University Library

Mangalore University Library Building

ಮಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಕಟ್ಟಡ

ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ೧೯೮೦ರಲ್ಲಿ ಸ್ಥಾಪಿಸಲಾಯಿತು. ೧೯೯೩ರಲ್ಲಿ ಇದನ್ನು ಸ್ವತಂತ್ರ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ೯೦೦೦ಚದರ ಮೀ. ವಿಸ್ತೀರ್ಣದಲ್ಲಿ ಯೋಜಿಸಲಾದ ಇದು ಪ್ರಸ್ತುತ ೬೨೫೦ ಚದರ ಮೀ. ವಿಸ್ತೀರ್ಣವನ್ನು ಹೊಂದಿದ್ದು, ಅಂತರ್ಜಾಲ ವ್ಯವಸ್ಥೆ, ಸರ್ಕ್ಯುಲೇಶನ್, ಸ್ಟಾಕ್, ನಿಯತಕಾಲಿಕಗಳು, ಉಲ್ಲೇಖ, ಪಠ್ಯಪುಸ್ತಕಗಳು ಮತ್ತು ಭಾಷಾ ವಿಭಾಗಗಳಿಗೆ ಸ್ಥಳಾವಕಾಶವನ್ನು ಕಲ್ಪಿಸಿದೆ. ಈ ಕಟ್ಟಡದಲ್ಲಿ ಕಛೇರಿ, ಸ್ವಾಧೀನ ವಿಭಾಗ, ತಾಂತ್ರಿಕ ವಿಭಾಗ, ಒರಿಯಂಟೇಶನ್ ಹಾಲ್, ಗ್ರಂಥಪಾಲಕರ ಕೊಠಡಿ ಮತ್ತು ಸೈಬರ್ ಲ್ಯಾಬ್ ಕೂಡ ಇವೆ.
ಪ್ರಸ್ತುತ ಗ್ರಂಥಾಲಯದ ಸಂಗ್ರಹದಲ್ಲಿ ೨,೦೫,೩೨೦ ಪುಸ್ತಕಗಳನ್ನು ಹೊಂದಿದ್ದು, ವರದಿಗಳು, ಪ್ರಬಂಧಗಳು ಇತ್ಯಾದಿಗಳನ್ನು ಹೊರತುಪಡಿಸಿ ವಿವಿಧ ವಿಷಯಗಳಿಗೆ ಸಂಬAಧಿಸಿದ ೨೩,೦೮೫ ಹಿಂದಿನ ಸಂಪುಟಗಳನ್ನು ಹೊಂದಿದೆ. ಇದು ಸುಮಾರು ೨೯೩ ಸಂಶೋಧನೆ ಮತ್ತು ಇತರ ವಿಷಯಗಳಿಗೆ ಸಂಬAಧಿಸಿದ ಪತ್ರಿಕೆಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಇದು ಯುಜಿಸಿಯ ಇನ್ಫೋನೆಟ್

              ಮಾಹಿತಿಗಳಿಂದ ಇ-ರೂಪದಲ್ಲಿ ೮೫೦೦+ ಜರ್ನಲ್‌ಗಳ ಪೂರ್ಣ ಪಠ್ಯಕ್ಕೆ ಪ್ರವೇಶವನ್ನು ಹೊಂದಿದೆ. ಜೆ-ಗೇಟ್ ಮಾಹಿತಿಗಳಿಂದ ೪೫೦೦೦+ ಜರ್ನಲ್‌ಗಳ ಪೂರ್ಣ ಪಠ್ಯ ಮಾಹಿತಿಯನ್ನು ಹೊಂದಿದೆ. ಎನ್‌ಬಿಎಚ್‌ಎo, ಯುಎಸ್‌ಐಎಸ್, ಪಾವಂಜೆ ಪೀಠ ಫೊಟೋ ಗ್ಯಾಲರಿ ಮತ್ತು ಶಾಸ್ತಿç ಇಂಡೋ-ಕೆನಡಿಯನ್ ಸಂಸ್ಥೆಯ ಪ್ರತ್ಯೇಕ ಸಂಗ್ರಹಗಳು ಸ್ಟಾಕ್ ಮತ್ತು ಆವರ್ತಕ ವಿಭಾಗಗಳ ವಿವಿಧ ಮೂಲೆಗಳಲ್ಲಿ ಪ್ರದರ್ಶಿಲಾಗಿದೆ. ಈ ಪ್ರಕಟಣೆಗಳು ಬೋಧಕ ವರ್ಗದವರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಇತರ ಬಳಕೆದಾರರಿಗೆ ಉಪಯುಕ್ತವಾಗಿವೆ. ಜನಪ್ರಿಯ ವಿಷಯಗಳ ಮರುಮುದ್ರಣ ಮತ್ತು ಮುದ್ರಣಗಳ ಸಂಗ್ರಹವನ್ನು ಸಹ ಮಾಡಲಾಗುತ್ತಿದೆ. ಪ್ರವೇಶ, ನೇಮಕಾತಿಗಳು, ಪುಸ್ತಕ ವಿಮರ್ಶೆಗಳು, ನಿಮಗಿದು ಗೊತ್ತೆ, ಬೋಧಕರ ಪ್ರಕಟಣೆಗಳು, ವಿದ್ಯಾರ್ಥಿವೇತನಗಳು, ಒರಿಯಂಟೇಶನ್ ಮತ್ತು ರಿಫ್ರೆಶರ್ ಕೋರ್ಸ್ನಂತಹ ಮಾಹಿತಿಗಳು ಮತ್ತು ಇಂದಿನ ವಾರ್ತೆಯನ್ನು ಎರಡೂ ಬದಿಗಳಲ್ಲಿರುವ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಕೆಲಸದ ಸಮಯ

ವಿವರಗಳು

ದಿನಗಳು

ಸಮಯ

ಗ್ರಂಥಾಲಯ ತೆರೆದಿರುವ ಸಮಯ

ವಾರದ ದಿನಗಳು

ಬೆಳಗ್ಗೆ 8:30  to ರಾತ್ರಿ 8:00 

ಭಾನುವಾರ, ಎರಡನೇ ಶನಿವಾರ, ದೀರ್ಘಾವಧಿ ರಜೆ ಮತ್ತು ಇತರ ರಜಾದಿನಗಳು

ಬೆಳಗ್ಗೆ 10:00  to ಸಂಜೆ 5:30 

ಪುಸ್ತಕಗಳನ್ನು ಎರವಲು ಪಡೆಯಬಹುದಾದ ಸಮಯ

ವಾರದ ದಿನಗಳು

ಬೆಳಗ್ಗೆ 9:00  to ಸಂಜೆ 5:30 

ದೀರ್ಘಾವಧಿ ರಜಾದಿನಗಳಲ್ಲಿ

ಬೆಳಗ್ಗೆ 10:30 to ಸಂಜೆ 5:00 

 

ಸದಸ್ಯತ್ವದ ವಿವರಗಳು ಮತ್ತು ಎರವಲು ಪಡೆಯುವ ಅವಕಾಶಗಳು

ಅಧ್ಯಾಪಕರು, ಸಂಶೋಧನ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಸಿಬ್ಬಂದಿಗಳು ಗ್ರಂಥಾಲಯದ ಸದಸ್ಯರಾಗಲು ಅರ್ಹರು. ಹೊರಗಿನ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅಂದರೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಸಂಶೋಧನ ವಿದ್ಯಾರ್ಥಿಗಳು ಮತ್ತು ವ್ಯಕ್ತಿಗಳಿಗೆ ಸದಸ್ಯತ್ವ ಲಭ್ಯವಿದೆ. ಪ್ರತೀ ಸದಸ್ಯರಿಗೆ ಅವರಿಗೆ ಇರುವ ಅವಕಾಶಗಳನ್ನು ಆಧರಿಸಿ ಸದಸ್ಯತ್ವದ ಕಾರ್ಡು ಮತ್ತು ಎರವಲು ಕಾರ್ಡುಗಳನ್ನು ನೀಡಲಾಗುತ್ತದೆ.

ಪ್ರಾಧ್ಯಾಪಕರು

25

ಸಹ ಪ್ರಾಧ್ಯಾಪಕರು

25

ಸಹಾಯಕ ಪ್ರಾಧ್ಯಾಪಕರು

15

ಸಂಶೋಧನ ವಿದ್ಯಾರ್ಥಿಗಳು (ಪೂರ್ಣಕಾಲಿಕ)

10

ಸಂಶೋಧನ ವಿದ್ಯಾರ್ಥಿಗಳು (ಅಂಶಕಾಲಿಕ)

02

ಸ್ನಾತಕೋತ್ತರ ವಿದ್ಯಾರ್ಥಿಗಳು

03

ಸ್ನಾತಕೋತ್ತರ ವಿದ್ಯಾರ್ಥಿಗಳು(ಪ.ಜಾ ಮತ್ತು ಪ.ಪಂ)

03 + 03

ಅತಿಥಿ ಉಪನ್ಯಾಸಕರು

05

ಕಛೇರಿ ಸದಸ್ಯರು

02

 

ಹೊರಗಿನ ಸದಸ್ಯರು

(ಅ) ವೈಯಕ್ತಿಕ:
ವಾರ್ಷಿಕ ೧,೦೦೦/-ರೂ.ಗಳನ್ನು ಪಾವತಿಸುವ ಮೂಲಕ ಯಾರು ಬೇಕಾದರೂ ಗ್ರಂಥಾಲಯದ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಹೀಗೆ ಗ್ರಂಥಾಲಯದ ಸದಸ್ಯತ್ವದ ಕಾರ್ಡನ್ನು ಪಡೆದವರು ಕೆಲಸದ ವೇಳೆಯಲ್ಲಿ ಗ್ರಂಥಾಲಯದ ಸದುಪಯೋಗವನ್ನು ಮಾಡಿಕೊಳ್ಳಬಹುದಾಗಿದೆ. ಆದರೆ ಇವರಿಗೆ ಪುಸ್ತಕಗಳನ್ನು ಎರವಲು ಪಡೆಯುವ ಅವಕಾಶವಿರುವುದಿಲ್ಲ.

(ಬ) ಸಾಂಸ್ಥಿಕ:
ವಾರ್ಷಿಕ ೨೦,೦೦೦/-ರೂ.ಗಳನ್ನು ಪಾವತಿಸುವ ಮೂಲಕ ಸಾಂಸ್ಥಿಕ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಈ ಸಾಂಸ್ಥಿಕ ಸದಸ್ಯತ್ವವು ಸಂಸ್ಥೆಯ ಯಾವುದೇ ಐದು ಸದಸ್ಯರಿಗೆ ಒಂದೇ ಸಮಯದಲ್ಲಿ ಕೆಲಸದ ವೇಳೆಯಲ್ಲಿ ಗ್ರಂಥಾಲಯದ ಸದುಪಯೋಗವನ್ನು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತದೆ. ಆದರೆ ಇವರಿಗೆ ಪುಸ್ತಕಗಳನ್ನು ಎರವಲು ಪಡೆಯುವ ಅವಕಾಶವಿರುವುದಿಲ್ಲ.

 

 ಅಪ್ಲಿಕೇಶನ್ ಡೌನಲೋಡ್

ಹಣ ಪಾವತಿ ಹೊರಗಿನ ಸದಸ್ಯರಿಗೆ 
ವೈಯಕ್ತಿಕ ಸದಸ್ಯತ್ವಕ್ಕಾಗಿ ರೂ. ೧,೦೦೦/- ಮತ್ತು ಸಾಂಸ್ಥಿಕ ಸದಸ್ಯತ್ವಕ್ಕಾಗಿ ರೂ. ೨೦,೦೦೦/-ದ ಡಿಡಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕರ ಹೆಸರಿನಲ್ಲಿ ಮಂಗಳಗAಗೋತ್ರಿಯಲ್ಲಿ ಸಂದಾಯವಾಗುವAತೆ ಸಲ್ಲಿಸಿ.

 

ಸೌಲಭ್ಯಗಳು ಮತ್ತು ಮೂಲಸೌಕರ್ಯ

 

·         ಶ್ರವ್ಯ-ದೃಶ್ಯ ಸೌಲಭ್ಯ

·         ಗಣಕಯಂತ್ರದ ನೆರವಿನಿಂದ ಮರುಪಡೆಯುವಿಕೆ

·         ಪ್ರತಿ ತೆಗೆಯುವ ಸೌಲಭ್ಯ (ಜೆರಾಕ್ಸ್)

·         ವೆಬ್ ಒಪ್ಯಾಕ್(Web OPAC)

·         ಯುಜಿಸಿ ಇನ್ಫೋನೆಟ್ ಡಿಜಿಟಲ್ ಲೈಬ್ರರಿ ಒಕ್ಕೂಟ

·         ದೂರಸ್ಥ ಪ್ರವೇಶ

 

ಸೇವೆಗಳು

  • ಎರವಲು
  • ಪುಸ್ತಕ ಕಾಯ್ದಿರಿಸುವಿಕೆ
  • ಪುಸ್ತಕ ನವೀಕರಣ
  • ಅಂತರ್ ಗ್ರಂಥಾಲಯ ಎರವಲು
  • ಪೇಪರ್ ಕ್ಲಿಪ್ಪಿಂಗ್ಸ್
  • ಓದುಗರ ಮಾರ್ಗದರ್ಶನ
  • ಉಲ್ಲೇಖ
  • ಉಲ್ಲೇಖಸೂಚಿ
  • ಮರುಮುದ್ರಣಗಳು
  • ಇ-ಸಂಪನ್ಮೂಲಗಳು

 

ಅವಧಿ ಮೀರಿದ ಹಿಂತಿರುಗಿಸುವಿಕೆ ಶುಲ್ಕಗಳು

ಪುಸ್ತಕಗಳನ್ನು ಹಿಂದಿರುಗಿಸುವ ಅವಧಿ ಮೀರಿದ ನಂತರ ಅಂದರೆ ನಿಗದಿತ ದಿನಾಂಕದ ನಂತರ ಹಿಂದಿರುಗಿಸಿದ ಪುಸ್ತಕಗಳಿಗೆ ಅವಧಿ ಮೀರಿದುದಕ್ಕಾಗಿ ಶುಲ್ಕಗಳನ್ನು ಸಂಗ್ರಹಿಸಲಾಗುವುದು. 

ಅವಧಿ ಮೀರಿದ ಹಿಂತಿರುಗಿಸುವಿಕೆ ಶುಲ್ಕಗಳು

ಎಷ್ಟು ಶುಲ್ಕ

ನಿಗದಿತ ದಿನಾಂಕದ ನಂತರ

 ದಿನಕ್ಕೆ ಒಂದು ರೂಪಾಯಿಯಂತೆ

 

ಯಾಂತ್ರೀಕರಣ

ವಿಶ್ವವಿದ್ಯಾನಿಲಯದ ಸಮುದಾಯಕ್ಕೆ ಅಂತರ್ಜಾಲ ಸೇವೆಗಳನ್ನು ಒದಗಿಸುವ ಮೂಲಕ ಗ್ರಂಥಾಲಯವನ್ನು ಈಗ ಕ್ಯಾಂಪಸ್ ನೆಟ್‌ವರ್ಕ್ಗಾಗಿ ಸಂಯೋಜಿತ ವ್ಯವಸ್ಥೆಯೊಂದಿಗೆ ಗಣಕೀಕರಿಸಲಾಗಿದೆ. ಗ್ರಂಥಾಲಯದ ರೆಫರೆನ್ಸ್ ಸಂಗ್ರಹವನ್ನು ನಿರಂತರವಾಗಿ ನವೀಕರಿಸಲಾಗುತ್ತದೆ. ಲಿಬ್ಸಿಸ್ ೪೬ನೇ ಆವೃತ್ತಿಯನ್ನು ಬಳಸಿಕೊಂಡು ಗ್ರಂಥಾಲಯದ ಡೇಟಾಬೇಸ್‌ಅನ್ನು ರಚಿಸಲಾಗಿದೆ ಮತ್ತು ಇದು ವೆಬ್ ಒಪ್ಯಾಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೆಳಗಿನ ಅಂತರ್ಜಾಲ ವಿಳಾಸವನ್ನು ಬಳಸಿ ಇದನ್ನು ಉಪಯೋಗಿಸಬಹುದಾಗಿದೆ.

http://218.248.47.185:8080/jopacv11/html/ 

ನಿಯಮಗಳು ಮತ್ತು ನಿಬಂಧನೆಗಳು

  • ಎರವಲು ಕಾರ್ಡುಗಳನ್ನು ವರ್ಗಾಯಿಸಲಾಗುವುದಿಲ್ಲ. 
  • ನಕಲಿ ಎರವಲು ಕಾರ್ಡು/ ಸದಸ್ಯತ್ವ ಕಾರ್ಡು/ ನೋ ಡ್ಯೂ ಪ್ರಮಾಣಪತ್ರಗಳನ್ನು ರೂ. ೧೦/-ನ್ನು ಪಾವತಿಸುವ ಮೂಲಕ ಪಡೆಯಬಹುದಾಗಿದೆ.
  • ಓದುಗರು ಗ್ರಂಥಾಲಯಕ್ಕೆ ಪ್ರವೇಶಿಸುವ ಮುನ್ನ ತಮ್ಮ ಚೀಲಗಳು/ವಸ್ತುಗಳನ್ನು ವಸ್ತುಗಳನ್ನು ಇಡುವ ಜಾಗದಲ್ಲಿ ಇಡಬೇಕಾಗುತ್ತದೆ.
  • ಗ್ರಂಥಾಲಯದ ಒಳಗೆ ಮೊಬೈಲ್ ಫೋನನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಸೇವಾ ಸೌಲಭ್ಯಗಳು, ಪುಸ್ತಕ ಇತ್ಯಾದಿಗಳನ್ನು ದುರುಪಯೋಗಪಡಿಸಿಕೊಂಡಲ್ಲಿ ಗ್ರಂಥಪಾಲಕರು ಸೂಕ್ತ ಕ್ರಮವನ್ನು ಕೈಗೊಳ್ಳುವರು. 
  • ಹೊರಗಿನ/ವೈಯಕ್ತಿಕ ಪುಸ್ತಕಗಳನ್ನು ಗ್ರಂಥಾಲಯದ ಒಳಗೆ ಓದಲು ಅವಕಾಶವಿಲ್ಲ.
  • ಗ್ರಂಥಪಾಲಕರು ಯಾವುದೇ ಪುಸ್ತಕವನ್ನು ಯಾವುದೇ ಸಂದರ್ಭದಲ್ಲಿ ಮರುಸಲ್ಲಿಸಲು ಹೇಳಬಹುದಾಗಿದೆ. 
  • ಗ್ರಂಥಾಲಯದಲ್ಲಿ ಮೌನವನ್ನು ಕಾಪಾಡಿಕೊಳ್ಳಬೇಕಾಗಿದೆ.
  • ಒಂದು ಪುಸ್ತಕ ಕಳೆದು ಹೋದರೆ ಹೊಸ ಪುಸ್ತಕವನ್ನು ಮರಳಿ ಗ್ರಂಥಾಲಯಕ್ಕೆ ತಂದೊಪ್ಪಿಸಬೇಕೇ ಅಥವಾ ದಂಡವನ್ನು ಪಾವತಿಸಬೇಕೇ ಎಂಬುದನ್ನು ನಿರ್ಧರಿಸುವ ಹಕ್ಕು ಗ್ರಂಥಪಾಲಕರಿಗಿದೆ. ದಂಡವನ್ನು ಪುಸ್ತಕದ ಪ್ರಸ್ತುತ ಮೌಲ್ಯಕ್ಕಿಂತ ಆರುಪಟ್ಟು ಮತ್ತು ಹೆಚ್ಚುವರಿಯಾಗಿ ನಿರ್ವಹಣಾ ಶುಲ್ಕವನ್ನು ವಿಧಿಸಲಾಗುತ್ತದೆ.:

 

ಗ್ರಂಥಾಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಉದ್ಯೋಗಿಗಳು

ಹೆಸರು 

ನಾಮಾಂಕಿತ

ಮಿಂಚಂಚೆ

ಡಾ. ಪುರುಷೋತ್ತಮ ಗೌಡ

ವಿಶ್ವವಿದ್ಯಾನಿಲಯದ ಗ್ರಂಥಪಾಲಕರು

mpgowda@gmail.com

ಶ್ರೀ ಎಂ. ಕೆ. ಬದಾಮಿ

ಸಹಾಯಕ ಗ್ರಂಥಪಾಲಕರು

badamikk@rediffmail.com

ಶ್ರೀಮತಿ ಕೆ. ಎಸ್. ಸುಮಂಗಲ

ಸಹಾಯಕ ಗ್ರಂಥಪಾಲಕರು

Sumangalaks33@gmail.com

     

ಶ್ರೀ ಎಂ. ಸಿ. ಜಯಪ್ಪ

ಸಹಾಯಕ ಗ್ರಂಥಪಾಲಕರು

mcjayappa@gmail.com

ಶ್ರೀಮತಿ ಬಿ.ಎಸ್. ಜಯಲಕ್ಷ್ಮಿ

ಸಹಾಯಕ ಗ್ರಂಥಪಾಲಕರು

jayalakshmibs60@gmail.com

ಡಾ. ಕೆ. ಪುಷ್ಪಲತಾ

ಸಹಾಯಕ ಗ್ರಂಥಪಾಲಕರು

pushpalathaas@yahoomail.com

ಶ್ರೀಮತಿ ಶಿಲ್ಪ ಕುಮಾರಿ ಜೈನ್

ಗ್ರಂಥಾಲಯ ಸಹಾಯಕರು

manvijain2010@gmail.com

ಶ್ರೀಮತಿ ಪ್ರೀತಿ

ಗ್ರಂಥಾಲಯ ಸಹಾಯಕರು

preethikrish10@gmail.com

ಶ್ರೀಮತಿ ನಾಗವೇಣಿ

ಗ್ರಂಥಾಲಯ ಸಹಾಯಕರು

vani_prithvi@yahoo.co.in

ಶ್ರೀಮತಿ ಸವಿತ ಕುಮಾರಿ

ಗ್ರಂಥಾಲಯ ಸಹಾಯಕರು

sanvinaik2010@gmail.com

ಶ್ರೀಮತಿ ಉಷಾ

ಗ್ರಂಥಾಲಯ ಸಹಾಯಕರು

usharoopa@yahoo.co.in

ಶ್ರೀಮತಿ ಸುಮನ ಎಸ್. ಜೋಗಿ

ಗ್ರಂಥಾಲಯ ಸಹಾಯಕರು

suma.s.jogi@gmail.com