CDC

ಕಾಲೇಜು ಅಭಿವೃದ್ಧಿ ಮಂಡಳಿ

ಪ್ರಸ್ತಾವನೆ

ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ(ಸಿಡಿಸಿ)ಯು ಯುಜಿಸಿಯ ವಿವಿಧ ಯೋಜನೆಗಳು/ಸಹಾಯ ಮತ್ತು ಅನುದಾನದ ಮಾಹಿತಿಯನ್ನು ಸಂಯೋಜಿತ ಕಾಲೇಜುಗಳಿಗೆ ಒದಗಿಸುತ್ತದೆ.

 

ಮಿಷನ್(ಧ್ಯೇಯ)

ಸಂಯೋಜಿತ ಕಾಲೇಜುಗಳಿಗೆ ಶೈಕ್ಷಣಿಕ ಮಾಹಿತಿಯನ್ನು ನೀಡುವುದು ಮತ್ತು ಒದಗಿಸುವುದು. ಇದರೊಂದಿಗೆ ಇದು ಯುಜಿಸಿಯ ಯೋಜನೆ/ಅನುದಾನಗಳ ಬಗ್ಗೆ ಸಂಯೋಜಿತ ಕಾಲೇಜುಗಳಿಗೆ ಮಾಹಿತಿಯನ್ನು ನೀಡುತ್ತದೆ.

 

ಮಂಡಳಿಯ ಬಗ್ಗೆ

೧. ಸಂಯೋಜಿತ ಕಾಲೇಜುಗಳ ಮೂಲಸೌಕರ್ಯ, ಸಂಶೋಧನೆ, ಕ್ರೀಡೆ, ವಸತಿನಿಲಯಗಳು ಮತ್ತು ಶಿಕ್ಷಣದ ವರ್ಧನೆಗೆ ಕಾರಣವಾಗುವ ಇತರ ಎಲ್ಲ ಕಾರ್ಯಕ್ರಮಗಳ ಅಭಿವೃದ್ಧಿ ಮತ್ತು ಸುಧಾರಣೆಗೆ ಸಂಬಂಧಿಸಿದಂತೆ  ಮಂಡಳಿಯು ಯುಜಿಸಿಗೆ ಪ್ರಸ್ತಾವನೆಯನ್ನು ಮುಂದಿಡುತ್ತದೆ.
೨. ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜನೆಗೊಳಪಟ್ಟ ಕಾಲೇಜುಗಳಿಗೆ ಯುಜಿಸಿಯಿಂದ ಬರುವ ಮಾಹಿತಿಯನ್ನು ಕಾಲ ಕಾಲಕ್ಕೆ ರವಾನಿಸುವ ಕಾರ್ಯವನ್ನೂ ಮಾಡುತ್ತದೆ.
೩. ಎಫ್‌ಐಪಿ ಕಾರ್ಯಕ್ರಮ, ಯುಜಿಸಿ ಅನುದಾನಿತ ಕಾಲೇಜು ಕಟ್ಟಡಗಳು/ವಸತಿನಿಲಯ/ಇತರೆ  ನಿರ್ಮಾಣಗಳನ್ನು ಕಾಲೇಜು ಅಭಿವೃದ್ಧಿ ಮಂಡಳಿಯು ಇತರ ನಾಮನಿರ್ದೇಶಿತ ಅಧಿಕಾರಿಗಳೊಂದಿಗೆ ಭೇಟಿನೀಡಿ ಪರಿಶೀಲಿಸುತ್ತದೆ.
೪. ಕಾಲೇಜು ಅಭಿವೃದ್ಧಿ ಮಂಡಳಿಯು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೧೯೯೪ರಲ್ಲಿ ಆರಂಭವಾಯಿತು.

ಸೌಲಭ್ಯಗಳು

ಕಾಲೇಜು ಅಭಿವೃದ್ಧಿ ಮಂಡಳಿಯು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಪಕ್ಕದಲ್ಲಿರುವ ಪ್ರತ್ಯೇಕ ಕಟ್ಟಡದಲ್ಲಿದೆ. ಕಚೇರಿಯನ್ನು ಹೊರತುಪಡಿಸಿ ಇದು ತನ್ನ ನಿರ್ದೇಶಕರಿಗಾಗಿ ಒಂದು ಕೋಣೆಯನ್ನು ಒಳಗೊಂಡಿದೆ.