Functions of CDC

ಕಾಲೇಜು ಅಭಿವೃದ್ಧಿ ಮಂಡಳಿಯ ಕಾರ್ಯಗಳು:

೧. ೧೯೫೬ರ ಯುಜಿಸಿ ಕಾಯ್ದೆಯ ೨ಎಫ್ ಮತ್ತು ೧೨ಬಿಗಳ ಅಡಿಯಲ್ಲಿ ಕಾಲೇಜುಗಳನ್ನು ತರಲು ಪೂರ್ವಭಾವಿಯಾಗಿ ಕಾರ್ಯವನ್ನು ನಿರ್ವಹಿಸುವುದು.
೨. ಕಾಲೇಜುಗಳ ಅಭಿವೃದ್ಧಿಗೆ ಸರಿಯಾದ ಯೋಜನೆಯನ್ನು ರೂಪಿಸಿ, ವಿಶ್ವವಿದ್ಯಾನಿಲಯಕ್ಕೆ ಕಾಲೇಜುಗಳ ಸರ್ವತೋಮುಖ ಅಭಿವೃದ್ಧಿಗೆ ಸಂಬAಧಿಸಿದAತೆ ಪ್ರಾದೇಶಿಕ ಅಸಮಾನತೆಗಳನ್ನು ತೊಡೆದು ಹಾಕುವ ಬಗ್ಗೆ ಹಾಗೂ ಸ್ವಾಯತ್ತತೆ ಬಗ್ಗೆ ಸಲಹೆಯನ್ನು ನೀಡುವುದು.
೩. ಶೈಕ್ಷಣಿಕ, ಆಡಳಿತಾತ್ಮಕ, ಆನ್‌ಲೈನ್ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಉಳಿಸಿಕೊಳ್ಳಲು ಕಾಲೇಜುಗಳಿಗೆ ಸಹಾಯ ಮಾಡಿ, ಅಗತ್ಯತೆಗಳು ಮತ್ತು ಅಂತರಗಳನ್ನು ಗುರುತಿಸಿ ಕಾಲೇಜುಗಳು ಅವುಗಳ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
೪. ವಿಶ್ವವಿದ್ಯಾನಿಲಯದ ಸಂಯೋಜಿತ ನೀತಿಯ ತರ್ಕಬದ್ಧಗೊಳಿಸುವಿಕೆ ಮತ್ತು ಅನುಷ್ಠಾನಕ್ಕೆ ಸಂಬAಧಿಸಿದAತೆ ವಿಶ್ವವಿದ್ಯಾನಿಲಯಕ್ಕೆ ಸಹಾಯವನ್ನು ಮಾಡುವುದು.
೫. ಕಾಲೇಜುಗಳನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಸಮೀಪಕ್ಕೆ ತಂದು ಹೆಚ್ಚಿನ ಶೈಕ್ಷಣಿಕ ಸಂವಹನ ಮತ್ತು ಸಹಕಾರಕ್ಕಾಗಿ ಪ್ರಯೋಜನಕಾರಿ ಸಂಪರ್ಕಗಳನ್ನು ಉತ್ತೇಜಿಸುವುದು.
೬. ಮಾಹಿತಿಯನ್ನು ನೀಡುವುದರೊಂದಿಗೆ ಯುಜಿಸಿ ಮತ್ತು ಇತರ ಧನಸಹಾಯ ಆಯೋಗಗಳ ವಿವಿಧ ಅಭಿವೃದ್ಧಿ ಅನುದಾನಗಳು ಮತ್ತು ಯೋಜನೆಗಳಿಗೆ ಪ್ರಸ್ತಾಪಗಳನ್ನು ರೂಪಿಸಲು ಅವರಿಗೆ ಸಹಕರಿಸಿ ಆ ಅನುದಾನಗಳು ಮತ್ತು ಯೋಜನೆಗಳ ಪರಿಣಾಮಕಾರಿ ಬಳಕೆಯ ಬಗ್ಗೆ ಅವರಿಗೆ ಮಾರ್ಗದರ್ಶನವನ್ನು ನೀಡುವುದು.
೭. ಕಾಲೇಜುಗಳಿಗೆ ಭೇಟಿ ನೀಡುವ ಮೂಲಕ ಯುಜಿಸಿ ಮತ್ತು ಇತರ ಧನಸಹಾಯ ಆಯೋಗಗಳ ಅನುದಾನ ಸರಿಯಾಗಿ ಬಳಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಲೇಜುಗಳಿಗೆ ಬಿಡುಗಡೆ ಮಾಡಿದ ಅನುದಾನಕ್ಕೆ ಸಂಬAಧಿಸಿದAತೆ ಬಳಕೆ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಸಲ್ಲಿಸಲು ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜುಗಳ ಯೋಜನೆಗಳು ಮತ್ತು ವರದಿಗಳ ಪ್ರತಿಯನ್ನು ಪರಿಶೀಲಿಸುವುದು.
೮. ಪಿಹೆಚ್.ಡಿ ಮತ್ತು ನಂತರದ ಉನ್ನತ ಅಧ್ಯಯನಕ್ಕಾಗಿ ಯುಜಿಸಿಯ ಬೋಧಕರ ಅಭಿವೃದ್ಧಿ ಕಾರ್ಯಕ್ರಮಗಳು, ಅಂತಾರಾಷ್ಟಿçÃಯ ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ಸಂಶೋಧನ ಬರಹಗಳನ್ನು ಪ್ರಸ್ತುತಪಡಿಸಲು ಪ್ರಯಾಣ ವೆಚ್ಚವನ್ನು ಭರಿಸುವುದು ಮತ್ತು ಇತರ ಧನಸಹಾಯ ಆಯೋಗಗಳ ಸಣ್ಣ ಮತ್ತು ಪ್ರಮುಖ ಸಂಶೋಧನಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕಾಲೇಜುಗಳ ಅಧ್ಯಾಪಕರನ್ನು ಪ್ರೋತ್ಸಾಹಿಸುವುದು.
೯. ಕಾಲೇಜುಗಳು ಪ್ರವೇಶಾತಿಗೆ ಸಂಬAಧಿಸಿದAತೆ ಅಂತರ್ಗತ ನೀತಿಗಳನ್ನು ಅಳವಡಿಸಿಕೊಳ್ಳಲು, ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸೂಕ್ಷö್ಮತೆಯನ್ನು ಬೆಳೆಸಲು ಮತ್ತು ಜ್ಞಾನ ಸಮಾಜದ ಸೃಷ್ಟಿಗೆ ಕೊಡುಗೆಯನ್ನು ನೀಡಲು ಕಾಲೇಜುಗಳನ್ನು ಪ್ರೋತ್ಸಾಹಿಸುವುದು.
೧೦. ಕಾಲೇಜುಗಳಿಗೆ ಸಂಸ್ಥೆಗಳು ನೀಡಿದ ಧನಸಹಾಯದ ಬಗೆಗಿನ ವಿವರಗಳು, ಅವುಗಳ ಬೆಂಬಲ, ಬಳಕೆ ಮತ್ತು ಪರಿಣಾಮಗಳ ಬಗೆಗಿನ ಪೂರ್ಣ ದತ್ತಾಂಶವನ್ನು ನಿರ್ವಹಿಸುವುದು.
೧೧. ಪ್ರತಿ ಕಾಲೇಜುಗಳ ಪೂರ್ಣ ಮಾಹಿತಿ ಹಾಗೂ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಕಾಲೇಜಿನ ಬೋಧಕರ ಸಂಪೂರ್ಣ ವಿವರಗಳ ನಿರ್ವಹಣೆಯನ್ನು ಮಾಡುವುದು.
೧೨. ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಮಾಜಿಕ ಬಾಧ್ಯತೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ವಿಶ್ವವಿದ್ಯಾನಿಲಯವು ಅಗತ್ಯವೆಂದು ಪರಿಗಣಿಸುವ ಯಾವುದೇ ಕಾರ್ಯವನ್ನು ನಿರ್ವಹಿಸುವುದು.