞಾನ ಮತ್ತು ತಿಳುವಳಿಕೆಯನ್ನು ತುಂಬಬಲ್ಲ ಹದಿನಾಲ್ಕು ಕೃತಿಗಳನ್ನು ಪ್ರಕಟಿಸಲಾಗಿದೆ. 
*  ಕೇಂದ್ರವು ಮೂವತ್ತು ಯಕ್ಷಗಾನ ಪ್ರದರ್ಶನ/ತಾಳಮದ್ದಳೆಗಳನ್ನು ಏರ್ಪಡಿಸಿದೆ. 
*  ಎಳೆಯ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಸ್ಥಳೀಯ ಶಾಲೆಗಳ  ಆರಂಭದಲ್ಲಿ  5ರಿಂದ 10ನೇ ತರಗತಿಯ ಮೂವತೈದು ಮಕ್ಕಳಿಗೆ ಹಾಗೂ ಸ್ನಾತಕೋತ್ತರ ವಿಭಾಗದ ಸುಮಾರು ಇನ್ನೂರ ಇಪ್ಪತ್ತು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಪ್ರದರ್ಶನವನ್ನು ನೀಡಲಾಗಿದೆ.
*  ಹದಿನೆಂಟು ಮಂದಿ ಯಕ್ಷಗಾನ ಸಾಧಕರಿಗೆ ಕೇಂದ್ರದಿಂದ ಯಕ್ಷಮಂಗಳ ಪ್ರಶಸ್ತಿ, ಐದು ಮಂದಿಗೆ ಕೃತಿ  ಪ್ರಶಸ್ತಿಪ್ರದಾನ ಮಾಡಲಾಗಿದೆ.
*  ಯಕ್ಷವಾಙ್ಮಯ ಗ್ರಂಥಾಲಯದಲ್ಲಿ ಒಟ್ಟು 3,000 ಕೃತಿಗಳನ್ನು ಸಂರಕ್ಷಿಸಿ ಅಧ್ಯಯನಕಾರರಿಗೆ ಸದುಪಯೋಗವಾಗುವಂತೆ ನೋಡಿಕೊಳ್ಳಲಾಗುತ್ತಿದೆ. 
*  200 ದ್ರಶ್ಯ-ಶ್ರವ್ಯ ಕ್ಯಾಸೆಟ್‌ಗಳನ್ನು ಸಂಗ್ರಹಿಸಿಡಲಾಗಿದೆ. ವಿಶೇಷೋಪನ್ಯಾಸ ಮತ್ತು ಸಹಯೋಗದ  ಕಾರ್ಯಕ್ರಮಗಳಿಂದ ನೂರ ಐವತ್ತ ಮೂರು ಕಾಲೇಜುಗಳು ಹಾಗೂ ಸಂಘಸಂಸ್ಥೆಗಳು ಪ್ರಯೋಜನವನ್ನು  ಪಡೆದಿವೆ. 
 

ಇತರ ಯೋಜನೆಗಳು:   

                            
1. ಕಲಾವಿದರ ಮಾಹಿತಿ ಸಂಗ್ರಹ ಯೋಜನೆ
2. ಯಕ್ಷಮಂಗಳ ವೀಡಿಯೋ ಪ್ರದರ್ಶನ ಮಂದಿರ
3. ಯಕ್ಷಮಂಗಳ ವಸ್ತುಸಂಗ್ರಹಾಲಯ
    ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಸುಸಜ್ಜಿತ ಹಾಗೂ ಅನನ್ಯವಾದ ಮಾದರಿ ಯಕ್ಷಮಂಗಳ ವಸ್ತುಸಂಗ್ರಹಾಲಯವಿದೆ. ಇಲ್ಲಿ ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳಕ್ಕೆ ಸಂಬಂಧಿಸಿದಂತೆ  ಯಕ್ಷಗಾನದ ವಿವಿಧ ವೇಷಗಳ ಮಾದರಿಗಳು, ಮುಖವಾಡಗಳು, ವಿವಿಧ ವೇಷಗಳಿಗೆ ಅನುಸಾರವಾಗಿ ವಿವಿಧ ವಿನ್ಯಾಸದ ಕಿರೀಟಗಳು, ಮುಖವರ್ಣಿಕೆಗಳು - ಹೀಗೆ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನಕ್ಕೆ ಸಂಬAಧಿಸಿದAತೆ ಬೇರೆ ಬೇರೆ ಮಾದರಿಗಳ ಪ್ರತಿಕೃತಿಗಳಿವೆ. 
4. ಯಕ್ಷವಾಙ್ಮಯ ಕೇಂದ್ರ
     ಯಕ್ಷಗಾನದ ವಿವಿಧ ಪ್ರಕಾರಗಳಾದ ತೆಂಕುತಿಟ್ಟು, ಬಡಗುತಿಟ್ಟು, ಘಟ್ಟದ ಕೋರೆ, ಮೂಡಲಪಾಯ, ಪಡುವಲಪಾಯ, ಶ್ರೀ ಕೃಷ್ಣ ಪಾರಿಜಾತ ಇತ್ಯಾದಿಗಳಿಗೆ ಸಂಬಂಧಿಸಿದಂತೆ  ಹಾಗೂ ಯಕ್ಷಗಾನಕ್ಕೆ ಸಂವಾದಿಯಾಗಿರುವ ಕೇರಳದ ಕಥಕ್ಕಳಿ, ಮೋಹಿನಿ ಅಟ್ಟಂ, ಆಂಧ್ರದ ವೀದಿನಾಟಕ, ತಮಿಳುನಾಡಿನ ತೆರುಕೂತ್ತು ಇತ್ಯಾದಿ ಪ್ರಕಾರಗಳಿಗೆ ಸಂಬAಧಿಸಿದAತೆ ಈಗಾಗಲೇ ಪ್ರಕಟಗೊಂಡ ಕೃತಿಗಳನ್ನು ಹಾಗೂ ಅಲಭ್ಯ ಕೃತಿಗಳ ನೆರಳಚ್ಚು ಪ್ರತಿಗಳನ್ನು ಒಳಗೊಂಡ ಮಾದರಿ ಗ್ರಂಥಾಲಯವನ್ನಾಗಿ ರೂಪಿಸಲಾಗುತ್ತಿದೆ.