PG Centre
ಅಧ್ಯಯನ ಕೇಂದ್ರದ ಬಗ್ಗೆ
ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜ್ಞಾನ ಕಾವೇರಿಯು ಕೊಡಗಿನ ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರದಲ್ಲಿ ೨೦೧೪ರಲ್ಲಿ ಆರಂಭವಾಯಿತು. ಪ್ರಾರಂಭದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿನ ಎಫ್ಎಮ್ಕೆಎಮ್ಸಿ ಕಾಲೇಜಿನಲ್ಲಿದ್ದ ಜೈವಿಕ ರಸಾಯನಶಾಸ್ತç ಮತ್ತು ಸೂಕ್ಷö್ಮ ಜೀವವಿಜ್ಞಾನ ಎಂ.ಎಸ್ಸಿ ವಿಭಾಗಗಳನ್ನು ಚಿಕ್ಕಅಳುವಾರಕ್ಕೆ ಸ್ಥಳಾಂತರಿಸಲಾಯಿತು. ಮೊದಲಿಗೆ ಎಂ.ಕಾA ಮತ್ತು ಎಂ.ಎಸ್.ಡಬ್ಲೂö್ಯ ವಿಭಾಗಗಳನ್ನು ಕ್ರಮವಾಗಿ ೩೦ ಮತ್ತು ೧೨ ವಿದ್ಯಾರ್ಥಿಗಳೊಂದಿಗೆ ಆರಂಭಿಸಲಾಯಿತು. ೨೦೧೫-೧೬ನೇ ಸಾಲಿನಲ್ಲಿ ಎಂ.ಎ ಕನ್ನಡ, ಎಂ.ಎ ಇತಿಹಾಸ ಮತ್ತು ಎಂ.ಎ ರಾಜಕೀಯಶಾಸ್ತçಗಳನ್ನು ಪ್ರಾರಂಭಿಸಲಾಯಿತು. ೨೦೧೭ರಲ್ಲಿ ಎಂ.ಎಸ್ಸಿ ಸಸ್ಯಶಾಸ್ತç, ಎಂ.ಎಸ್ಸಿ ರಸಾಯನಶಾಸ್ತç ಮತ್ತು ಎಂ.ಎಸ್ಸಿ ಗಣಕವಿಜ್ಞಾನಗಳು ಕ್ರಮವಾಗಿ ೦೭, ೧೬ ಮತ್ತು ೦೫ ವಿದ್ಯಾರ್ಥಿಗಳೊಂದಿಗೆ ಆರಂಭವಾಯಿತು. ಎಂ.ಎಸ್ಸಿ ಪರಿಸರ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಎಂ.ಎಗಳು ವಿಶ್ವವಿದ್ಯಾನಿಲಯದಿಂದ ಅಂಗೀಕರಿಸಲ್ಪಟ್ಟಿದ್ದು, ಪ್ರಸ್ತುತ ಕೊಡಗಿನ ಜ್ಞಾನ ಕಾವೇರಿ ಆವರಣದಲ್ಲಿ ಒಟ್ಟು ೧೨ ಅಂಗೀಕೃತ ವಿಭಾಗಗಳಿವೆ.