Activities

ಚಟುವಟಿಕೆಗಳು

ಸಮಾಜಕಾರ್ಯ ಅಧ್ಯಯನ ವಿಭಾಗ (ಎಂ.ಎಸ್.ಡಬ್ಲ್ಯೂ):

  • ಮಾರ್ಚ್ ೧೮, ೨೦೧೫ರಂದು ಸಮಾಜಕಾರ್ಯ ದಿನವನ್ನು ಆಚರಿಸಲಾಯಿತು.
  • ೧೮/೦೩/೨೦೧೫ರಂದು ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ನಡೆಯಿತು.
  • ಸರ್ಕಾರೇತರ ಸಂಸ್ಥೆ `ಸ್ವಾಸ್ಥ’ದ ವಿಶೇಷ ಚೇತನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವಿಭಾಗದ ವಿದ್ಯಾರ್ಥಿಗಳಲ್ಲಿ ವಿಕಲಚೇತನರ ಬಗ್ಗೆ ಅರಿವನ್ನು ಮೂಡಿಸಿದರು.
  • ಸ್ವಾಸ್ಥದ ಸಹಯೋಗದೊಂದಿಗೆ ಕ್ರೀಡಾದಿನವನ್ನು (ಪ್ರಪಂಚದಾದ್ಯAತ ಆಚರಿಸಲಾಗುವ ಯುನಿಸಿ ಕೆನಡಿ ಶ್ರೀವರ್ ದಿನ) ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಯಿತು.
  • ವಿಶ್ವವಿದ್ಯಾನಿಲಯದ ಸ್ವಚ್ಛತಾ ಆಂದೋಲನ ಅಭಿಯಾನದ ಅಂಗವಾಗಿ ಸ್ವಚ್ಛ ಬಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
  • ಮೈಸೂರು ವಿಶ್ವವಿದ್ಯಾಲಯದ ಶ್ರೀ ಚಂದ್ರಮೌಳಿ, ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ಡಾ. ನ್ಹೂರ್ ಮುಬಶೀರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಗೋವಿಂದರಾಜ್ ಮತ್ತು ಡಾ. ಮೋಹನ ಸಿಂಘೆ ಅವರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಯಿತು.

 

ವಾಣಿಜ್ಯಶಾಸ್ತ್ರ ವಿಭಾಗ:

  • ಈ ಕೆಳಗಿನ ಆಹ್ವಾನಿತರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು:
  • ೧. ಶ್ರೀ ಮಂಜುನಾಥ್ (ಗಣಕವಿಜ್ಞಾನ ವಿಭಾಗ), ಸಂತ ಫಿಲೋಮಿನಾ ಕಾಲೇಜು, ಮೈಸೂರು
    ೨. ಲೆ| ಬೀನಾ ಎಸ್. ಎನ್. ಕಾವೇರಿ ಕಾಲೇಜು, ಗೋಣಿಕೊಪ್ಪಲು
  • ಕ್ಷೇತ್ರ ಭೇಟಿಯ ಅಂಗವಾಗಿ ವಿದ್ಯಾರ್ಥಿಗಳು ಕೂಡಿಗೆ ಡೈರಿಗೆ ಭೇಟಿ ನೀಡಿದರು.
  • ಸ್ವಾತಂತ್ರö್ಯ ಹಾಗೂ ಗಣರಾಜ್ಯ ದಿನವನ್ನು ಆಚರಿಸಲಾಯಿತು.
  • ಅಕ್ಟೋಬರ್ ೧೦ರಂದು ಕ್ಷೇತ್ರ ಭೇಟಿಯ ಅಂಗವಾಗಿ ಹಾಸನದ ಕೆಎಮ್‌ಎಫ್‌ಗೆ ಭೇಟಿ ನೀಡಲಾಯಿತು.
  • ನವೆಂಬರ್ ೪ರಂದು ವಾಣಿಜ್ಯ ಸಂಘವನ್ನು ಉದ್ಘಾಟಿಸಲಾಯಿತು.
  • ನವೆಂಬರ್ ತಿಂಗಳಿನಲ್ಲಿ ಪಾನ್ ಕಾರ್ಡ್ ಮೇಳವನ್ನು ಆಯೋಜಿಸಲಾಗಿತ್ತು.
  • ಡಿಮ್ಯಾಟ್ ಅಕೌಂಟ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.