ಕುಲಪತಿಗಳ ಕಕ್ಷೆಯಿಂದ

ನಮ್ಮ  ವಿಶ್ವ ವಿದ್ಯಾನಿಲಯವನ್ನು ತಮ್ಮ ಮುಂದೆ ತೆರೆದಿಡುವುದಕ್ಕೆ ನಾನು ಸಂತೋಷಪಡುತ್ತೇನೆ. ವಿಶ್ವವಿದ್ಯಾನಿಲಯದ ಬೆಳವಣಿಗೆಯ ಹಿಂದೆ ತಮ್ಮಂಥ ಹಿತಾಸಕ್ತರ ಪಾಲ್ಗೊಳ್ಳುವಿಕೆಯನ್ನು ನೆನಪಿಸಿಕೊಳ್ಳುತ್ತಾ ತಮ್ಮನ್ನು ಈ ಸಂದರ್ಭದಲ್ಲಿ ಸ್ವಾಗತಿಸುತ್ತೇನೆ. ಕಳೆದ 39 ವರ್ಷಗಳಿ೦ದ ಮ೦ಗಳೂರು ವಿಶ್ವವಿದ್ಯಾನಿಲಯವು ತನ್ನ ಘನತೆಯನ್ನು ಹೆಚ್ಚಿಸಿಕೊ೦ಡಿದೆ. ಮಾತ್ರವಲ್ಲ, ರಾಷ್ಟ್ರೀಯ ಮೌಲ್ಯಾ೦ಕನ ಮತ್ತು ಮಾನ್ಯತಾ ಪರಿಷತ್ತಿನ ’ಎ’ ಶ್ರೇಣಿಯ ಮಾನ್ಯತೆಯನ್ನು ಪಡೆದು ನಮ್ಮ ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಒ೦ದು ಎ೦ಬುದಾಗಿ ಗುರುತಿಸಿಕೊ೦ಡಿದೆ.