Ambigara Chowdaiah Adhyayana Peeta

Ambigara Chowdaiah Adhyayana Peeta

ಧ್ಯೇಯೋದ್ದೇಶಗಳು:

    ಕರ್ನಾಟಕ ಸರಕಾರವು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಸ್ಥಾಪಿಸಿರುವ ಅಂಬಿಗರ ಚೌಡಯ್ಯ ಅಧ್ಯಯನ ಪೀಠವು ಸಂಬಂಧಿತ ಅಧಿನಿಯಮದ ಅನುಮೋದನೆಯೊಂದಿಗೆ ೨೭-೦೩-೨೦೧೨ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಅಧ್ಯಯನ ಪೀಠವು ೧೨ನೇ ಶತಮಾನದ ವಚನಕಾರರಾದ ಅಂಬಿಗರ ಚೌಡಯ್ಯನ ಕುರಿತು ಅಧ್ಯಯನ ಮತ್ತು ಅವರ ವಚನದ ಪ್ರಚಾರ ಹಾಗೂ ಕರ್ನಾಟಕದ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದ ಸಾಮಾಜಿಕ, ಆರ್ಥಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನದ ಉದ್ದೇಶವನ್ನು ಒಳಗೊಂಡಿದೆ. ೨೦೧೨ರಿಂದ ಅಧ್ಯಯನ ಪೀಠವು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ೨೦೧೨ರಿಂದ ೩೧-೦೫-೨೦೧೬ರ ವರೆಗೆ ಪ್ರೊ. ಜಯರಾಜ್ ಅಮೀನ್ ಇವರು ಸಂಯೋಜಕರಾಗಿ ಪೀಠವನ್ನು ಮುನ್ನಡೆಸಿರುತ್ತಾರೆ. ೦೧-೦೬-೨೦೧೬ರಿಂದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ  ಸಂಯೋಜಕರಾಗಿ ಡಾ. ನಾಗಪ್ಪ ಗೌಡ. ಆರ್ ಇವರು ಪೀಠದ ಜವಾಬ್ದಾರಿಯನ್ನು   ನಿರ್ವಹಿಸುತ್ತಿದ್ದಾರೆ. ಪೀಠದ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಪೀಠದ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಕಾರ್ಯಚಟುವಟಿಕೆಗಳು

  • ಅಂಬಿಗರ ಚೌಡಯ್ಯ ಮತ್ತು ಸಾಂಪ್ರದಾಯಿಕ ಮೀನುಗಾರ ಸಮುದಾಯದ ಕುರಿತು ಪ್ರಚಾರೋಪನ್ಯಾಸ ಮತ್ತು ಚರ್ಚೆ
  • ಪೀಠದ ವಿಷಯಕ್ಕೆ ಸಂಬAಧಿತ ಪುಸ್ತಕ ಪ್ರಕಟಣೆ
  • ಪೀಠಕ್ಕೆ ಸಂಬAಧಿತ ವಿಷಯದ ಬಗ್ಗೆ ಅಧ್ಯಯನ

 ಪ್ರಮುಖ ಚಟುವಟಿಕೆ

  • ಅಂಬಿಗರ ಚೌಡಯ್ಯರ ಮತ್ತು ಮೀನುಗಾರರ ಸಮುದಾಯದ ಕುರಿತಾದ ಪುಸ್ತಕ ಮತ್ತು ಅಮೂಲ್ಯವಾದ ಇನ್ನಷ್ಟು ಹೆಚ್ಚು ದಾಖಲೆಗಳನ್ನು ಪೀಠದ ಗ್ರಂಥಾಲಯಕ್ಕೆ ಸಂಗ್ರಹಿಸುವುದು.
  • ಅಂಬಿಗರ ಚೌಡಯ್ಯರ ಜೀವನ ಮತ್ತು ವಚನಗಳು ಹಾಗೂ ಕರಾವಳಿ ಮೀನುಗಾರಿಕಾ ಸಮುದಾಯದ ಕುರಿತು ಹಲವು ಲೇಖಕರಿಂದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕವಾಗಿ ಪ್ರಕಟಿಸುವುದು.
  • ಅಂಬಿಗರ ಚೌಡಯ್ಯ ಮತ್ತು ಮೀನುಗಾರಿಕ ಸಮುದಾಯದ ನಿರ್ದಿಷ್ಟ ವಿಷಯದ ಮೇಲೆ ಸಂಶೋಧನಾತ್ಮಕ ಅಧ್ಯಯನ