Economics

Department of Economics

 

ಪರಿಚಯ:

               ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿದ್ದಾಗಲೇ ಅರ್ಥಶಾಸ್ತç ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಲಾಗಿತ್ತು. ಮುಂದೆ ೧೯೮೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಚನೆಯಾದ ನಂತರ ಅರ್ಥಶಾಸ್ತçದಲ್ಲಿ ನಡೆಯುತ್ತಿದ್ದ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಿಗೆ ಇನ್ನಷ್ಟು ಬಲ ಬಂದಿತು. ಅರ್ಥಶಾಸ್ತçದಲ್ಲಿ ಎಂ.ಎ, ಎಂ.ಫಿಲ್ ಮತ್ತು ಪಿಹೆಚ್.ಡಿ ಪದವಿಗಳನ್ನು ಈ ವಿಭಾಗವು ನೀಡುತ್ತಿದೆ.
   ಅರ್ಥಶಾಸ್ತç ವಿಭಾಗವು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕರ ಸೇರ್ಪಡೆ/ದಾಖಲಾತಿಯಲ್ಲಿ ಸಂಖ್ಯಾ ಬಾಹುಳ್ಯ ಹೊಂದಿರುವ ಸಮಾಜವಿಜ್ಞಾನ ವಿಭಾಗಗಳ ಪ್ರತಿಷ್ಠಿತ ವಿಭಾಗಗಳಲ್ಲಿ ಒಂದಾಗಿದೆ. ಬ್ಯಾಂಕಿAಗ್ ಮತ್ತು ಹಣಕಾಸು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಪರಿಸರ ಅರ್ಥಶಾಸ್ತç, ನಗರ ಅರ್ಥಶಾಸ್ತç, ದೂರಶಿಕ್ಷಣ, ಸರ್ಕಾರ, ಅಸಂಘಟಿತವಲಯ ಮತ್ತು ಇತರ ಕ್ಷೇತ್ರಗಳಲ್ಲಿ ಸಬ್ಸಿಡಿಶನ್ ನೀತಿಗಳು ಮತ್ತು ಕಾರ್ಮಿಕ ಇತ್ಯಾದಿ ಸಂಶೋಧನಾ ಯೋಜನೆಗಳನ್ನು ಕಾರ್ಪೋರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಐಸಿಎಸ್‌ಎಸ್‌ಆರ್, ಯುಜಿಸಿ ಮತ್ತು ಇಗ್ನೋ ಮುಂತಾದ ವಿವಿಧ ಏಜನ್ಸಿಗಳಿಂದ ಧನಸಹಾಯ ಪಡೆದು ಪೂರ್ಣಗೊಳಿಸಿದೆ.
೨೦೦೮-೦೯ರಿಂದ ಯುಜಿಸಿಯ ನವೀನ ಯೋಜನೆಯಡಿ ‘ವಿಮಾ/ವಿಮೆಯ ಅರ್ಥಶಾಸ್ತç’ದ ಕುರಿತ ವಿಶೇಷ ಪ್ರಬಂಧವನ್ನು ಪರಿಚಯಿಸಲಾಗಿದೆ. ವಿಭಾಗ ನೀಡುವ ಅರ್ಥಶಾಸ್ತç ಎಂ.ಎ ಹಾಗೂ ಪಿಹೆಚ್.ಡಿ ಪದವಿಗಳಿಗೆ ವಿದ್ಯಾರ್ಥಿಗಳು ಆಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಪ್ರಸ್ತುತ ಅರ್ಥಶಾಸ್ತç ವಿಭಾಗವು ಕಾರ್ಪೋರೇಶನ್ ಬ್ಯಾಂಕ್ ಪೀಠವನ್ನು ಹೊಂದಿದ್ದು, ಇದರ ಮೂಲಕ ನಡೆಸುವ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಕಾರ್ಪೋರೇಶನ್ ಬ್ಯಾಂಕಿನಿAದ ಹಣವನ್ನು ಪಡೆಯುತ್ತದೆ. ಬ್ಯಾಂಕುಗಳ ಖಾಸಗೀಕರಣ, ಬ್ಯಾಂಕಿAಗ್ ಕ್ಷೇತ್ರದ ಸುಧಾರಣೆಗಳು, ಹಣಕಾಸು, ಕೃಷಿ ಮತ್ತು ಇತರ ಕ್ಷೇತ್ರಗಳಿಗೆ ಸಂಬAಧಿಸಿದAತೆ ಈ ಪೀಠವು ಸಂಯೋಜಕರ/ಅಧ್ಯಕ್ಷರ ಮಾರ್ಗದರ್ಶನದಲ್ಲಿ ಹಲವು ಅಧ್ಯಯನಗಳನ್ನು ಕೈಗೊಂಡಿದೆ.
ಆರ್‌ಬಿಐ ಮತ್ತಿತರ ಹೆಸರಾಂತ ಅರ್ಥಶಾಸ್ತಿçÃಯ ಸಂಶೋಧನಾ ಸಂಸ್ಥೆಗಳ ಪ್ರಸಿದ್ಧ ಅರ್ಥಶಾಸ್ತಿçÃಯ ತಜ್ಞರನ್ನು ಆಹ್ವಾನಿಸುವ ಮೂಲಕ ಹಲವಾರು ಸಮ್ಮೇಳನಗಳು, ವಿಚಾರ ಸಂಕಿರಣಗಳು, ಮಾಹಿತಿ ಕಾರ್ಯಾಗಾರಗಳು ಇತ್ಯಾದಿಗಳನ್ನು ನಡೆಸಲಾಗಿದ್ದು, ಸಮ್ಮೇಳನಗಳ ನಡಾವಳಿಗಳನ್ನು ಸಂಪಾದಿತ ಪುಸ್ತಕಗಳ ಸಂಪುಟಗಳನ್ನಾಗಿಸಿ ಹೊರತರಲಾಗಿದೆ.
ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಬೆಂಗಳೂರು, ಸಿಎಂಡಿಆರ್ ಧಾರವಾಡ, ಸೆಂಟರ್ ಫಾರ್ ಸೋಶಿಯಲ್ ಎಕ್ಸ್ಕ್ಲೂಸಿವ್ ಅಂಡ್ ಇನ್‌ಕ್ಲೂಸಿವ್ ಪಾಲಿಸಿ, ಇತ್ಯಾದಿ ಇತರ ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಅರ್ಥಶಾಸ್ತç ವಿಭಾಗದ ಬೋಧಕ ವರ್ಗದವರು ವಿವಿಧ ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಂಬೇಡ್ಕರ್ ಅಧ್ಯಯನ, ಮಂಗಳೂರು, ಸಮಗ್ರ ಜಿಲ್ಲಾ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವ ಸ್ಥಳೀಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ವಿಭಾಗದ ಅಧ್ಯಾಪಕ ಸದಸ್ಯರು ವಿವಿಧ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ವಿಭಾಗದ ಬೋಧಕವರ್ಗವು ಇದುವರೆಗೆ ಸುಮಾರು ೭೨ ಸಂಶೋಧನೆಗಳಿಗೆ ಮತ್ತು ೧೦ ಎಂ.ಫಿಲ್‌ಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಇಲ್ಲಿ ವ್ಯಾಸಂಗ ಮಾಡಿದ ವಿಭಾಗದ ವಿದ್ಯಾರ್ಥಿಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟ, ಕರ್ನಾಟಕ ರಾಜ್ಯಮಟ್ಟ ಎರಡರಲ್ಲೂ ಅತಿ ಹೆಚ್ಚು ಮಂದಿ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು ೪೫ ವಿದ್ಯಾರ್ಥಿಗಳು ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಕೆಲವರು ರಾಷ್ಟçಮಟ್ಟದ ಬ್ಯಾಂಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಳಾಸ :
ಅಧ್ಯಕ್ಷರು,
ಅರ್ಥಶಾಸ್ತ್ರ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ – ೫೭೪೧೯೯.
ದಕ್ಷಿಣ ಕನ್ನಡ ಜಿಲ್ಲೆ.
ದೂರವಾಣಿ: +91-824-2287372
ಫ್ಯಾಕ್ಸ್: +91-824-2287367, 2287424

ಮಿಂಚಂಚೆ:economics@mangaloreuniversity.ac.in