Kodava Peetha

Kodava Peetha

ಪ್ರಸ್ತಾವನೆ:

           ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸ್ಥಾಪನೆಯು ಒಂದು ಐತಿಹಾಸಿಕ ಮಹತ್ವವನ್ನು ಪಡೆದ ಬೆಳವಣಿಗೆಯೆನ್ನಬಹುದು. ೧೯೮೦ರಲ್ಲಿ ಜೀವತಳೆದ ಮಂಗಳೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪ್ತಿಯಲ್ಲಿ ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡಿದ್ದು, ಕೊಡಗು-ಕೇಂದ್ರಿತ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಒಂದು ಪೀಠದ ಸ್ಥಾಪನೆಯ ಚಿಂತನೆ ಆರಂಭದಿAದಲೇ ಚಾಲ್ತಿಯಲ್ಲಿತ್ತು. ೧೯೯೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮಡಿಕೇರಿಯ ಸರ್ಕಾರಿ ಕಾಲೇಜನ್ನು ಪಡೆದುಕೊಂಡು ಅದನ್ನು ತನ್ನ ಘಟಕ ಕಾಲೇಜನ್ನಾಗಿ ಪರಿವರ್ತಿಸಿದ್ದು ಕೂಡ ನಾಡಿನ ಇತಿಹಾಸದಲ್ಲಿ ಬಹಳ ಮುಖ್ಯ ಬೆಳವಣಿಗೆಯಾಯಿತು. ವಿವಿಧ ಜಾತಿ ಹಾಗೂ ಬುಡಕಟ್ಟುಗಳ, ವಿಶಿಷ್ಟ ಸಾಂಸ್ಕೃತಿಕ ಪರಂಪರೆಗಳ, ಗಿರಿಕಾನನಗಳ ನಾಡಾದ ಕೊಡಗಿನ ಸಾಂಸ್ಕೃತಿಕ ಜೀವನದ ಅಧ್ಯಯನಕ್ಕಾಗಿ ಪೀಠವೊಂದರ ಸ್ಥಾಪನೆಗಾಗಿ ಪ್ರೊ. ಕೆ.ಎಂ. ಕಾವೇರಿಯಪ್ಪನವರು ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಕೋರಿಕೆಯನ್ನು ಸಲ್ಲಿಸಿದಾಗ ಅದಕ್ಕೆ ಪೂರಕವಾಗಿ ಸ್ಪಂದಿಸಿದ ಸರ್ಕಾರವು ಕೊಡವ ಪೀಠವನ್ನು ಮಂಜೂರು ಮಾಡಿ ಅದಕ್ಕೆ ಮೂಲ ಧನವನ್ನು ನೀಡಿತು ಮತ್ತು ಅದರಿಂದ ಬರುವ ಬಡ್ಡಿಯಿಂದ ಪೀಠದ ಕಾರ್ಯಗಳನ್ನು ನಡೆಸಲು ಸೂಚನೆ ನೀಡಿತು. ಅಂತೆಯೇ ಪೀಠವು ಮಾರ್ಚ್ ೨೭, ೨೦೦೮ರಲ್ಲಿ ಅಸ್ತಿತ್ವಕ್ಕೆ ಬಂದಿತು.
                  ಭಾರತದ ಒಂದು ಸಣ್ಣ ಜಿಲ್ಲೆಯಾಗಿರುವ ಕೊಡಗು, ತನ್ನ ಜೈವಿಕ ವೈವಿಧ್ಯತೆ, ಭೌಗೋಳಿಕ ವಿಶಿಷ್ಟತೆಗಳಿಗೆ, ಜನಾಂಗಿಕ ವಿಶೇಷತೆಗೆ, ಸಮಾಜಶಾಸ್ತಿçÃಯ ಹಾಗೂ ನರಕುಲಶಾಸ್ತಿçÃಯ ವಿವಿಧತೆಗೆ, ವಿಶಿಷ್ಟ ಭಾಷಾವಾರು ಲಕ್ಷಣಗಳಿಗೆ, ಶ್ರೀಮಂತ ಜಾನಪದೀಯ ಪರಂಪರೆ ಮುಂತಾದ ಅಂಶಗಳಿಗೆ ಪ್ರಸಿದ್ದವಾಗಿದೆ. ಹೀಗಾಗಿ, ಕೊಡಗು ಯಾವುದೇ ಸಂಶೋಧಕ, ಇತಿಹಾಸಕಾರ ಅಥವಾ ಸಮಾಜಶಾಸ್ತçಜ್ಞನಿಗೆ ಅಸಕ್ತಿದಾಯಕವಾದ ಅಧ್ಯಯನದ ಕ್ಷೇತ್ರವನ್ನು ಒದಗಿಸುತ್ತದೆ.
                  ಕೊಡಗನ್ನು ವಿವಿಧ ದೃಷ್ಟಿಕೋನಗಳಿಂದ ವಿಮರ್ಶಾತ್ಮಕವಾಗಿ ಸಂಶೋಧಿಸಿ, ಅನ್ವೇಷಿಸಿ, ಅಧ್ಯಯನ ಮಾಡಿ, ಆ ಮೂಲಕ ಅಪಾರ ಮಾಹಿತಿಯನ್ನು ಸೃಷ್ಟಿಸುವ ಘನ ಉದ್ದೇಶ ಪೀಠದ್ದಾಗಿರುತ್ತದೆ. ಅಧುನಿಕ ಸಂಸ್ಕೃತಿಯ ಪ್ರಭಾವದ ಅಲೆಗಳಲ್ಲಿ ಮಾಯವಾಗುತ್ತಿರುವ ವಿವಿಧ ಬುಡಕಟ್ಟು-ಪಂಗಡಗಳ ಸಾಂಸ್ಕೃತಿಕ ಪರಂಪರೆಗಳನ್ನು ದಾಖಲಿಸಿ, ಆ ಮೂಲಕ ಇಂದಿನ ಹಾಗೂ ಮುಂದಿನ ಜನಾಂಗಗಳಿಗೆ ಅವುಗಳ ಕುರಿತು ಅರಿವನ್ನು ಮೂಡಿಸುವುದು ಇದರ ಕಾರ್ಯಗಳಲ್ಲೊಂದಾಗಿದೆ. ಸ್ವಾತಂತ್ರö್ಯಪೂರ್ವ ಕಾಲದಿಂದಲೂ ಇಂದಿನವರೆಗೆ ಕೊಡಗಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಪರಂಪರೆಗಳ ವಿಕಸನದ ವಿವಿಧ ಮಜಲುಗಳನ್ನು ದಾಖಲಿಸಿ ಮಾಹಿತಿ ಸೃಷ್ಟಿಸುವುದು ಕೂಡ ಇದರ ಉದ್ದೇಶಗಳಲ್ಲಿ ಸೇರಿದೆ.
                   ಪೀಠದ ಶೀರ್ಷಿಕೆಯೇ ಹೇಳುವಂತೆ, ಪೀಠದ ಮುಖ್ಯ ಒತ್ತು ಸಾಂಸ್ಕೃತಿಕ ಅಧ್ಯಯನದ ಕುರಿತು ‘ಸಂಸ್ಕೃತಿ’ ಎನ್ನುವುದು ಒಂದು ಜನ ಸಮೂಹದ ಒಟ್ಟಾದ ಜೀವನ ಪದ್ದತಿ, ಜೀವನ ಶೈಲಿ. ಸಮೂಹವು ಬಳಸುವ ಭಾಷೆ, ಅದರ ಕಲೆ, ವಿಜ್ಞಾನ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳು, ಯೋಚಿಸುವ ಶೈಲಿ, ಜೀವನದೃಷ್ಠಿ, ಪಾರಮಾರ್ಥಿಕ ನಂಬಿಕೆಗಳು ಇತ್ಯಾದಿಗಳನ್ನು ಅದು ಒಳಗೊಂಡಿರುತ್ತದೆ. ಸಂಸ್ಕೃತಿಯೆAದರೆ ಒಂದು ಜನಾಂಗದ ಸಂಚಿತ ಜ್ಞಾನ, ಅನುಭವ ಮತ್ತು ಮೌಲ್ಯಗಳು ಸಂಸ್ಕೃತಿ ಒಂದು ಜನಸಮೂಹಕ್ಕೆ ತನ್ನದೇ ಆದ ಗುರುತನ್ನು, ಅನನ್ಯತೆಯನ್ನು ನೀಡುತ್ತದೆ. ಕೊಡವ ಪೀಠವು ಕೊಡಗಿನ ಭೌಗೋಳಿಕ ಹಾಗೂ ಪ್ರಾಕೃತಿಕ ಸನ್ನಿವೇಶದಲ್ಲಿ ವಿಕಾಸಗೊಂಡ, ಕೊಡವ ಭಾಷೆಯನ್ನಾಡುವ ಎಲ್ಲಾ ಜಾತಿ, ಬುಡಕಟ್ಟುಗಳ ಐತಿಹಾಸಿಕ, ಸಾಂಸ್ಕೃತಿಕ ಅನುಭವಗಳನ್ನು ಸಂಶೋಧನೆ ಹಾಗೂ ಅಧ್ಯಯನ ಮಾಡಿ ಅವುಗಳನ್ನು ದಾಖಲಿಸುತ್ತಾ ಸಂರಕ್ಷಿಸಲು ಪ್ರಯತ್ನಪಡುತ್ತದೆ ಎನ್ನಬಹುದು.ಕೊಡವ ಪೀಠವು ಈ ರೀತಿಯಲ್ಲಿ ಒಂದೇ ಭಾಷೆಯನ್ನಾಡುವ ಜನಾಂಗದ ಒಟ್ಟಾರೆ ಜ್ಞಾನ ಹಾಗೂ ಅನುಭವದ ಉಗ್ರಾಣವಾಗಲಿದೆ.