Course Intake
ಸೀಟು ಹಂಚಿಕಾ ವಿಧಾನ: ೩೬ + ೩೪ + ೧೦
ಅಧ್ಯಯನ ವಿಷಯ | ಸೀಟು ಹಂಚಿಕೆ | ಅವಧಿ | ಅರ್ಹತೆ |
---|---|---|---|
ಎಂ.ಎ ಅರ್ಥಶಾಸ್ತ್ರ | 36 + 34 + 10 | ಎರಡು ವರ್ಷಗಳು (ನಾಲ್ಕು ಸೆಮಿಸ್ಟರ್‌ಗಳು) |
ಮಂಗಳೂರು ವಿ.ವಿ ಅಥವಾ ಉಳಿದ ಯಾವುದೇ ವಿ.ವಿಗಳ ಮೂರು ವರ್ಷದ ಪದವಿಯಲ್ಲಿ ಅರ್ಥಶಾಸ್ತçವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿದ ವಿದ್ಯಾರ್ಥಿಗಳು ಇದರಲ್ಲಿ ಕನಿಷ್ಠ ೪೫% (ಪ.ಜಾ/ಪ.ಪಂ/ಪ್ರವರ್ಗ-೧ರ ವಿದ್ಯಾರ್ಥಿಗಳಿಗೆ – ೪೦% ಅಂಕಗಳು) ಅಂಕ ಗಳಿಸಿರಬೇಕು. |
ಸಂಶೋಧನೆ (ಪಿಹೆಚ್.ಡಿ) |
ವಿಶ್ವವಿದ್ಯಾಲಯ ನಿಯಂತ್ರಣದ ಪ್ರಕಾರ |
ಪೂರ್ಣಕಾಲಿಕ ಮತ್ತು ಅರೆಕಾಲಿಕ ಸಂಶೋಧನೆಗೆ ಕ್ರಮವಾಗಿ ಕನಿಷ್ಠ ಮೂರು-ನಾಲ್ಕು ವರ್ಷಗಳು ಮತ್ತು ಗರಿಷ್ಠ ಐದು/ಆರು ವರ್ಷಗಳು.. |
೧. ಮಂಗಳೂರು ವಿ.ವಿ ಅಥವಾ ತತ್ಸಮಾನ ವಿ.ವಿಗಳಿಂದ ಸಂಬAಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡಿ ಅದರಲ್ಲಿ ಕನಿಷ್ಠ ೫೫% ಅಂಕ ಪಡೆದ (ಪ.ಜಾ/ಪ.ಪಂ/ಪ್ರವರ್ಗ-೧ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ – ೫೦% ಅಂಕಗಳು) ವಿದ್ಯಾರ್ಥಿಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.
೨. ೩೧-೦೩-೧೯೯೨ರ ಮೊದಲು ವಿಶ್ವವಿದ್ಯಾನಿಲಯ, ಅದರ ಅಂಗಸAಸ್ಥೆ ಕಾಲೇಜುಗಳಲ್ಲಿ ಸೇವೆಗೆ ಸೇರಿರುವ, ಮತ್ತು ಅದರಲ್ಲಿ ಮುಂದುವರಿಯುತ್ತಿರುವ ಶಿಕ್ಷಕರು ಸ್ನಾತಕೋತ್ತರ ಪದವಿ ಕೋರ್ಸ್ನಲ್ಲಿ ಕನಿಷ್ಠ ೫೦% ಅಂಕಗಳನ್ನು ಹೊಂದಿದ್ದರೆ ಅರ್ಹರಾಗುತ್ತಾರೆ.
೩. ಮಾನ್ಯತೆ ಪಡೆದ ಮಾರ್ಗದರ್ಶಕರ ಅಡಿಯಲ್ಲಿ ವಿದ್ಯಾರ್ಥಿಯು ಸಂಶೋಧನೆಯನ್ನು ಮಾಡಬೇಕು. ಸಂಶೋಧನಾ ಕಾರ್ಯದ ಮುಖ್ಯ ಜವಾಬ್ದಾರಿಯು ಮಾರ್ಗದರ್ಶಕರದ್ದಾಗಿರುತ್ತದೆ. ಸಂಶೋಧನಾ ವಿದ್ಯಾರ್ಥಿಯು ಮಾರ್ಗದರ್ಶಕರ ಮೂಲಕ ತನ್ನ ಸಂಶೋಧನಾ ಮಹಾಪ್ರಬಂಧವನ್ನು ಅಂತಿಮಗೊಳಿಸಿ ಸಲ್ಲಿಸಬೇಕು.
೪. ಸಂಶೋಧನಾ ವಿಷಯವು ಅಂತರ್‌ಶಿಸ್ತೀಯ ಸ್ವರೂಪದ್ದಾಗಿದ್ದರೆ, ಸಂಶೋಧನಾ ವಿದ್ಯಾರ್ಥಿಯು ತನ್ನ ಮಾರ್ಗದರ್ಶಕರ ಒಪ್ಪಿಗೆ ಪಡೆದು, ಸಹ-ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದವರಾಗಿರಬೇಕು.
|