ಕೊಡವ ಭಾಷಿಕರ ಇತಿಹಾಸವನ್ನು ಅಧ್ಯಯನ ಮಾಡುವುದು ಮತ್ತು ಆ ಇತಿಹಾಸವನ್ನು ಕಟ್ಟಲು ಇರುವ ಶ್ರೀಮಂತ ಪ್ರಾಚ್ಯವಸ್ತು ಹಾಗೂ ಸಾಹಿತ್ಯಿಕ ಮೂಲಗಳನ್ನು ಕಂಡುಹಿಡಿಯುವುದು.
ಕೊಡಗಿನ ಸಮಾಜದ ವೈವಿಧ್ಯಮಯ, ಜನಾಂಗಿಕ ಹಾಗೂ ಸಾಮಾಜಿಕ ಅಂಶಗಳನ್ನು ಪರಿಶೋಧಿಸಿ ದಾಖಲಿಸುವುದು.
ಈ ಪ್ರದೇಶದ ಧಾರ್ಮಿಕ ನಂಬಿಕೆಗಳು, ಆಚರಣೆಗಳು, ಜಾನಪದ ಪದ್ಧತಿಗಳು ಹಾಗೂ ಪ್ರದರ್ಶನ ಕಲೆಗಳನ್ನು ಅಧ್ಯಯನ ಮಾಡುವುದು.
ಕೊಡವ ಭಾಷೆ ಹಾಗೂ ಸಾಹಿತ್ಯ (ಮೌಖಿಕ ಹಾಗೂ ಲಿಖಿತ)ವನ್ನು ಅಧ್ಯಯನ ಮಾಡುವುದು ಹಾಗೂ ಆ ಜನರ ಸಾಂಸ್ಕೃತಿಕ ಅಸ್ಮಿತೆ ಹಾಗೂ ಸಾಧನೆಗಳನ್ನು ಎತ್ತಿ ಹಿಡಿಯುವುದು.
ಕೊಡವ ಜನಾಂಗಗಳ ಕುರಿತು ಸಂಶೋಧನಾಜನ್ಯ ಲೇಖನಗಳ ಹೊತ್ತಿಗೆಗಳ ಪ್ರಕಟಣೆ ಮತ್ತು ಬಿಡುಗಡೆ.
ಕೊಡವ ಸಂಸ್ಕೃತಿ, ಇತಿಹಾಸ, ಸಾಹಿತ್ಯ ಮುಂತಾದುವುಗಳಿಗೆ ಸಂಬAಧಿಸಿದAತೆ ವಿಚಾರ ಸಂಕಿರಣ, ಪ್ರಚಾರೋಪನ್ಯಾಸ, ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು
ಕೊಡವ ಜನಾಂಗಗಳಿಗೆ ಸಂಬAಧಿಸಿದ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವುದು ಹಾಗೂ ಇದುವರೆಗೆ ಹೊರಬಂದಿರುವ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಹಾಗೂ ಪತ್ರಾಗಾರವನ್ನು ಸ್ಥಾಪಿಸಿ ಸಂಶೋಧನೆಗೆ ಇಂಬು ನೀಡುವುದು.
ಹೀಗೆ ಹಲವು ಧ್ಯೆಯೋದ್ಧೇಶಗಳ ಸಾಧನೆಗಾಗಿ ಕೊಡವ ಪೀಠವು ಕಾರ್ಯನಿರ್ವಹಿಸುತ್ತಿದೆ.