Kanakadasa Research Centre
ಪ್ರಸ್ತಾವನೆ
ಸಂತರಾಗಿ, ದಾರ್ಶನಿಕರಾಗಿ, ಸಾಮಾಜಿಕ ಚಿಂತಕರಾಗಿ, ಸಾಂಸ್ಕೃತಿಕ ನಾಯಕರಾಗಿ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರದು ಅನನ್ಯವಾದ ಸ್ಥಾನ. ಅದರಲ್ಲೂ ಕರಾವಳಿ ತೀರದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚರಿತ್ರೆಯಲ್ಲಿ ಕನಕದಾಸರು ನಿತ್ಯವೂ ಚಿರಸ್ಮರಣೀಯರು. ಮಧ್ಯಯುಗದ ಕನಕದಾಸರ ಸಾಹಿತ್ಯಕ ಅಭಿವ್ಯಕ್ತಿ ಮತ್ತು ಸಾಮಾಜಿಕ ಕಾಳಜಿಗಳು ನಮ್ಮ ಕಾಲದಲ್ಲೂ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಿರುವ ಕಾರಣದಿಂದಲೇ ಕನಕದಾಸರ ಚಿಂತನೆಗಳು ಸಮಕಾಲೀನವಾಗಿಯೂ ಸಂಗತವೆನಿಸಿಕೊAಡಿವೆ. ಈ ಹಿನ್ನೆಲೆಯಲ್ಲಿ ಕನಕದಾಸರ ಬದುಕು ಬರೆಹ ಹಾಗೂ ಅವರ ತತ್ವಚಿಂತನೆಗಳ ಅಧ್ಯಯನ ಹಾಗೂ ಪ್ರಸರಣ, ಪ್ರಕಟಣೆಯ ಉದ್ದೇಶದಿಂದ ಕರ್ನಾಟಕ ಸರಕಾರ ೨೦೦೩ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ೧೦ಲಕ್ಷ ಮೂಲನಿಧಿಯನ್ನಿಟ್ಟು ಕನಕದಾಸರ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಿತ್ತು. ೨೦೦೮ರಲ್ಲಿ ಕರ್ನಾಟಕ ಸರಕಾರ ಒಂದು ಕೋಟಿ ರೂಪಾಯಿ ಮೊತ್ತದ ಮೂಲನಿಧಿಯನ್ನಿಟ್ಟು ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ‘ಕನಕದಾಸ ಸಂಶೋಧನ’ ಕೇಂದ್ರವನ್ನು ಸ್ಥಾಪಿಸಿತು.
ಉದ್ದೇಶ
- ಕನಕದಾಸರ ಬದುಕು, ಬರಹ ಮತ್ತು ಸಂದೇಶಗಳನ್ನು ಪ್ರಸರಣ ಮಾಡುವ ಸಾಹಿತ್ಯಿಕ, ಸಾಂಸ್ಕöÈತಿಕ ಚಟುವಟಿಕೆಗಳನ್ನು ನಡೆಸುವುದು.
- ಕನಕದಾಸರ ಕೃತಿಗಳನ್ನು ಆಧರಿಸಿ ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳಾದ ನಾಟಕ, ರೂಪಕ, ಚಿತ್ರಕಲೆ, ಸಂಗೀತ ಕಾರ್ಯಕ್ರಮ ಮೊದಲಾದ ಪ್ರದರ್ಶನಗಳನ್ನು ಏರ್ಪಡಿಸುವುದು ಮತ್ತು ಈ ಬಗೆಯ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕನಕದಾಸರ ಕೃತಿಗಳು ಹಾಗೂ ಕೀರ್ತನೆಗಳನ್ನಾಧರಿಸಿದ ರೂಪಕಗಳನ್ನು ಏರ್ಪಡಿಸುವುದು.
- ಕನಕದಾಸರ ಜೀವನ ಮತ್ತು ಸಂದೇಶಗಳನ್ನು ಗ್ರಾಮಾಂತರ ಪ್ರದೇಶದ ಜನಸಮುದಾಯಕ್ಕೆ ತಲುಪುವಂತೆ ಮಾಡುವ ಸಲುವಾಗಿ ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜುಗಳಲ್ಲಿ, ಯುವಕ ಯುವತಿ ಮಂಡಲಗಳ ಆಶ್ರಯದಲ್ಲಿ ನಾಟಕ, ಸಂಗೀತ ಇತ್ಯಾದಿ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ಕನಕದಾಸರ ತತ್ತ÷್ವಚಿಂತನೆಗಳ ಕುರಿತು ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ದಕ್ಷಿಣಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ಹಾಗೂ ಗಡಿನಾಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಶಾಲಾ ಕಾಲೇಜುಗಳ, ಸಂಘಸAಸ್ಥೆಗಳ ಸಹಯೋಗದೊಂದಿಗೆ ವ್ಯವಸ್ಥೆಗೊಳಿಸುವುದು. ಈ ಕಾರ್ಯಕ್ರಮವನ್ನು ಹೊರರಾಜ್ಯಗಳಿಗೆ ವಿಸ್ತರಿಸುವುದು.
- ಕನಕದಾಸರು ಪ್ರತಿಪಾದಿಸಿರುವ ಸಾಮಾಜಿಕ, ಸಾಂಸ್ಕöÈತಿಕ ಮೌಲ್ಯ ಮತ್ತು ಚಿಂತನೆಗಳಿಗೆ ಪೂರಕವಾಗಿ ಸಮಕಾಲೀನ ಸಂದರ್ಭದಲ್ಲೂ ಇರುವಂತಹ ದೇಗುಲ ಪ್ರವೇಶದ ನಿಷೇಧ, ಜಾತಿ ವೈಷಮ್ಯದಂತಹ ಸಾಮಾಜಿಕ ಸಮಸ್ಯೆಗಳ ಕುರಿತಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು.
- ಕನಕದಾಸರ ಸಾಹಿತ್ಯ ಕೃತಿಗಳ ಕುರಿತಂತೆ, ಭಕ್ತಿಪಂಥದ ಕುರಿತಂತೆ, ಸಮಕಾಲೀನ ವಿದ್ಯಮಾನಗಳ ಕುರಿತಂತೆ ವಿಚಾರಗೋಷ್ಠಿ, ಕಮ್ಮಟ, ಸಮ್ಮೇಳನಗಳನ್ನು ಏರ್ಪಡಿಸುವುದು.
- ಸಮಕಾಲೀನತೆಯ ಹಿನ್ನೆಲೆಯಲ್ಲಿ ಕನಕದಾಸರ ತತ್ತ÷್ವಚಿಂತನೆಯನ್ನು ದಾಸ ವಾಙ್ಮಯದ ಮತ್ತು ಒಟ್ಟು ಭಾರತೀಯ ಭಕ್ತಿ ಪಂಥದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವುದು.
- ಕನಕದಾಸರ ಬದುಕು ಮತ್ತು ಬರಹಗಳ ಕುರಿತ ಸಂಶೋಧನೆಗಳಿಗೆ ಉತ್ತೇಜನ ನೀಡುವುದು.
- ಕನಕದಾಸರ ಬದುಕು, ಸಾಹಿತ್ಯ ಮತ್ತು ಧೋರಣೆಗಳನ್ನು ವಿಶ್ಲೇಷಿಸುವ ಕೃತಿಗಳನ್ನು ಪ್ರಕಟಿಸುವುದು.
- ಕನಕದಾಸರ ಕೃತಿಗಳನ್ನು ಅವು ಅಲಭ್ಯವಾಗಿದ್ದರೆ ಹಾಗೂ ಅವುಗಳ ಬೇಡಿಕೆಯನ್ನು ಅನುಲಕ್ಷಿಸಿ ಪ್ರಕಟಿಸುವುದು.
- ಕನಕದಾಸರ ಕುರಿತ ಪ್ರಚಾರೋಪನ್ಯಾಸಗಳು, ಸಂಶೋಧನ ಮಹಾಪ್ರಬಂಧಗಳು, ವಿಚಾರ ಸಂಕಿರಣದ ನಡಾವಳಿಗಳು ಮೊದಲಾದವುಗಳನ್ನು ಕೃತಿರೂಪದಲ್ಲಿ ಪ್ರಕಟಿಸುವುದು.
- ಕನಕದಾಸರ ಸಮಗ್ರ ವಾಙ್ಮಯದ ಗ್ರಂಥಾಲಯವನ್ನು ಸ್ಥಾಪಿಸುವುದು. ಈ ಗ್ರಂಥಾಲಯದಲ್ಲಿ ಕನಕದಾಸರ ಕೃತಿಗಳು, ಅವರ ಕೃತಿಗಳ ಕುರಿತು ಅಧ್ಯಯನ ಗ್ರಂಥಗಳು, ನಿಯತಕಾಲಿಕೆಗಳು, ದಾಸ ಪರಂಪರೆಯ ಕೃತಿಗಳು, ಕರ್ನಾಟಕದ ಭಕ್ತಿ ಪರಂಪರೆಯ ವಾಙ್ಮಯ ಮತ್ತು ದಕ್ಷಿಣ ಭಾರತದ ಭಕ್ತಿ ಮತ್ತು ಅಧ್ಯಾತ್ಮ ಪರಂಪರೆಯ ಕೃತಿಗಳನ್ನು ಖರೀದಿಸಿ ಸಂರಕ್ಷಿಸುವುದು.
- ಕನಕದಾಸರ ಅಪೂರ್ವ ಕೃತಿಗಳ ವಿಶೇಷ ಸಂಗ್ರಹ ವ್ಯವಸ್ಥೆಗೊಳಿಸುವುದು.
- ಕನಕ ಅಧ್ಯಯನ ಕುರಿತು ಡಿಪ್ಲೊಮೊ ಕೋರ್ಸನ್ನು ಆರಂಭಿಸುವುದು.